ಪ್ರಕಟಣಾ ದಿನಾಂಕ:
05 NOV 2026 2:30PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಪ್ರದರ್ಶನ 2026' ಕಾರ್ಯಕ್ರಮದಲ್ಲಿ ರೈಲ್ವೆ ಸಚಿವಾಲಯಕ್ಕೆ ಪ್ರತಿಷ್ಠಿತ 'ಪಿಎಂ ಸೂರ್ಯ ಘರ್ ಎಕ್ಸಲೆನ್ಸ್ ಅವಾರ್ಡ್' ಅನ್ನು ನೀಡಿ ಗೌರವಿಸಿದರು.

ರೈಲ್ವೆ ಸಚಿವಾಲಯವು 'ಪಿಎಂ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ'ಯಡಿಯಲ್ಲಿ, "ಕೇಂದ್ರ ಸಚಿವಾಲಯಗಳು/ಇಲಾಖೆಗಳಿಂದ ಗರಿಷ್ಠ ಸಂಖ್ಯೆಯ ಕಟ್ಟಡಗಳಲ್ಲಿ ಸೌರಶಕ್ತಿ ವ್ಯವಸ್ಥೆ ಅಳವಡಿಕೆ" ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ರಾಷ್ಟ್ರಮಟ್ಟದಲ್ಲಿ ಒಂದು ಸ್ಫೂರ್ತಿದಾಯಕ ಮಾದರಿಯಾಗಿ ಹೊರಹೊಮ್ಮಿದೆ.
ದೇಶಾದ್ಯಂತ ಸೌರ ಮೇಲ್ಛಾವಣಿ ವ್ಯವಸ್ಥೆಗಳನ್ನು ಅಳವಡಿಸಲು ರೈಲ್ವೆ ಸಚಿವಾಲಯವು 15,868 ಕಾರ್ಯಸಾಧುವಾದ ಕಟ್ಟಡಗಳನ್ನು ಗುರುತಿಸಿದೆ. ಆ ಪೈಕಿ, ಗುರುತಿಸಲಾದ ಒಟ್ಟು ಕಟ್ಟಡಗಳಲ್ಲಿ ಶೇಕಡ 79 ರಷ್ಟು ಅಂದರೆ 12,495 ಕಟ್ಟಡಗಳಲ್ಲಿ ಈಗಾಗಲೇ ಸೌರ ಮೇಲ್ಛಾವಣಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಅಲ್ಲದೆ, 424 ಮೆಗಾವ್ಯಾಟ್ ಗುರಿಯಲ್ಲಿ, ಸಚಿವಾಲಯವು ಈಗಾಗಲೇ 351 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಗಳನ್ನು ಕಾರ್ಯಚರಣೆಗೊಳಿಸಿದೆ.
ರಾಷ್ಟ್ರಮಟ್ಟದಲ್ಲಿ 77 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಗುರುತಿಸಲಾದ 39,135 ಕಟ್ಟಡಗಳ ಪೈಕಿ, 25,984 ಕಟ್ಟಡಗಳಲ್ಲಿ (ಶೇಕಡ 66 ರಷ್ಟು) ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ರಾಷ್ಟ್ರೀಯ ಸಾಧನೆಯಲ್ಲಿ ರೈಲ್ವೆ ಸಚಿವಾಲಯವು ಗಮನಾರ್ಹ ಕೊಡುಗೆ ನೀಡಿದೆ.
ಭಾರತಕ್ಕೆ ಸ್ವಚ್ಛ, ಇಂಧನ-ದಕ್ಷ ಮತ್ತು ಸುಸ್ಥಿರ ಭವಿಷ್ಯವನ್ನು ರೂಪಿಸುವ ಬದ್ಧತೆ ಪುನರುಚ್ಚರಿಸಿರುವ ರೈಲ್ವೆ ಸಚಿವಾಲಯವು, ಮಾರ್ಚ್ 2027 ರೊಳಗೆ ಉಳಿದ ಎಲ್ಲಾ ಸೂಕ್ತ ಕಟ್ಟಡಗಳಲ್ಲೂ ಸೌರ ಮೇಲ್ಛಾವಣಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ದೃಢಸಂಕಲ್ಪವನ್ನು ಹೊಂದಿದೆ.
*****