ಪ್ರಕಟಣಾ ದಿನಾಂಕ:
03 NOV 2026 8:45AM by PIB Bengaluru
48 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕ್ಷಿಪ್ರ ಹಾಗೂ ಸುಸಂಘಟಿತ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು ಅಜಿನಿ ಎಂಬ ಮೀನುಗಾರಿಕಾ ಹಡಗನ್ನು ಶಸ್ತ್ರಸಜ್ಜಿತ ಕಡಲ್ಗಳ್ಳರ ವಶದಿಂದ ಯಶಸ್ವಿಯಾಗಿ ಮುಕ್ತಗೊಳಿಸಿದೆ. ಈ ಕಾರ್ಯಾಚರಣೆಯು ಎಲ್ಲಾ 20 ಸಿಬ್ಬಂದಿಯನ್ನು ಯಾವುದೇ ಸಾವು ನೋವು ಅಥವಾ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸುವ ಮೂಲಕ ಯಶಸ್ವಿಯಾಗಿ ಪೂರ್ಣಗೊಂಡಿತು.
ಅಜಿನಿ ಮೀನುಗಾರಿಕಾ ಹಡಗನ್ನು ಕಳೆದ ತಿಂಗಳ ಆರಂಭದಲ್ಲಿ ಸೋಮಾಲಿಯಾದ ಈಶಾನ್ಯ ಕರಾವಳಿಯ ಸಮೀಪ ಶಸ್ತ್ರಸಜ್ಜಿತ ಕಡಲ್ಗಳ್ಳರ ಗುಂಪೊಂದು ಅಪಹರಿಸಿರುವುದಾಗಿ ವರದಿಯಾಗಿತ್ತು. ಈ ಅಪಹರಣವು ಮಹತ್ತರ ಸಾಗರ ಭದ್ರತಾ ಬೆದರಿಕೆಯನ್ನು ಉಂಟುಮಾಡಿತ್ತು, ಏಕೆಂದರೆ ಈ ಹಡಗನ್ನು ಈ ಪ್ರದೇಶದಲ್ಲಿನ ವಾಣಿಜ್ಯ ಹಡಗುಗಳ ಮೇಲೆ ಮುಂದೆ ಮಾಡಲಿರುವ ದಾಳಿಗಳನ್ನು ನಡೆಸಲು ‘ಮದರ್ ಶಿಪ್’ ಅಂದರೆ ದೊಡ್ಡ ಹಡಗನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇತ್ತು.
ಈ ಪರಿಸ್ಥಿತಿಗೆ ಸ್ಪಂದಿಸಿದ, ಭಾರತೀಯ ನೌಕಾಪಡೆಯು ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದ ಯುದ್ಧನೌಕೆಗೆ ಮಧ್ಯಪ್ರವೇಶಿಸುವ ಸೂಚನೆ ನೀಡಿತು. ಇದಕ್ಕೆ ಸಮುದ್ರ ವಿಚಕ್ಷಣಾ ವಿಮಾನವನ್ನೂ ಬಳಸಿಲಾಯಿತು. ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದ ಈ ವ್ಯವಸ್ಥೆಗಳು ನಿರಂತರ ಕಣ್ಗಾವಲಿನ ಮೂಲಕ ಹಡಗನ್ನು ಪತ್ತೆಹಚ್ಚಿ, ಅದರ ಚಲನವಲನಗಳನ್ನು ಗಮನಿಸಿ, ಅದರ ಚಲನವಲನವನ್ನು ನಿಯಂತ್ರಿಸಲು ಮತ್ತು ತಪ್ಪಿಸಿಕೊಳ್ಳುವುದನ್ನು ತಡೆಯಲು ಸಮರ್ಪಕವಾದ ನಾನ್-ಕೈನೆಟಿಕ್ ಕ್ರಮಗಳನ್ನು ಅನುಸರಿಸಿವೆ.
ಭಾರತೀಯ ವಾಯುಪಡೆಯ (ಐಎಎಫ್) ಸಿ-17 ವಿಮಾನದ ಮೂಲಕ ನಿಖರವಾದ ಏರ್ ಡ್ರಾಪ್ ಮೂಲಕ ಮೆರೈನ್ ಕಮಾಂಡೋಗಳ ತಂಡವನ್ನು ನಿಯೋಜಿಸಲಾಯಿತು
ಕ್ಷಿಪ್ರ ಮತ್ತು ಸುಸಂಘಟಿತ ಯುದ್ಧತಂತ್ರದ ಕಾರ್ಯಾಚರಣೆಯನ್ನು ನಡೆಸಿದ ಭಾರತೀಯ ನೌಕಾಪಡೆಯು ಹಡಗಿನ ಮೇಲೆ ನಿಯಂತ್ರಣ ಸಾಧಿಸಿ, ಕಡಲ್ಗಳ್ಳರ ಬೆದರಿಕೆಯನ್ನು ನಿಗ್ರಹಿಸಿ, ಎಲ್ಲಾ 20 ಸಿಬ್ಬಂದಿಯ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿತು.
ಈ ಯಶಸ್ವಿ ಕಾರ್ಯಾಚರಣೆಯು ಭಾರತೀಯ ನೌಕಾಪಡೆಯ ಉನ್ನತ ಮಟ್ಟದ ಕಾರ್ಯಾಚರಣಾ ಸಿದ್ಧತೆ ಹಾಗೂ ವಿವಿಧ ಪಡೆಗಳ ನಡುವಿನ ನಿರಂತರ ಸಮನ್ವಯದ ಮೂಲಕ ಸಂಕೀರ್ಣ ಸಾಗರ ಭದ್ರತಾ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. *ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ʻಪ್ರಥಮ ಪ್ರತಿಸ್ಪಂದಕ' ಮತ್ತು ʻಆದ್ಯತೆಯ ಭದ್ರತಾ ಪಾಲುದಾರʼ* ಆಗಿ ಉಳಿಯುವ ಭಾರತದ ಅಚಲ ಬದ್ಧತೆಯನ್ನು ಸಹ ಒತ್ತಿಹೇಳುತ್ತದೆ.
ಭಾರತೀಯ ನೌಕಾಪಡೆಯು ನಾವಿಕರ ಸುರಕ್ಷತೆಯನ್ನು ಕಾಪಾಡಲು, ಪ್ರಮುಖ ಸಾಗರ ವಾಣಿಜ್ಯ ಮಾರ್ಗಗಳನ್ನು ರಕ್ಷಿಸಲು ಮತ್ತು ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಸುರಕ್ಷಿತ, ಭದ್ರ ಹಾಗೂ ಸ್ಥಿರ ಸಾಗರ ಪರಿಸರವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.
(1)_20261103085727_c6f33c.jpeg)
(1)_20261103085740_15977f.jpeg)
*****