ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) 2026ರ ಮಾಧ್ಯಮ ಮಾನ್ಯತೆಗಾಗಿ ಕೊನೆಯ ದಿನಾಂಕವನ್ನು 2026ರ ನವೆಂಬರ್ 4 ರವರೆಗೆ ವಿಸ್ತರಣೆ ಮಾಡಿದೆ. ಗೋವಾದ ಪಣಜಿಯಲ್ಲಿ2026ರ ನವೆಂಬರ್ 20ರಿಂದ 28ರವರೆಗೆ ನಡೆಯಲಿರುವ ಚಲನಚಿತ್ರೋತ್ಸವವನ್ನು ವರದಿ ಮಾಡಲು ಉದ್ದೇಶಿಸಿರುವ ಮಾಧ್ಯಮ ವೃತ್ತಿಪರರು ಅಧಿಕೃತ ಪಿಐಬಿ ಮಾನ್ಯತೆ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಹ ಮಾಧ್ಯಮ ವ್ಯಕ್ತಿಗಳು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಲು ಮತ್ತು ಪರಿಷ್ಕೃತ ಗಡುವಿನ ಮೊದಲು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಲಾಗಿದೆ.
ನೋಂದಣಿಗೆ ಲಿಂಕ್: https://accreditation.pib.gov.in/eventregistration/login.aspx
ಪ್ರಶ್ನೆಗಳಿದ್ದರೆ ಅರ್ಜಿದಾರರು ಈ ಸಂಪರ್ಕ ಮಾಡಬಹುದು iffi.mediadesk@pib.gov.in.
ಮಾನ್ಯತೆ ಪಡೆದ ಮಾಧ್ಯಮ ವೃತ್ತಿಪರರು ವಿವಿಧ ಉತ್ಸವ ಚಟುವಟಿಕೆಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ, ಅವುಗಳೆಂದರೆ:
• ಚಲನಚಿತ್ರ ಪ್ರದರ್ಶನಗಳು
• ಸಂವಾದ ಗೋಷ್ಠಿಗಳು
• ಚಲನಚಿತ್ರ ನಿರ್ದೇಶಕರು ಮತ್ತು ಸಿನಿಮಾ ವೃತ್ತಿಪರರೊಂದಿಗೆ ಸಂವಾದ
• ನೆಟ್ವರ್ಕಿಂಗ್ ಅವಕಾಶಗಳು
• ಉತ್ಸವದ ವರದಿಗೆ ಸಂಬಂಧಿಸಿದ ಇತರ ಚಟುವಟಿಕೆಗಳು
ಐಎಫ್ ಎಫ್ ಐ ನ ಹಿಂದಿನ ಆವೃತ್ತಿಯ (56 ನೇ) ಪೋರ್ಟಲ್ನಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವ ಮಾಧ್ಯಮ ವೃತ್ತಿಪರರು, ಅಗತ್ಯವಿರುವಂತೆ ತಮ್ಮ ದಾಖಲೆಗಳನ್ನು ಲಾಗಿನ್ ಮಾಡಲು ಮತ್ತು ನವೀಕರಿಸಲು ಅದೇ ವಿವರಗಳನ್ನು(credentials) ಬಳಸಬಹುದು.
ಏಷ್ಯಾದ ಅತ್ಯಂತ ಪ್ರಸಿದ್ಧ ಚಲನಚಿತ್ರೋತ್ಸವಗಳಲ್ಲಿ ಒಂದರಲ್ಲಿ ನಿಮ್ಮ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಲು, ಸಿನಿಮಾ ಜಗತ್ತನ್ನು ರೂಪಿಸುವ ಧ್ವನಿಗಳೊಂದಿಗೆ ಸಂಪರ್ಕ ಸಾಧಿಸಲು, ಪರದೆಯ ಹಿಂದಿನ ಕಥೆಗಳನ್ನು ಅನ್ವೇಷಿಸಲು ಮತ್ತು ಐಎಫ್ ಎಫ್ ಐನ ಚಲನಚಿತ್ರ ನಿರ್ಮಾಣ, ಸೃಜನಶೀಲತೆ ಮತ್ತು ಸಂಸ್ಕೃತಿಯ ಅದ್ಧೂರಿ ಆಚರಣೆಯ ಭಾಗವಾಗಲು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ.
ಅಲ್ಲದೆ, ಮಾಧ್ಯಮ ವ್ಯಕ್ತಿಗಳಲ್ಲದ ಚಲನಚಿತ್ರ ಉತ್ಸಾಹಿಗಳು https://www.iffigoa.org/delegate-registration ನಲ್ಲಿ ಪ್ರತಿನಿಧಿಗಳಾಗಿ ಐ ಎಫ್ ಎಫ್ ಐ ಗೆ ನೋಂದಾಯಿಸಿಕೊಳ್ಳಬಹುದು ಮತ್ತು 57ನೇ ಐ ಎಫ್ ಎಫ್ ಐ 2026ರಲ್ಲಿ ನೀಡಲಾಗುವ ಚಲನಚಿತ್ರಗಳು ಮತ್ತು ಇತರ ಚಟುವಟಿಕೆಗಳ ಶ್ರೀಮಂತಿಕೆಯನ್ನು ನೋಡಿ ಆನಂದಿಸಬಹುದು.
ಐ ಎಫ್ ಎಫ್ ಐ ಕುರಿತು
1952ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರ ಉತ್ಸವವಾಗಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಗೋವಾ ರಾಜ್ಯ ಸರ್ಕಾರ (ಇ ಎಸ್ ಜಿ), ಗೋವಾ ರಾಜ್ಯ ಸರ್ಕಾರ, ಐ ಎಫ್ ಎಫ್ ಐ ಅನ್ನು ಜಂಟಿಯಾಗಿ ಆಯೋಜಿಸುತ್ತಿದ್ದು, ಇದು ವಿಶ್ವದಾದ್ಯಂತ ಇರುವ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ದಿಗ್ಗಜರು ಮತ್ತು ಉದಯೋನ್ಮುಖ ತಾರೆಗಳನ್ನು ಒಗ್ಗೂಡಿಸುತ್ತದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ಕ್ಲಾಸ್ಗಳು ಮತ್ತು ಗೌರವಗಳೊಂದಿಗೆ ಉತ್ಸವವನ್ನು ಗೋವಾದ ಅದ್ಭುತ ಕಡಲ ಕಿನಾರೆಯಲ್ಲಿ ವೈವಿಧ್ಯಮಯ ಕಥೆಗಳು, ಭಾಷೆಗಳು ಮತ್ತು ಸಿನಿಮೀಯ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ.
57ನೇ ಐಎಫ್ ಎಫ್ ಐ 2026 ಕುರಿತು ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ವಿವರಗಳಿಗಾಗಿ ದಯಮಾಡಿ https://www.iffigoa.org/ ಭೇಟಿ ನೀಡಬಹುದು.
*****