ಪ್ರಕಟಣಾ ದಿನಾಂಕ:
23 OCT 2026 6:52PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳಾ ಸಿಂಗಲ್ಸ್ ಎಸ್.ಯು.5 ನಲ್ಲಿ ಬೆಳ್ಳಿ ಪದಕ ಗೆದ್ದ ತುಳಸಿಮತಿ ಮುರುಗೇಶನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಅವರ ಕ್ರೀಡಾ ಪ್ರದರ್ಶನವು ಭಾರತೀಯ ಬ್ಯಾಡ್ಮಿಂಟನ್ ಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ, ಹಾಗೂ, ಅವರು ನಿರಂತರವಾಗಿ ಶ್ರಮಿಸುತ್ತಾರೆ, ಹೊಸ ಎತ್ತರವನ್ನು ಏರುತ್ತಾರೆ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರುತ್ತಾರೆ ಎಂದು ಆಶಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳಾ ಸಿಂಗಲ್ಸ್ ಎಸ್.ಯು.5 ನಲ್ಲಿ ಬೆಳ್ಳಿ ಪದಕವನ್ನು ಗೆದ್ದ ತುಳಸಿಮತಿ ಮುರುಗೇಶನ್ ಅವರಿಗೆ ಅಭಿನಂದನೆಗಳು! ಅವರ ಕ್ರೀಡಾ ಪ್ರದರ್ಶನವು ಭಾರತೀಯ ಬ್ಯಾಡ್ಮಿಂಟನ್ ಗೆ ಹೆಮ್ಮೆಯ ಕ್ಷಣವಾಗಿದೆ. ಅವರು ಕಠಿಣ ಪರಿಶ್ರಮ ಮುಂದುವರಿಸಲಿ, ಹೊಸ ಎತ್ತರವನ್ನು ಏರಲಿ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರಲಿ: ಪ್ರಧಾನಮಂತ್ರಿ @narendramodi "
*****