ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರೋಹಿತ್‌ ಕುಮಾರ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 OCT 2026 9:26PM by PIB Bengaluru

ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಪುರುಷರ 100 ಮೀಟರ್‌ ಬ್ರೆಸ್ಟ್‌ಸ್ಟ್ರೋಕ್‌ ಎಸ್‌ಬಿ 4 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರೋಹಿತ್‌ ಕುಮಾರ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ತಮ್ಮ ಮೊದಲ ಪಂದ್ಯದಲ್ಲಿ ಪದಕ ಗೆಲ್ಲುವುದು ಈ ಸಾಧನೆಯನ್ನು ವಿಶೇಷವಾಗಿ ವಿಶೇಷವಾಗಿಸುತ್ತದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ರೋಹಿತ್‌ ಅವರ ಅದ್ಭುತ ಪ್ರದರ್ಶನಕ್ಕಾಗಿ ಅವರನ್ನು ಅಭಿನಂದಿಸಿದರು.

ಎಕ್ಸ್‌ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

‘‘ರೋಹಿತ್‌ ಕುಮಾರ್‌ಅವರಿಗೆ ಸ್ಮರಣೀಯ ಚೊಚ್ಚಲ ಪ್ರವೇಶ! ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಪುರುಷರ 100 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ ಎಸ್‌ಬಿ 4 ಸ್ಪರ್ಧೆಯಲ್ಲಿಅವರು ಪ್ರಭಾವಶಾಲಿ ಸಮಯದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಮೊದಲ ಬಾರಿಗೆ ಪದಕ ಗೆದ್ದಿರುವುದು ಈ ಸಾಧನೆಯನ್ನು ವಿಶೇಷವಾಗಿ ವಿಶೇಷವಾಗಿಸುತ್ತದೆ. ರೋಹಿತ್‌ ಅವರ ಅದ್ಭುತ ಪ್ರದರ್ಶನಕ್ಕಾಗಿ ನನ್ನ ಅಭಿನಂದನೆಗಳು: ಪ್ರಧಾನಮಂತ್ರಿ @narendramodi’’ 

 

*****


(ಪ್ರಕಟಣೆ ಐ.ಡಿ.: 2326440) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Punjabi , Gujarati