ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರಿಂದ ವಿಜಯದಶಮಿ ಮುನ್ನಾದಿನದಂದು ಶುಭ ಹಾರೈಕೆ

ಪ್ರಕಟಣಾ ದಿನಾಂಕ: 19 OCT 2026 7:02PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಜಯದಶಮಿಯ ಮುನ್ನಾದಿನದಂದು ನಾಗರಿಗರಿಗೆ ಶುಭ ಹಾರೈಸಿದ್ದಾರೆ.

ರಾಷ್ಟ್ರಪತಿ ಅವರ ಸಂದೇಶ ಹೀಗಿದೆ, “ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.

ವಿಜಯದಶಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ರಾವಣನ ವಿರುದ್ಧ ಭಗವಾನ್ ಶ್ರೀರಾಮನ ಗೆಲುವಿನ ಸಂಕೇತವಾಗಿದೆ. ಭಗವಾನ್ ಶ್ರೀ ರಾಮನನ್ನು ಸದಾಚಾರ ಮತ್ತು ನೈತಿಕತೆ ಸಾಕಾರ ರೂಪವಾಗಿ ಪೂಜಿಸಲಾಗುತ್ತದೆ. ಈ ಹಬ್ಬವು ಅಧರ್ಮ ಮತ್ತು ಅನ್ಯಾಯದ ಮೇಲೆ ಧರ್ಮ ಮತ್ತು ನ್ಯಾಯದ ವಿಜಯದ ಆಚರಣೆಯಾಗಿದೆ.

ಭಾರತೀಯ ಸಂಸ್ಕೃತಿಯು ನೈತಿಕತೆ ಮತ್ತು ಕರ್ತವ್ಯದ ಆದರ್ಶಗಳಲ್ಲಿ ಬೇರೂರಿದೆ. ಈ ಸಂದರ್ಭದಲ್ಲಿ, ನಮ್ಮ ಸಾಂಸ್ಕೃತಿಕ ಪರಂಪರೆಗಳ ಉದಾತ್ತ ಆದರ್ಶಗಳನ್ನು ಎತ್ತಿಹಿಡಿಯುವ ಹಾಗೂ ಎಲ್ಲರನ್ನೂ ಒಳಗೊಂಡ ಸಮಾಜ ಮತ್ತು 'ವಿಕಸಿತ ಭಾರತ' ನಿರ್ಮಿಸಲು ಕೊಡುಗೆ ನೀಡುವ ಸಂಕಲ್ಪ ಮಾಡೋಣ.

ಈ ಶುಭ ಸಂದರ್ಭದಲ್ಲಿ, ಎಲ್ಲಾ ನಾಗರಿಕರ ಸಂತೋಷ, ಉತ್ತಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ನನ್ನ ಹೃತ್ಪೂರ್ವಕ ಶುಭಾಶಯಗಳು.”

 

*****


(ಪ್ರಕಟಣೆ ಐ.ಡಿ.: 2325312) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Gujarati , Tamil , Malayalam