ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2026ರ ಜುಲೈ ತಿಂಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತು ದೆಹಲಿಯ ಹೊರಗಿನ ವಿವಿಧ ಸ್ಥಳಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಘಟನೆಗಳ ಎಲ್ಲ ಆಯಾಮಗಳ ಕುರಿತು ಸಮಗ್ರ ತನಿಖೆ ನಡೆಸಲು ಭಾರತದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉನ್ನತಾಧಿಕಾರದ ತನಿಖಾ ಸಮಿತಿಯನ್ನು (ಎಚ್‌ಪಿಇಸಿ) ರಚಿಸಿದೆ


ಬಾಧಿತ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಿಂಸಾಚಾರದಿಂದ ಸಂತ್ರಸ್ತರಾದವರ ಅನುಕೂಲಕ್ಕಾಗಿ ಉನ್ನತಾಧಿಕಾರದ ತನಿಖಾ ಸಮಿತಿಯು http://hpec.nic.in ಎಂಬ ಪೋರ್ಟಲ್‌ ಅನ್ನು ಆರಂಭಿಸಿದೆ

ಮಾನ್ಯ ಸರ್ವೋಚ್ಚ ನ್ಯಾಯಾಲಯವು 2026ರ ಆಗಸ್ಟ್ 18ರಂದು ನೀಡಿದ ಆದೇಶದ 12 ಮತ್ತು 13ನೇ ಪ್ಯಾರಾಗಳಲ್ಲಿ ಹಾಗೂ 2026ರ ಸೆಪ್ಟೆಂಬರ್ 10ರಂದು ನೀಡಿದ ಆದೇಶದ 5(i)ನೇ ಪ್ಯಾರಾದಲ್ಲಿ ಉಲ್ಲೇಖಿಸಿರುವ ಎಲ್ಲ ವಿಷಯಗಳನ್ನು ಸಮಿತಿಯು ಪರಿಶೀಲಿಸಲಿದೆ

ಪೆಲೆಟ್‌ ಗನ್‌ಗಳ ಬಳಕೆ, ಮಹಿಳಾ ಪ್ರತಿಭಟನಾಕಾರರ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ಹಿಂಸಾಚಾರ ಮತ್ತು ಕಿರುಕುಳ ಹಾಗೂ ಎರಡೂ ಕಡೆಯಿಂದ ನಡೆದ ಅತಿಯಾದ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗುವುದು

ದುರ್ಬಲ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ, ಸಂತ್ರಸ್ತರು ಬಯಸಿದಲ್ಲಿ ಅವರ ಗುರುತನ್ನು ಗೌಪ್ಯವಾಗಿಡಲು ಮತ್ತು ಬಹಿರಂಗಪಡಿಸದಿರಲು ಅನುಕೂಲವಾಗುವಂತೆ ಪೋರ್ಟಲ್‌ ಅನ್ನು ರೂಪಿಸಲಾಗಿದೆ

ಬಾಧಿತರು ಹಾಗೂ ಇತರ ಸಂಬಂಧಪಟ್ಟವರು ಪೋರ್ಟಲ್‌ ಅನ್ನು ಪ್ರವೇಶಿಸಿ, ಅನ್ವಯವಾಗುವ ನಿಗದಿತ ನಮೂನೆಗಳನ್ನು ಬಳಸಿಕೊಂಡು ತಮ್ಮ ದೂರುಗಳು ಮತ್ತು ಮನವಿಗಳನ್ನು ಅಪ್‌ಲೋಡ್ ಮಾಡುವಂತೆ ಕೋರಲಾಗಿದೆ

ಪ್ರಕಟಣಾ ದಿನಾಂಕ: 17 OCT 2026 5:22PM by PIB Bengaluru

ಭಾರತದ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2026ರ ಜುಲೈ ತಿಂಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹಾಗೂ ದೆಹಲಿಯ ಹೊರಗಿನ ವಿವಿಧ ಸ್ಥಳಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಘಟನೆಗಳ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಲು ಉನ್ನತಾಧಿಕಾರದ ತನಿಖಾ ಸಮಿತಿಯನ್ನು (ಎಚ್‌ಪಿಇಸಿ) ರಚಿಸಿತ್ತು. ಬಾಧಿತ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಿಂಸಾಚಾರದಿಂದ ಸಂತ್ರಸ್ತರಾದವರ ಅನುಕೂಲಕ್ಕಾಗಿ ಸಮಿತಿಯು http://hpec.nic.in ಎಂಬ ಜಾಲತಾಣವನ್ನು ಆರಂಭಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು 2026ರ ಆಗಸ್ಟ್ 18ರಂದು ನೀಡಿದ ಆದೇಶದ 12 ಮತ್ತು 13ನೇ ಪ್ಯಾರಾಗಳಲ್ಲಿ ಹಾಗೂ 2026ರ ಸೆಪ್ಟೆಂಬರ್ 10ರಂದು ನೀಡಿದ ಆದೇಶದ 5(i)ನೇ ಪ್ಯಾರಾದಲ್ಲಿ ಉಲ್ಲೇಖಿಸಿರುವ ಎಲ್ಲ ವಿಷಯಗಳನ್ನು ಸಮಿತಿಯು ಪರಿಶೀಲಿಸಲಿದೆ. ಪೆಲೆಟ್‌ ಗನ್‌ಗಳ ಬಳಕೆ, ಮಹಿಳಾ ಪ್ರತಿಭಟನಾಕಾರರ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ಹಿಂಸಾಚಾರ ಮತ್ತು ಕಿರುಕುಳ ಹಾಗೂ ಎರಡೂ ಕಡೆಯಿಂದ ನಡೆದ ಅತಿಯಾದ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗುವುದು.

ಸಂತ್ರಸ್ತ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ, ಸಂತ್ರಸ್ತ ವ್ಯಕ್ತಿಗಳು ಬಯಸಿದಲ್ಲಿ ಅವರ ಗುರುತನ್ನು ಗೌಪ್ಯವಾಗಿಡಲು ಮತ್ತು ಬಹಿರಂಗಪಡಿಸದಿರಲು ಅನುಕೂಲವಾಗುವಂತೆ ಜಾಲತಾಣವನ್ನು ರೂಪಿಸಲಾಗಿದೆ. ಸಂತ್ರಸ್ತರು ಹಾಗೂ ಇತರ ಸಂಬಂಧಪಟ್ಟವರು ಪೋರ್ಟಲ್‌ ಅನ್ನು ಪ್ರವೇಶಿಸಿ, ಅನ್ವಯವಾಗುವ ನಿಗದಿತ ನಮೂನೆಗಳನ್ನು ಬಳಸಿಕೊಂಡು ತಮ್ಮ ದೂರುಗಳು ಮತ್ತು ಮನವಿಗಳನ್ನು ಅಪ್‌ಲೋಡ್ ಮಾಡುವಂತೆ ಕೋರಲಾಗಿದೆ.

ಇದಲ್ಲದೆ, 2026ರ ಆಗಸ್ಟ್ 18 ಮತ್ತು ಸೆಪ್ಟೆಂಬರ್ 10ರಂದು ನೀಡಲಾದ ಆದೇಶಗಳ ಮೂಲಕ ಉನ್ನತಾಧಿಕಾರದ ತನಿಖಾ ಸಮಿತಿಗೆ ವಹಿಸಲಾದ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಅಥವಾ ಸಲಹೆಗಳನ್ನು ನೀಡಲು ಬಯಸುವ ಯಾರಾದರೂ ಮೇಲ್ಕಂಡ ಪೋರ್ಟಲ್‌ ಮೂಲಕ ಅವುಗಳನ್ನು ಸಲ್ಲಿಸಬಹುದು. ದೂರುಗಳು, ಮನವಿಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸಲು ಬಯಸುವವರು, ನವದೆಹಲಿಯ ರೌಸ್ ಅವೆನ್ಯೂ ಇನ್‌ಸ್ಟಿಟ್ಯೂಷನಲ್ ಏರಿಯಾಲ್ಲಿರುವ ಶಿಕ್ಷಣ ಸದನದ 17ನೇ ಸಂಖ್ಯೆಯ ಕಟ್ಟಡದಲ್ಲಿರುವ ಸಮಿತಿಯ ಕಚೇರಿಗೆ ಎಲ್ಲ ಕೆಲಸದ ದಿನಗಳಲ್ಲಿ ಮಧ್ಯಾಹ್ನ 14:00 ಗಂಟೆಯಿಂದ 16:00 ಗಂಟೆಯವರೆಗೆ ಸಲ್ಲಿಸಬಹುದು. ಮೇಲಿನ ವಿಳಾಸಕ್ಕೆ ಅಂಚೆಯ ಮೂಲಕವೂ ದಾಖಲೆಗಳನ್ನು ಕಳುಹಿಸಬಹುದು. ಅಥವಾ hpec2026.enquiry[at]nic[dot]in ಎಂಬ ಇಮೇಲ್ ವಿಳಾಸಕ್ಕೂ ಕಳುಹಿಸಬಹುದು.

******


(ಪ್ರಕಟಣೆ ಐ.ಡಿ.: 2324742) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , Marathi , हिन्दी , Assamese , Gujarati , Tamil , Telugu , Malayalam