ರಕ್ಷಣಾ ಸಚಿವಾಲಯ
azadi ka amrit mahotsav

ಜೆಕೊಸ್ಲೊವಾಕಿಯಾ ಗಣರಾಜ್ಯದ ಪ್ರಥಮ ಉಪ ಪ್ರಧಾನ ಮಂತ್ರಿ ಹಾಗೂ ಕೈಗಾರಿಕೆ ಮತ್ತು ವ್ಯಾಪಾರ ಸಚಿವರೊಂದಿಗೆ ರಕ್ಷಾ ಮಂತ್ರಿ ದ್ವಿಪಕ್ಷೀಯ ಮಾತುಕತೆ


ರಕ್ಷಣಾ ಕೈಗಾರಿಕಾ ಸಹಯೋಗವನ್ನು ವಿಸ್ತರಿಸಲು ಉಭಯ ನಾಯಕರ ಸಮ್ಮತಿ

ಪ್ರಕಟಣಾ ದಿನಾಂಕ: 13 OCT 2026 1:16PM by PIB Bengaluru

ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ಜೆಕ್ ಗಣರಾಜ್ಯದ ಪ್ರಥಮ ಉಪ ಪ್ರಧಾನ ಮಂತ್ರಿ ಹಾಗೂ ಕೈಗಾರಿಕೆ ಮತ್ತು ವ್ಯಾಪಾರ ಸಚಿವರಾದ ಶ್ರೀ ಕರೇಲ್ ಹಾವ್ಲಿಚೆಕ್ ಅವರೊಂದಿಗೆ 2026 ರ ಅಕ್ಟೋಬರ್ 13 ರಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂವಾದದ ಸಮಯದಲ್ಲಿ, ಉಭಯ ನಾಯಕರು ಎರಡೂ ದೇಶಗಳ ನಡುವಿನ ರಕ್ಷಣಾ ಕೈಗಾರಿಕಾ ಸಹಕಾರದ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದರು. ಪ್ರಸ್ತುತ ನಡೆಯುತ್ತಿರುವ ಸಹಯೋಗ ಮತ್ತು ವಿವಿಧ ಜಂಟಿ ಉದ್ಯಮಗಳ ಯಶಸ್ವಿ ಸ್ಥಾಪನೆಯನ್ನು ಉಭಯ ನಾಯಕರು ಸ್ವಾಗತಿಸಿದರಲ್ಲದೆ, 'ಮೇಕ್-ಇನ್-ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ' ಯೋಜನೆಯನ್ನು ಉತ್ತೇಜಿಸಲು ಭಾರತ-ಜೆಕ್ ಜಂಟಿ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಈ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಸಮ್ಮತಿಸಿದರು.

ಉಭಯ ನಾಯಕರು, ಶಾಂತಿ ಮತ್ತು ಭದ್ರತೆಯ ಕುರಿತಾದ ಪ್ರಚಲಿತ ವಿಷಯಗಳ ಕುರಿತು ಚರ್ಚಿಸಿದರು ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಸಹಕಾರದ ಅಗತ್ಯವನ್ನು ಒಪ್ಪಿಕೊಂಡರು. ಭಾರತ ಮತ್ತು ಜೆಕ್ ಗಣರಾಜ್ಯದ ನಡುವಿನ ಸಹಭಾಗಿತ್ವವು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳು ಮತ್ತು ಪರಸ್ಪರ ನಂಬಿಕೆ ಹಾಗೂ ಗೌರವದ ಹಂಚಿಕೆಯ ಮೌಲ್ಯಗಳ ಮೇಲೆ ಆಧಾರಿತವಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು.

ಶ್ರೀ ಕರೇಲ್ ಹಾವ್ಲಿಚೆಕ್ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದು, ವಿವಿಧ ಸಚಿವಾಲಯಗಳು, ವ್ಯಾಪಾರ ಮತ್ತು ಉದ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ತಮ್ಮ ಪ್ರವಾಸದ ಸಮಯದಲ್ಲಿ ಅವರು ಬೆಂಗಳೂರು ಮತ್ತು ಮುಂಬೈನಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2322847) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Bengali-TR , Punjabi , Gujarati