ಪ್ರಧಾನ ಮಂತ್ರಿಯವರ ಕಛೇರಿ
ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ ಶುಭಾಶಯ ಕೋರಿದ ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯದ ಪ್ರಧಾನಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 OCT 2026 7:29PM by PIB Bengaluru
ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯದ ಪ್ರಧಾನಮಂತ್ರಿ ಕಮ್ಲಾ ಪರ್ಸಾದ್-ಬಿಸೆಸರ್ ಅವರು ವ್ಯಕ್ತಪಡಿಸಿದ ಆತ್ಮೀಯ ಶುಭಾಶಯಗಳು ಮತ್ತು ಸೌಹಾರ್ದಯುತ ಮಾತುಗಳಿಗಾಗಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ಸ್ನೇಹವು ಹೊಸ ಎತ್ತರವನ್ನು ಏರುತ್ತಲೇ ಇದೆ ಎಂದು ಹೇಳಿದ ಪ್ರಧಾನ ಮಂತ್ರಿಯವರು, ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳು ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಶ್ರೀ ಮೋದಿ ಅವರು 'ಎಕ್ಸ್' ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಪ್ರಧಾನಮಂತ್ರಿ ಕಮ್ಲಾ ಪರ್ಸಾದ್-ಬಿಸೆಸರ್ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಸೌಹಾರ್ದಯುತ ಮಾತುಗಳಿಗೆ ಧನ್ಯವಾದಗಳು. ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ಸ್ನೇಹವು ಹೊಸ ಎತ್ತರವನ್ನು ಏರುತ್ತಲೇ ಇದೆ. ಮುಂಬರುವ ವರ್ಷಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ.
@PM_Kamla”
*****
(ಪ್ರಕಟಣೆ ಐ.ಡಿ.: 2321076)
ವಿಸಿಟರ್ ಕೌಂಟರ್ : 14