ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಕ್ರೀಡಾಕೂಟದ ಸೆಪಕ್ಟಕ್ರಾ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚು ಪದಕ ಗೆದ್ದ ಭಾರತೀಯ ಪುರುಷರ ಕ್ವಾಡ್ರಾಂಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
02 OCT 2026 6:09PM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಕ್ವಾಡ್ರಾಂಟ್ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಪುರುಷರ ಕ್ವಾಡ್ರಾಂಟ್ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಮೊದಲ ಪದಕ ಎಂದು ಪ್ರಧಾನಮಂತ್ರಿಯವರು ಹೇಳಿದರು. ತಂಡದ ದೃಢನಿಶ್ಚಯ ಮತ್ತು ಹೋರಾಟದ ಮನೋಭಾವ ಅನುಕರಣೀಯವಾಗಿದೆ ಎಂದು ಅವರು ಹೇಳಿದರು.
ಈ ಸಾಧನೆಯು ದೇಶಾದ್ಯಂತ ಸೆಪಕ್ಟಕ್ರಾ ಕ್ರೀಡೆಗೆ ಮತ್ತಷ್ಟು ಮಹತ್ವ ಹಾಗೂ ತೀವ್ರತೆ ನೀಡುತ್ತದೆ ಎಂದು ಶ್ರೀ ಮೋದಿ ಅವರು ಆಶಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ತಾಣದಲ್ಲಿ ಈ ರೀತಿ ತಿಳಿಸಿದೆ;
“ಭಾರತೀಯ ಸೆಪಕ್ಟಕ್ರಾಗೆ ಒಂದು ಹೆಗ್ಗುರುತು ಕ್ಷಣ!
ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಕ್ವಾಡ್ರಾಂಟ್ ತಂಡಕ್ಕೆ ಅಭಿನಂದನೆಗಳು. ಕ್ರೀಡಾಕೂಟದಲ್ಲಿ ಪುರುಷರ ಕ್ವಾಡ್ರಾಂಟ್ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಮೊದಲ ಪದಕ. ಅವರ ದೃಢನಿಶ್ಚಯ ಮತ್ತು ಹೋರಾಟದ ಮನೋಭಾವ ಅನುಕರಣೀಯ. ಈ ಸಾಧನೆಯು ದೇಶಾದ್ಯಂತ ಸೆಪಕ್ಟಕ್ರಾಗೆ ಮತ್ತಷ್ಟು ಮಹತ್ವ ಹಾಗೂ ತೀವ್ರತೆ ನೀಡಲಿದೆ: ಪ್ರಧಾನಮಂತ್ರಿ @narendramodi”
*****
(ಪ್ರಕಟಣೆ ಐ.ಡಿ.: 2318993)
ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam