ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ನ ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಂಕುಶ್‌ಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 02 OCT 2026 6:13PM by PIB Bengaluru

ಏಷ್ಯನ್ ಗೇಮ್ಸ್‌ನ ಪುರುಷರ 80 ಕೆಜಿ ಬಾಕ್ಸಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿರುವ ಅಂಕುಶ್‌ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಂಕುಶ್ ಅವರ ಉತ್ಸಾಹ ಮತ್ತು ಸಮರ್ಪಣಾ ಭಾವನೆಗಳು ಶ್ಲಾಘನೀಯ ಎಂದು ಪ್ರಧಾನಮಂತ್ರಿ ಹೇಳಿದರು. ಅಂಕುಶ್ ಅವರ ಈ ಯಶಸ್ಸು, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನವು ಅತ್ಯುತ್ತಮವಾಗಿ ಮುಕ್ತಾಯಗೊಳ್ಳುವುದನ್ನು ಖಚಿತಪಡಿಸಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯವು 'ಎಕ್ಸ್' ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

"ಅಂಕುಶ್‌ಗೆ ಚಿನ್ನ!

ಏಷ್ಯನ್ ಗೇಮ್ಸ್‌ನ ಪುರುಷರ 80 ಕೆಜಿ ಬಾಕ್ಸಿಂಗ್ ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕ ಗೆದ್ದ ಅಂಕುಶ್‌ಗೆ ಅಭಿನಂದನೆಗಳು. ಅವರ ಉತ್ಸಾಹ ಮತ್ತು ಸಮರ್ಪಣಾ ಭಾವನೆಗಳು ಶ್ಲಾಘನೀಯ. ಅವರ ಈ ಯಶಸ್ಸು, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನವು ಅತ್ಯುತ್ತಮವಾಗಿ ಮುಕ್ತಾಯಗೊಳ್ಳುವುದನ್ನು ಖಚಿತಪಡಿಸಿದೆ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2318852) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Punjabi , Gujarati , Tamil , Telugu , Malayalam