ಪಂಚಾಯತ್ ರಾಜ್ ಸಚಿವಾಲಯ
ಗಾಂಧಿ ಜಯಂತಿಯಂದು ದೇಶಾದ್ಯಂತ ನಡೆದ 2.42 ಲಕ್ಷ ವಿಶೇಷ ಗ್ರಾಮ ಸಭೆಗಳು; ತಳಮಟ್ಟದ ಚರ್ಚೆಗಳ ಕೇಂದ್ರಬಿಂದುವಾದ ನಾಗರಿಕ-ಕೇಂದ್ರಿತ ಉಪಕ್ರಮಗಳು
‘ಸಬ್‌ಕಿ ಯೋಜನಾ, ಸಬ್‌ಕಾ ವಿಕಾಸ್’ ಕಾರ್ಯಕ್ರಮಕ್ಕೆ ಚಾಲನೆ; ಪಂಚಾಯತ್ ಅಭಿವೃದ್ಧಿ ಯೋಜನೆಗಳು 2027-28ಕ್ಕೆ ಹಾದಿ ಸುಗಮಗೊಳಿಸಿದ ವಿಶೇಷ ಗ್ರಾಮ ಸಭೆಗಳು
ಪ್ರಕಟಣಾ ದಿನಾಂಕ:
02 OCT 2026 8:31PM by PIB Bengaluru
ಗಾಂಧಿ ಜಯಂತಿಯ ಸಂದರ್ಭದಲ್ಲಿ ದೇಶಾದ್ಯಂತ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗಿದ್ದು, ಜಿಪಿಡಿಪಿ ಪೋರ್ಟಲ್ (https://gpdp.nic.in) ಮತ್ತು ಪಂಚಾಯತ್ ನಿರ್ಣಯ್ ಪೋರ್ಟಲ್ (https://meetingonline.gov.in) ನಲ್ಲಿ 2.42 ಲಕ್ಷಕ್ಕೂ ಹೆಚ್ಚು ವಿಶೇಷ ಗ್ರಾಮ ಸಭೆಗಳನ್ನು ನಿಗದಿಪಡಿಸಲಾಗಿತ್ತು. ಈ ಗ್ರಾಮ ಸಭೆಗಳಲ್ಲಿ ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿ ಮತ್ತು ಅಧಿಕಾರಿಗಳು ಅತ್ಯಂತ ಉತ್ಸಾಹದಿಂದ ಮತ್ತು ಸಕ್ರಿಯವಾಗಿ ಪಾಲ್ಗೊಂಡರು. ಈ ವಿಶೇಷ ಗ್ರಾಮ ಸಭೆಗಳು "ಸಬ್‌ಕಿ ಯೋಜನಾ, ಸಬ್‌ಕಾ ವಿಕಾಸ್" ಜನಾಂದೋಲನ ಅಭಿಯಾನ 2026-27 ರ ಆರಂಭವನ್ನು ಸೂಚಿಸಿದವು, ಇದರ ಅಡಿಯಲ್ಲಿ ಪಂಚಾಯತ್‌ಗಳು 2027-28 ರ ಹಣಕಾಸು ವರ್ಷಕ್ಕೆ ತಮ್ಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲಿವೆ. ಈ 2.42 ಲಕ್ಷ ವಿಶೇಷ ಗ್ರಾಮ ಸಭೆಗಳಲ್ಲಿ, ಭಾರತ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಪ್ರವರ್ತಕ ಉಪಕ್ರಮಗಳನ್ನು, ಅಂದರೆ ಪಂಚಾಯತ್ ರಾಜ್ ಸಚಿವಾಲಯ; ಗ್ರಾಮೀಣಾಭಿವೃದ್ಧಿ ಇಲಾಖೆ; ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ; ಗ್ರಾಹಕ ವ್ಯವಹಾರಗಳ ಇಲಾಖೆ; ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ; ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ; ಹಾಗೂ ಭೂಸಂಪನ್ಮೂಲ ಇಲಾಖೆಯ ಯೋಜನೆಗಳನ್ನು ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಲಾಯಿತು.
ವಿಶೇಷ ಗ್ರಾಮ ಸಭೆಗಳು, ಗ್ರಾಮೀಣ ನಾಗರಿಕರಿಗೆ ಪ್ರಮುಖ ಸರ್ಕಾರಿ ಉಪಕ್ರಮಗಳು ಮತ್ತು ಸ್ಥಳೀಯ ಪ್ರಸ್ತುತತೆಯ ವಿಷಯಗಳ ಮೇಲಿನ ಚರ್ಚೆಗಳಲ್ಲಿ ಭಾಗವಹಿಸಲು ನೇರ ವೇದಿಕೆಯನ್ನು ಒದಗಿಸಿದವು. ಕೇಂದ್ರ ಹಣಕಾಸು ಆಯೋಗದ ಅನುದಾನವನ್ನು ಪಂಚಾಯತ್‌ಗಳಿಗೆ ಹೆಚ್ಚುವರಿಯಾಗಿ ಹಸ್ತಾಂತರಿಸುವುದು, ಸ್ವಂತ ಆದಾಯದ ಮೂಲಗಳ ಮೂಲಕ ಆರ್ಥಿಕ ಸ್ವಾವಲಂಬನೆ, ಆಸ್ತಿ ಮತ್ತು ಭೂಮಿಯ ಸುರಕ್ಷಿತ ಹಕ್ಕುಗಳು, ಖಚಿತ ಉದ್ಯೋಗ ಮತ್ತು ಜೀವನೋಪಾಯ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲ ಭದ್ರತೆ, ಆಹಾರ ಭದ್ರತೆ, ಗ್ರಾಹಕ ಸಂರಕ್ಷಣೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣ ಸೇರಿದಂತೆ ಇತರ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗೊಳ್ಳಲಾದ ಪರಿವರ್ತನಾತ್ಮಕ ಆಡಳಿತ ಸುಧಾರಣೆಗಳು ಮತ್ತು ನಾಗರಿಕ-ಕೇಂದ್ರಿತ ಕ್ರಮಗಳು ಸೇರಿದಂತೆ ಪ್ರಮುಖ ಸರ್ಕಾರಿ ಉಪಕ್ರಮಗಳನ್ನು ಎತ್ತಿಹಿಡಿಯುವ ಕಾರ್ಯಸೂಚಿ ಮತ್ತು ಜಾಗೃತಿ ಸಾಮಗ್ರಿಗಳನ್ನು ಓದಿ ಚರ್ಚಿಸಲಾಯಿತು. ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿ ಮತ್ತು ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅನುಭವಗಳು, ದೃಷ್ಟಿಕೋನಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು, ಇದು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಸೃದ್ಧಿಗೊಳಿಸಲು ಕೊಡುಗೆ ನೀಡುತ್ತದೆ. ಈ ವಿಶೇಷ ಗ್ರಾಮ ಸಭೆಗಳನ್ನು ದೇಶಾದ್ಯಂತ ನಡೆಸುವುದು ಸಹಭಾಗಿತ್ವದ ಸಚಿವಾಲಯಗಳು ಮತ್ತು ಇಲಾಖೆಗಳ ಸಂಯೋಜಿತ ಶ್ರಮ, ಹಾಗೂ ಅವರ ಕ್ಷೇತ್ರ ಮತ್ತು ತಳಮಟ್ಟದ ಸಿಬ್ಬಂದಿ ಮತ್ತು 'ಮೈ ಭಾರತ್' (MY Bharat) ಸ್ವಯಂಸೇವಕರ ಬೆಂಬಲದಿಂದ ಸಾಧ್ಯವಾಯಿತು. ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯು ನಾಗರಿಕ-ಕೇಂದ್ರಿತ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು ಅರ್ಥಪೂರ್ಣ ಸಂವಾದಕ್ಕೆ ಅನುಕೂಲ ಮಾಡಿಕೊಟ್ಟಿತು, ಜೊತೆಗೆ ತಳಮಟ್ಟದಲ್ಲಿ 'ಜನ ಭಾಗಿದಾರಿ' (ಜನರ ಪಾಲ್ಗೊಳ್ಳುವಿಕೆ) ಮತ್ತು ಸಂವಾದವನ್ನು ಬಲಪಡಿಸಿತು. 'ಸಂಪೂರ್ಣ ಸರ್ಕಾರ' ವಿಧಾನವನ್ನು ಅಳವಡಿಸಿಕೊಂಡು, ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಡಾ. ವಿನೀತ್ ಜೋಶಿ ಅವರು, ಸಚಿವಾಲಯದ ಮತ್ತು ಭಾರತ ಸರ್ಕಾರದ ಭಾಗವಹಿಸುವ ಸಚಿವಾಲಯಗಳು ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ದಿನವಿಡೀ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೇಶಾದ್ಯಂತ ವಿಶೇಷ ಗ್ರಾಮ ಸಭೆಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಸ್ಪೂರ್ತಿಯಲ್ಲಿ ನಿಕಟ ಸಮನ್ವಯವನ್ನು ಸುಲಭಗೊಳಿಸಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಯೋಜಿತ ಶ್ರಮವು, ಅವರ ಪಂಚಾಯತ್ ರಾಜ್ ಇಲಾಖೆಗಳು, ಜಿಲ್ಲಾಡಳಿತಗಳು ಮತ್ತು ಕ್ಷೇತ್ರ ಸಿಬ್ಬಂದಿಯ ಬೆಂಬಲದೊಂದಿಗೆ, ಈ ದೇಶವ್ಯಾಪಿ ಅಭಿಯಾನವನ್ನು ಅಭೂತಪೂರ್ವ ಪ್ರಮಾಣದಲ್ಲಿ ಸುಗಮವಾಗಿ ನಡೆಸುವುದನ್ನು ಖಚಿತಪಡಿಸಿತು.
ಜನರ ಯೋಜನೆ ಅಭಿಯಾನ 2026-27 ‘ಸಬ್‌ಕಿ ಯೋಜನಾ, ಸಬ್‌ಕಾ ವಿಕಾಸ್’
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಂಚಾಯತ್ ರಾಜ್ ಸಚಿವಾಲಯವು ಭಾರತ ಸರ್ಕಾರದ 21 ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದೊಂದಿಗೆ ನಡೆಸುತ್ತಿರುವ ಜನಾಂದೋಲನ ಅಭಿಯಾನವು 'ಸಂಪೂರ್ಣ ಸರ್ಕಾರ' ವಿಧಾನವನ್ನು ಪ್ರತಿಬಿಂಬಿಸುತ್ತದೆ. ಪಂಚಾಯತ್‌ಗಳು ಸಾಕ್ಷ್ಯಾಧಾರಿತ, ಸಮಗ್ರ ಮತ್ತು ಸಹಭಾಗಿತ್ವದ ಯೋಜನೆಗಳನ್ನು ಸಿದ್ಧಪಡಿಸಲು ಅನುವು ಮಾಡಿಕೊಡಲು ಸಚಿವಾಲಯವು 2018 ರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಾಂದೋಲನ ಅಭಿಯಾನವನ್ನು ಜಾರಿಗೆ ತರುತ್ತಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (RGSA) ಅಡಿಯಲ್ಲಿ, ಸಚಿವಾಲಯವು ಸ್ಥಳೀಯ ಅಭಿವೃದ್ಧಿಯ ಒಂಬತ್ತು ವಿಷಯಗಳಾದ್ಯಂತ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯನ್ನು ಬೆಂಬಲಿಸುತ್ತದೆ. 2.55 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು ಸಹಭಾಗಿತ್ವದ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (GPDP) ಸಿದ್ಧಪಡಿಸಿ 'ಈ-ಗ್ರಾಮ ಸ್ವರಾಜ್' (eGramSwaraj) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತವೆ, ಹಾಗೆಯೇ 'ಪಂಚಾಯತ್ ಪ್ರಗತಿ ಸೂಚ್ಯಂಕ'ವು ಪ್ರತಿಯೊಂದು ಗ್ರಾಮ ಪಂಚಾಯತ್‌ಗೆ ತನ್ನ ಸಾಧನೆಗಳು ಮತ್ತು ಕೊರತೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಆಧಾರದ ಮೇಲೆ, ಗ್ರಾಮ ಸಭೆಯು ಆದ್ಯತೆಯ ಕ್ಷೇತ್ರಗಳ ಮೇಲೆ 'ಸಂಕಲ್ಪ' ತೆಗೆದುಕೊಳ್ಳಬಹುದು, ಇದು ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ (LSDGs) ಮತ್ತು 'ವಿಕಸಿತ ಭಾರತ'ದ ಪರಿಕಲ್ಪನೆಯನ್ನು ಮುನ್ನಡೆಸುತ್ತದೆ.
ವಿಶೇಷ ಗ್ರಾಮ ಸಭೆಗಳಲ್ಲಿ ಮಂಡಿಸಲಾದ ಪ್ರಮುಖ ಸುಧಾರಣೆಗಳು ಮತ್ತು ಸಾಧನೆಗಳು
ಸಶಕ್ತ ಮತ್ತು ಸ್ವಾವಲಂಬಿ ಪಂಚಾಯತ್‌ಗಳು (ಪಂಚಾಯತ್ ರಾಜ್ ಸಚಿವಾಲಯ): ಹದಿನಾರನೇ ಹಣಕಾಸು ಆಯೋಗವು 2026-31 ರ ಅವಧಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ₹4,35,236 ಕೋಟಿ ಅನುದಾನವನ್ನು ಶಿಫಾರಸು ಮಾಡಿದೆ. ಇದು ಹದಿನೈದನೇ ಹಣಕಾಸು ಆಯೋಗಕ್ಕಿಂತ ಸುಮಾರು ಶೇಕಡಾ 84 ರಷ್ಟು ಹೆಚ್ಚಳವಾಗಿದ್ದು, ವಾರ್ಷಿಕ ತಲಾ ಅನುದಾನವು ಸುಮಾರು ₹400 ರಿಂದ ₹950 ಕ್ಕೆ ಏರಿಕೆಯಾಗಿದೆ. 'ಸಮರ್ಥ ಪಂಚಾಯತ್' (SAMARTH) ಪೋರ್ಟಲ್‌ನಲ್ಲಿ 57 ಲಕ್ಷಕ್ಕೂ ಹೆಚ್ಚು ತೆರಿಗೆದಾರರು ಮತ್ತು 15 ಲಕ್ಷ ಆಸ್ತಿಗಳು ನೋಂದಾಯಿಸಲ್ಪಟ್ಟಿವೆ ಮತ್ತು 'ಆತ್ಮ ನಿರ್ಭರ ಪಂಚಾಯತ್ ವಿಶೇಷ ಪ್ರಶಸ್ತಿ'ಯು ₹1 ಕೋಟಿಯವರೆಗಿನ ಪ್ರೋತ್ಸಾಹಕವನ್ನು ಹೊಂದಿದೆ. ಪಂಚಾಯತ್ ಖಾತೆಗಳು ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಳಸುವ ಆರು ಹಂತದ ರಚನೆಯನ್ನು ಅನುಸರಿಸುತ್ತವೆ, ಮತ್ತು 2.5 ಲಕ್ಷಕ್ಕೂ ಹೆಚ್ಚು ಪಂಚಾಯತ್ ರಾಜ್ ಸಂಸ್ಥೆಗಳು 'ಆಡಿಟ್ ಆನ್‌ಲೈನ್' (AuditOnline) ವ್ಯವಸ್ಥೆಯನ್ನು ಸೇರಿಕೊಂಡಿವೆ. 'ಸ್ವಾಮಿತ್ವ' (SVAMITVA) ಯೋಜನೆಯ ಅಡಿಯಲ್ಲಿ, 2.06 ಲಕ್ಷ ಹಳ್ಳಿಗಳಿಗೆ 3.33 ಕೋಟಿ ಆಸ್ತಿ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ, ಸುಮಾರು ₹1,713 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ ಮತ್ತು ಮಹಿಳೆಯರನ್ನು ಆಸ್ತಿ ಮಾಲೀಕರೆಂದು ಗುರುತಿಸುವುದನ್ನು ಪ್ರೋತ್ಸಾಹಿಸಲಾಗಿದೆ.
ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ (ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ): 'ಜಲ ಜೀವನ್ ಮಿಷನ್' ಅಡಿಯಲ್ಲಿ, ಗ್ರಾಮೀಣ ನಲ್ಲಿ ನೀರು ಸಂಪರ್ಕಗಳು ಸುಮಾರು 3.23 ಕೋಟಿ (ಶೇಕಡಾ 17) ಕುಟುಂಬಗಳಿಂದ 16 ಕೋಟಿಗೂ ಹೆಚ್ಚು (ಶೇಕಡಾ 80 ಕ್ಕಿಂತ ಹೆಚ್ಚು) ಕುಟುಂಬಗಳಿಗೆ ಬೆಳೆದಿವೆ, ಮತ್ತು ಪೂರ್ಣಗೊಂಡ ನೀರು ಸರಬರಾಜು ಯೋಜನೆಗಳನ್ನು ಗ್ರಾಮ ಪಂಚಾಯತ್‌ಗಳು ಮತ್ತು ಸಮುದಾಯಗಳಿಗೆ ಹಸ್ತಾಂತರಿಸುವ 'ಜಲ ಅರ್ಪಣ್' ಕಾರ್ಯಕ್ರಮವನ್ನು ಎತ್ತಿಹಿಡಿಯಲಾಯಿತು. 'ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)' ಅಡಿಯಲ್ಲಿ, 12.22 ಕೋಟಿ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 5.25 ಲಕ್ಷಕ್ಕೂ ಹೆಚ್ಚು ಹಳ್ಳಿಗಳು (ಶೇಕಡಾ 89.6) ತಮ್ಮನ್ನು 'ಬಹಿರ್ದೆಸೆ ಮುಕ್ತ ಪ್ಲಸ್ ಮಾದರಿ' (ODF Plus Model) ಎಂದು ಘೋಷಿಸಿಕೊಂಡಿವೆ. 'ಸ್ವಚ್ಛತೆಯೇ ಸೇವೆ 2026' ಮುಕ್ತಾಯಗೊಳ್ಳುತ್ತಿದ್ದಂತೆ ಗ್ರಾಮ ಸಭೆಗಳಲ್ಲಿ 'ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026' ಕುರಿತು ಚರ್ಚಿಸಲಾಯಿತು.
ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ (ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ): 'ಜಲ ಜೀವನ್ ಮಿಷನ್' ಅಡಿಯಲ್ಲಿ, ಗ್ರಾಮೀಣ ‘ನಲ್ಲಿ ನೀರು ಸಂಪರ್ಕಗಳು’ ಸುಮಾರು 3.23 ಕೋಟಿ (ಶೇಕಡಾ 17) ಕುಟುಂಬಗಳಿಂದ 16 ಕೋಟಿಗೂ ಹೆಚ್ಚು (ಶೇಕಡಾ 80 ಕ್ಕಿಂತ ಹೆಚ್ಚು) ಕುಟುಂಬಗಳಿಗೆ ಬೆಳೆದಿವೆ, ಮತ್ತು ಪೂರ್ಣಗೊಂಡ ನೀರು ಸರಬರಾಜು ಯೋಜನೆಗಳನ್ನು ಗ್ರಾಮ ಪಂಚಾಯತ್‌ಗಳು ಮತ್ತು ಸಮುದಾಯಗಳಿಗೆ ಹಸ್ತಾಂತರಿಸುವ 'ಜಲ ಅರ್ಪಣ್' ಕಾರ್ಯಕ್ರಮವನ್ನು ಸಹ ಎತ್ತಿಹಿಡಿಯಲಾಯಿತು. 'ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)' ಅಡಿಯಲ್ಲಿ, 12.22 ಕೋಟಿ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 5.25 ಲಕ್ಷಕ್ಕೂ ಹೆಚ್ಚು ಹಳ್ಳಿಗಳು (ಶೇಕಡಾ 89.6) ತಮ್ಮನ್ನು 'ಬಯಲು ಶೌಚ ಮುಕ್ತ ಪ್ಲಸ್ ಮಾದರಿ' (ODF Plus Model) ಎಂದು ಘೋಷಿಸಿಕೊಂಡಿವೆ. 'ಸ್ವಚ್ಛತೆಯೇ ಸೇವೆ 2026' ಮುಕ್ತಾಯಗೊಳ್ಳುತ್ತಿದ್ದಂತೆ ಗ್ರಾಮ ಸಭೆಗಳಲ್ಲಿ 'ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026' ಕುರಿತು ಚರ್ಚಿಸಲಾಯಿತು.
ಜಲ ಭದ್ರತೆ (ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ): 'ಜಲ ಸಂಚಯ ಜನ ಭಾಗಿದಾರಿ: ಕ್ಯಾಚ್ ದಿ ರೇನ್' (Catch the Rain) ಮೂಲಕ, ಸಮುದಾಯದ ಸಹಭಾಗಿತ್ವದೊಂದಿಗೆ 1.55 ಕೋಟಿಗೂ ಹೆಚ್ಚು ಕೃತಕ ಮರುಪೂರಣ ಮತ್ತು ಸಂಗ್ರಹಣಾ ರಚನೆಗಳನ್ನು ನಿರ್ಮಿಸಲಾಗಿದೆ, ಹಾಗೂ ಪ್ರಥಮ ಹಂತದ ಪರಿಣಾಮದ ಅಧ್ಯಯನವು 2.43 ಬಿಲಿಯನ್ ಕ್ಯೂಬಿಕ್ ಮೀಟರ್ ಅಂತರ್ಜಲ ಮರುಪೂರಣವನ್ನು ಅಂದಾಜಿಸಿದೆ. ಪರಿಷ್ಕೃತ ಜಲಾನಯನ ಅಭಿವೃದ್ಧಿ ಮಾನದಂಡಗಳು ಬಯಲು ಸೀಮೆ ಪ್ರದೇಶಗಳಲ್ಲಿ ಧನಸಹಾಯವನ್ನು ಹೆಕ್ಟೇರ್‌ಗೆ ₹22,000 ಕ್ಕೆ ಮತ್ತು ಗುಡ್ಡಗಾಡು ಹಾಗೂ ಕಠಿಣ ಪ್ರದೇಶಗಳಲ್ಲಿ ₹28,000 ಕ್ಕೆ ಹೆಚ್ಚಿಸಿವೆ, ಜೊತೆಗೆ ಯೋಜನೆಯ ಅವಧಿಯನ್ನು ಏಳರಿಂದ ಐದು ವರ್ಷಗಳಿಗೆ ಕಡಿತಗೊಳಿಸಿವೆ. 'ಕ್ಯಾಚ್ ದಿ ರೇನ್' ಅಡಿಯಲ್ಲಿ ಗ್ರಾಮ ಸಭೆಯ ಚಟುವಟಿಕೆಗಳು ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ಸಮುದಾಯ ನೇತೃತ್ವದ ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದರ ಮೇಲೆ ಗಮನ ಹರಿಸಿದವು. ಸ್ಥಳೀಯ ಸಮುದಾಯಗಳು, ಪಂಚಾಯತ್ ರಾಜ್ ಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು, ಇದರಲ್ಲಿ ತಾಂತ್ರಿಕ ಮಾರ್ಗದರ್ಶನ, ಜಾಗೃತಿ ವೀಡಿಯೊಗಳ ಪ್ರದರ್ಶನ, ವೃಕ್ಷಾರೋಪಣ ಮತ್ತು ಶ್ರಮದಾನ ಚಟುವಟಿಕೆಗಳ ಜೊತೆಗೆ 'ಜಲ ಶಪಥ' ಬೋಧನೆಯೂ ಸೇರಿತ್ತು. ಮಳೆನೀರಿನ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸುವ ಮತ್ತು ಸುಸ್ಥಿರ ಜಲ ನಿರ್ವಹಣೆಯತ್ತ ಸಾಮುದಾಯಿಕ ಕ್ರಿಯೆಯನ್ನು ಸಜ್ಜುಗೊಳಿಸುವ ಸಂದೇಶವನ್ನು ಬಲಪಡಿಸಲು 'ಕ್ಯಾಚ್ ದಿ ರೇನ್' (CTR) ಗೀತೆಯನ್ನು ನುಡಿಸಲಾಯಿತು ಮತ್ತು ಪ್ರದರ್ಶಿಸಲಾಯಿತು.
ಆಹಾರ ಭದ್ರತೆ ಮತ್ತು ಗ್ರಾಹಕ ಸಂರಕ್ಷಣೆ (ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಗಳು): 'ಒಂದು ದೇಶ ಒಂದು ಪಡಿತರ ಚೀಟಿ' ಅಡಿಯಲ್ಲಿ, ಪ್ರತಿ ತಿಂಗಳು ಸುಮಾರು 3.27 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ನಡೆಯುತ್ತಿವೆ, ಮತ್ತು 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಯು 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದ್ದು, ಇದನ್ನು 2028 ರವರೆಗೆ ವಿಸ್ತರಿಸಲಾಗಿದೆ. 17 ಭಾಷೆಗಳಲ್ಲಿ ಲಭ್ಯವಿರುವ 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ'ಗೆ ಆಗಸ್ಟ್ 2019 ರಲ್ಲಿ ಬಂದಿದ್ದ 78,477 ಕರೆಗಳಿಗೆ ಪ್ರತಿಯಾಗಿ ಆಗಸ್ಟ್ 2026 ರಲ್ಲಿ 3,42,371 ಕರೆಗಳು ಬಂದಿದ್ದು, ಏಪ್ರಿಲ್ 2025 ರಿಂದೀಚೆಗೆ ₹105 ಕೋಟಿಗೂ ಹೆಚ್ಚು ಹಣ ಮರುಪಾವತಿಗೆ ಅನುಕೂಲ ಮಾಡಿಕೊಟ್ಟಿದೆ. 'ಈ-ಜಾಗೃತಿ' (e-Jagriti) ವೇದಿಕೆಯು ದಾಖಲಾದ 2.81 ಲಕ್ಷ ಪ್ರಕರಣಗಳಲ್ಲಿ 2.55 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಮತ್ತು 'ಇ-ಆಡಳಿತಕ್ಕಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಗಳು 2026' ರಲ್ಲಿ ಬೆಳ್ಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಡಿಜಿಟಲ್ ಭೂ ದಾಖಲೆಗಳು (ಭೂಸಂಪನ್ಮೂಲ ಇಲಾಖೆ): 'ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನಿಕೀಕರಣ ಕಾರ್ಯಕ್ರಮ'ದ ಅಡಿಯಲ್ಲಿ, ಶೇಕಡಾ 99.90 ರಷ್ಟು ಹಕ್ಕುಗಳ ದಾಖಲೆಗಳು (Records of Rights) ಮತ್ತು ಶೇಕಡಾ 97.4 ರಷ್ಟು ಕೆಡಾಸ್ಟ್ರಲ್ ನಕ್ಷೆಗಳನ್ನು (cadastral maps) ಡಿಜಿಟಲೀಕರಣಗೊಳಿಸಲಾಗಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾಗರಿಕರು ಆನ್‌ಲೈನ್‌ನಲ್ಲಿ ಭೂ ದಾಖಲೆಗಳನ್ನು ವೀಕ್ಷಿಸಬಹುದು, ಮತ್ತು 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಜಿಟಲ್ ಸಹಿ ಮಾಡಿದ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು, ಇದು ಅಕ್ರಮ ಖಾತೆ ಬದಲಾವಣೆಗಳಿಂದ (fraudulent mutations) ಮಾಲೀಕರನ್ನು ರಕ್ಷಿಸುತ್ತದೆ ಮತ್ತು ಸಾಲ ಸೌಲಭ್ಯ ಪ್ರವೇಶವನ್ನು ಸುಲಭಗೊಳಿಸುತ್ತದೆ.
ಇತರ ಪ್ರಮುಖ ರಾಷ್ಟ್ರೀಯ ಉಪಕ್ರಮಗಳ ಕುರಿತು ಜಾಗೃತಿ:
ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಹಲವಾರು ಸಚಿವಾಲಯಗಳು/ಇಲಾಖೆಗಳು ಮೌಲ್ಯಯುತ ಬೆಂಬಲವನ್ನು ನೀಡಿವೆ. ಗೃಹ ಸಚಿವಾಲಯವು ಹೊಸ ಅಪರಾಧ ಕಾನೂನುಗಳಾದ 'ಭಾರತೀಯ ನ್ಯಾಯ ಸಂಹಿತೆ', 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ' ಮತ್ತು 'ಭಾರತೀಯ ಸಾಕ್ಷ್ಯ ಅಧಿನಿಯಮ'ದ ಕುರಿತು ಜಾಗೃತಿ ಮೂಡಿಸಲು ನೆರವಾಯಿತು; ಸಹಕಾರ ಸಚಿವಾಲಯವು ಸಹಕಾರ ಸಂಘಗಳ 'ಡಿಜಿಟಲ್ ರೂಪಾಂತರ ಮತ್ತು ಬಲವರ್ಧನೆ'ಯ ಕುರಿತು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 'ಬಾಲ್ಯ ವಿವಾಹ ಮುಕ್ತ ಭಾರತ'ದ ಕುರಿತು; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 'ನಶಾ ಮುಕ್ತ ಭಾರತ ಅಭಿಯಾನ'ದ ಕುರಿತು ಜಾಗೃತಿ ಮೂಡಿಸಿ, ಸುರಕ್ಷಿತ, ಆರೋಗ್ಯಕರ, ಬಾಲ್ಯ ವಿವಾಹ ಮುಕ್ತ ಮತ್ತು ಮಾದಕದ್ರವ್ಯ ಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ಶ್ರಮಿಸಿದವು. ಈ ವಿಶೇಷ ಗ್ರಾಮ ಸಭೆಗಳು ಸಹಭಾಗಿತ್ವದ ಪ್ರಜಾಪ್ರಭುತ್ವ ಮತ್ತು ಸ್ಥಳೀಯ ಆಡಳಿತದ ಅಡಿಪಾಯವಾಗಿ ಗ್ರಾಮ ಸಭೆಯನ್ನು ಪುನರುಚ್ಚರಿಸಿದವು. ವಿಕಸಿತ ಭಾರತದ ಬೃಹತ್ ಶ್ರಮದಲ್ಲಿ ಶಕ್ತಿಶಾಲಿ, ಆತ್ಮನಿರ್ಭರ ಮತ್ತು ವಿಕಸಿತ ಪಂಚಾಯತ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ, ಜನಾಂದೋಲನ ಅಭಿಯಾನದ ಅಡಿಯಲ್ಲಿ 2027-28 ರ ಜನಕೇಂದ್ರಿತ ಪಂಚಾಯತ್ ಅಭಿವೃದ್ಧಿ ಯೋಜನೆಗಳ ಸಿದ್ಧತೆಯನ್ನು ಪಂಚಾಯತ್ ರಾಜ್ ಸಚಿವಾಲಯವು ಎದುರುನೋಡುತ್ತಿದೆ.
ಭಾಗವಹಿಸುವ ಸಚಿವಾಲಯಗಳು/ಇಲಾಖೆಗಳ ಸುಧಾರಣೆಗಳ ವಿವರಗಳಿಗಾಗಿ: ಇಲ್ಲಿ ಕ್ಲಿಕ್ ಮಾಡಿ






*****
(ಪ್ರಕಟಣೆ ಐ.ಡಿ.: 2318502)
ವಿಸಿಟರ್ ಕೌಂಟರ್ : 12