ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಸಂಯುಕ್ತ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಕುಶಾಲ್ ದಲಾಲ್, ಸಾಹಿಲ್ ರಾಜೇಶ್ ಜಾಧವ್ ಮತ್ತು ಗಣೇಶ್ ಮಣಿರತ್ನಂ ತಿರುಮುರು ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 30 SEP 2026 4:58PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಸಂಯುಕ್ತ (ಕಾಂಪೌಂಡ್) ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕುಶಾಲ್ ದಲಾಲ್, ಸಾಹಿಲ್ ರಾಜೇಶ್ ಜಾಧವ್ ಮತ್ತು ಗಣೇಶ್ ಮಣಿರತ್ನಂ ತಿರುಮುರು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ಗೆಲುವಿನ ನಂತರ ಈ ಮೂವರ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು ಎಂದು ಪ್ರಧಾನಮಂತ್ರಿಯವರು ಹೇಳಿದರು ಹಾಗೂ ಅವರುಗಳ ನಿಖರತೆ ಮತ್ತು ತಂಡದ ಅತ್ಯುತ್ತಮ ಕ್ರೀಡಾ ಪ್ರದರ್ಶನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

 ಚಾಂಪಿಯನ್ ಬಿಲ್ಲುಗಾರರಿಗೆ ಅವರುಗಳ ಭವಿಷ್ಯದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.

 ಪ್ರಧಾನಮಂತ್ರಿಯವರ ಕಾರ್ಯಾಲಯ ವುಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ತಿಳಿಸಿದೆ;

"ಏಷ್ಯನ್ ಕ್ರೀಡಾಕೂಟದಲ್ಲಿ ನಡೆದ ಪುರುಷರ ಸಂಯುಕ್ತ ತಂಡ ವಿಭಾಗದಲ್ಲಿ ಕುಶಾಲ್ ದಲಾಲ್, ಸಾಹಿಲ್ ರಾಜೇಶ್ ಜಾಧವ್ ಮತ್ತು ಗಣೇಶ್ ಮಣಿರತ್ನಂ ತಿರುಮುರು ರೋಮಾಂಚಕ ಫೈನಲ್ ನಂತರ ಚಿನ್ನ ಗೆದ್ದರು. ಅವರುಗಳದು ನಿಖರತೆ ಮತ್ತು ತಂಡದ ಅತ್ಯುತ್ತಮ ಕ್ರೀಡಾ ಪ್ರದರ್ಶನವಾಗಿತ್ತು. ನಮ್ಮ ಚಾಂಪಿಯನ್ ಬಿಲ್ಲುಗಾರರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2317581) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu , Malayalam