ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಾದಕದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ದೊರೆತ ಪ್ರಮುಖ ಯಶಸ್ಸಿನಲ್ಲಿ, ಭಾರತದ ವಿಶೇಷ ಆರ್ಥಿಕ ವಲಯದಲ್ಲಿ (ಇಇಝೆಡ್) ಇರಾನಿನ ದೋಣಿಯಿಂದ 526 ಕೆಜಿ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಹಾಗೂ ಗುಜರಾತ್ ಎಟಿಎಸ್, ಭಾರತೀಯ ಕರಾವಳಿ ರಕ್ಷಕ ಪಡೆ (ಐಸಿಜಿ) ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 5 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ತಿಳಿಸಿದ್ದಾರೆ


ಮೋದಿ ಸರ್ಕಾರವು ದೇಶದ ಯುವಜನತೆಯನ್ನು ಮಾದಕದ್ರವ್ಯಗಳ ಪಿಡುಗಿನಿಂದ  ರಕ್ಷಿಸಲು ಬದ್ಧವಾಗಿದೆ

ವಿವಿಧ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಮನ್ವಯ ಮತ್ತು ಸಹಕಾರಕ್ಕೆ ಉದಾಹರಣೆಯಾಗಿರುವ 16 ದಿನಗಳ ದೀರ್ಘ ಕಾರ್ಯಾಚರಣೆಯಲ್ಲಿ ಇರಾನಿನ ದೋಣಿಯನ್ನೂ ವಶಪಡಿಸಿಕೊಳ್ಳಲಾಗಿದೆ

ಈ ಕಾರ್ಯಾಚರಣೆಯು ಭಾರತದ ಕರಾವಳಿ ಗಡಿಗಳನ್ನು ಸುರಕ್ಷಿತವಾಗಿಡಲು ಗುಪ್ತಚರ ಆಧಾರಿತ ಹಾಗೂ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ

ಮಾದಕ ದ್ರವ್ಯದ ವ್ಯಾಪಕ ಜಾಲವನ್ನು ಬಯಲಿಗೆಳೆಯಲು ಮತ್ತು ಪಡೆಯಲಿದ್ದ ವ್ಯಕ್ತಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ

ಸುರಕ್ಷಿತ, ಆರೋಗ್ಯಕರ ಮತ್ತು 'ನಶಾ-ಮುಕ್ತ ಭಾರತ' ನಿರ್ಮಾಣವು ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಸಂಕಲ್ಪವಾಗಿದೆ

ಮಾದಕದ್ರವ್ಯ ನಿಯಂತ್ರಣ ಕುರಿತ ಮೋದಿ ಸರ್ಕಾರದ ದೂರದೃಷ್ಟಿಯ ದಾಖಲೆ (2026-2029), ಜಾರಿಗೊಳಿಸುವಿಕೆಯನ್ನು ಬಲಪಡಿಸಲು, ಮಾದಕದ್ರವ್ಯ ಜಾಲಗಳನ್ನು ಧ್ವಂಸಗೊಳಿಸಲು ಮತ್ತು ನಮ್ಮ ಯುವಜನತೆ ಹಾಗೂ ಸಮಾಜವನ್ನು ಮಾದಕದ್ರವ್ಯಗಳಿಂದ ರಕ್ಷಿಸಲು ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ

ಪ್ರಕಟಣಾ ದಿನಾಂಕ: 30 SEP 2026 3:54PM by PIB Bengaluru

ಮಾದಕದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ದೊರೆತ ಪ್ರಮುಖ ಯಶಸ್ಸಿನಲ್ಲಿ, ಭಾರತದ ವಿಶೇಷ ಆರ್ಥಿಕ ವಲಯದಲ್ಲಿ (ಇಇಝೆಡ್) ಇರಾನಿನ ದೋಣಿಯಿಂದ 526 ಕಿಲೋಗ್ರಾಂ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆಯ, ಭಾರತೀಯ ಕರಾವಳಿ ರಕ್ಷಕ ಪಡೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಇಂದು ತಿಳಿಸಿದ್ದಾರೆ.

'ಎಕ್ಸ್' ನಲ್ಲಿ ಮಾಡಿದ ಪೋಸ್ಟ್ ಒಂದರಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೀಗೆ ಹೇಳಿದ್ದಾರೆ: “ಮೋದಿ ಸರ್ಕಾರವು ತನ್ನ ಯುವಜನತೆಯನ್ನು ಮಾದಕದ್ರವ್ಯಗಳ ಹಾವಳಿಯಿಂದ ರಕ್ಷಿಸಲು ಬದ್ಧವಾಗಿದೆ. ಗುಜರಾತ್ ಎಟಿಎಸ್, ಭಾರತೀಯ ಕರಾವಳಿ ರಕ್ಷಕ ಪಡೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಕ್ಷದ್ವೀಪದಿಂದ ವಾಯುವ್ಯಕ್ಕೆ 160 ನಾಟಿಕಲ್ ಮೈಲಿ ಮತ್ತು ಮುಂಬೈನಿಂದ ನೈಋತ್ಯಕ್ಕೆ 490 ನಾಟಿಕಲ್ ಮೈಲಿ ದೂರದಲ್ಲಿರುವ ಭಾರತದ EEZ ನಲ್ಲಿ ಇರಾನಿನ ದೋಣಿಯಿಂದ 526 ಕೆಜಿ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಐದು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದ್ದು, ವ್ಯಾಪಕ ಜಾಲ ಮತ್ತು ಅದನ್ನು ಪಡೆಯಲು ಇದ್ದವರನ್ನು  ಗುರುತಿಸಲು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ವಿವಿಧ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಮನ್ವಯ ಮತ್ತು ಸಹಕಾರಕ್ಕೆ ಉದಾಹರಣೆಯಾಗಿರುವ 16 ದಿನಗಳ ದೀರ್ಘ ಕಾರ್ಯಾಚರಣೆಯಲ್ಲಿ ಇರಾನಿನ ದೋಣಿಯನ್ನೂ ವಶಪಡಿಸಿಕೊಳ್ಳಲಾಗಿದೆ,” ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 14 ರಿಂದ 30 ರವರೆಗೆ ನಡೆಸಲಾದ ಈ ಕಾರ್ಯಾಚರಣೆಯು ಭಾರತದ ಸಮುದ್ರದ ಗಡಿಗಳನ್ನು ಸುರಕ್ಷಿತವಾಗಿಡಲು ಗುಪ್ತಚರ ಆಧಾರಿತ ಹಾಗೂ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಮೋದಿ ಸರ್ಕಾರವು ಅನಾವರಣಗೊಳಿಸಿರುವ ಮಾದಕದ್ರವ್ಯ ನಿಯಂತ್ರಣ ಕುರಿತ ದೂರದೃಷ್ಟಿಯ ದಾಖಲೆ (2026–2029), ಜಾರಿಗೊಳಿಸುವಿಕೆಯನ್ನು ಬಲಪಡಿಸಲು, ಮಾದಕದ್ರವ್ಯ ಜಾಲಗಳನ್ನು ಧ್ವಂಸಗೊಳಿಸಲು ಮತ್ತು ನಮ್ಮ ಯುವಜನತೆ ಹಾಗೂ ಸಮಾಜವನ್ನು ಮಾದಕದ್ರವ್ಯಗಳಿಂದ ರಕ್ಷಿಸಲು ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ.

ಸುರಕ್ಷಿತ, ಆರೋಗ್ಯಕರ ಮತ್ತು ʻನಶಾ-ಮುಕ್ತʼ ಭಾರತ ನಿರ್ಮಾಣವು ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಸಂಕಲ್ಪವಾಗಿದೆ.

 

*****


(ಪ್ರಕಟಣೆ ಐ.ಡಿ.: 2317091) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati , Odia , Malayalam