ಪ್ರಕಟಣಾ ದಿನಾಂಕ:
30 SEP 2026 3:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿ (ಸಿಸಿಇಎ), 2027-28ನೇ ಸಾಲಿನ ಮಾರುಕಟ್ಟೆ ಹಂಗಾಮಿನಲ್ಲಿ ಎಲ್ಲಾ ಕಡ್ಡಾಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ ಎಸ್ ಪಿ) ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರವು 2027-28ರ ಮಾರುಕಟ್ಟೆ ಹಂಗಾಮಿನಲ್ಲಿ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ ಎಸ್ ಪಿ) ಹೆಚ್ಚಳ ಮಾಡಿದೆ, ಇದು ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಾತ್ರಿಪಡಿಸುತ್ತದೆ. ಕುಸುಬೆಗೆ ಪ್ರತಿ ಕ್ವಿಂಟಲ್‌ಗೆ 675 ರೂ. ಗಳಂತೆ ಎಂಎಸ್ ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಘೋಷಿಸಲಾಗಿದೆ, ನಂತರ ರೇಪ್ ಸೀಡ್ ಮತ್ತು ಸಾಸಿವೆ ಪ್ರತಿ ಕ್ವಿಂಟಾಲ್‌ಗೆ 413 ರೂ.ಗಳಂತೆ ಘೋಷಿಸಲಾಗಿದೆ. ದ್ವಿದಳ ಧಾನ್ಯ (ಮಸೂರ್), ಬಾರ್ಲಿ, ಕಡಲೆ ಮತ್ತು ಗೋಧಿಗೆ ಕ್ರಮವಾಗಿ ಕ್ವಿಂಟಾಲ್‌ಗೆ 390 ರೂ. ಕ್ವಿಂಟಾಲ್‌ಗೆ 136 ರೂ., ಕ್ವಿಂಟಾಲ್‌ಗೆ 83 ರೂ. ಮತ್ತು ಕ್ವಿಂಟಾಲ್‌ಗೆ 25 ರೂ.ಗಳಷ್ಟು ಹೆಚ್ಚಳವಾಗಿದೆ.
2027-28 ರ ಮಾರುಕಟ್ಟೆ ಋತುವಿಗಾಗಿ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು
(ಕ್ವಿಂಟಲ್‌ಗೆ ರೂ.)
|
ಕ್ರ. ನಂ.
|
ಬೆಳೆಗಳು
|
ಹಿಂಗಾರು ಮಾರುಕಟ್ಟೆ ಹಂಗಾಮಿಗೆ ಎಂಎಸ್ ಪಿ 2027-28
|
ಆರ್ ಎಂ ಎಸ್ ಎಸ್ 2027-28 ಉತ್ಪಾದನಾ ವೆಚ್ಚ
|
ಉತ್ಪಾದನಾ ವೆಚ್ಚದ ಮೇಲಿನ ಲಾಭಾಂಶ (ಶೇಕಡಾವಾರು)
|
ಎಂಎಸ್ ಪಿ ಆರ್ ಎಂಎಸ್ 2026-27
|
ಎಂಎಸ್ ಪಿಯಲ್ಲಿ ಹೆಚ್ಚಳ
(ಸಂಪೂರ್ಣ)
|
|
1
|
ಗೋಧಿ
|
2610
|
1264
|
106
|
2585
|
25
|
|
2
|
ಬಾರ್ಲಿ
|
2286
|
1447
|
58
|
2150
|
136
|
|
3
|
ಕಡಲೆ
|
5958
|
3751
|
59
|
5875
|
83
|
|
4
|
ದ್ವಿದಳ ಧಾನ್ಯ (ಮಸೂರ್ )
|
7390
|
3854
|
92
|
7000
|
390
|
|
5
|
ರೇಪ್ ಸೀಡ್ & ಸಾಸಿವೆ
|
6613
|
3367
|
96
|
6200
|
413
|
|
6
|
ಕುಸುವೆ
|
7215
|
4810
|
50
|
6540
|
675
|
*ಮಾನವ ಕಾರ್ಮಿಕರಿಗೆ ಬಾಡಿಗೆ, ಎತ್ತುಗಳ ಶ್ರಮ/ಯಂತ್ರದ ಶ್ರಮ, ಗುತ್ತಿಗೆ ಪಡೆದ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್‌ಗಳ ಕಾರ್ಯಾಚರಣೆಗೆ ಡೀಸೆಲ್/ವಿದ್ಯುತ್ ಇತ್ಯಾದಿ, ವಿವಿಧ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಅಂದಾಜು ಮೌಲ್ಯದಂತಹ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಒಳಗೊಂಡಿರುವ ವೆಚ್ಚವನ್ನು ಇದು ಸೂಚಿಸುತ್ತದೆ.
2027-28ರ ಮಾರುಕಟ್ಟೆ ಹಂಗಾಮಿಗಾಗಿ ಕಡ್ಡಾಯ ಹಿಂಗಾರು ಬೆಳೆಗಳಿಗೆ ಎಂಎಸ್ ಪಿ ಹೆಚ್ಚಳವು 2018-19ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿದೆ, ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂಎಸ್ ಪಿಯನ್ನು ನಿಗದಿಪಡಿಸಲಾಗಿದೆ. ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಅಂಚು ಗೋಧಿಗೆ ಶೇ.106, ನಂತರ ರೇಪ್ ಸೀಡ್ ಮತ್ತು ಸಾಸಿವೆಗೆ ಶೇ.96 ; ಮಸೂರಕ್ಕೆ ಶೇ.92 ; ಕಡಲೆಗೆ ಶೇ.59 ; ಬಾರ್ಲಿಗೆ ಶೇ.58; ಮತ್ತು ಕುಸುಬೆಗೆ ಶೇ.50. ಹಿಂಗಾರು ಬೆಳೆಗಳ ಈ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆಯು ರೈತರಿಗೆ ಲಾಭದಾಯಕ ಬೆಲೆಗಳನ್ನು ಖಾತ್ರಿಪಡಿಸುತ್ತದೆ ಮತ್ತು ಬೆಳೆ ವೈವಿಧ್ಯೀಕರಣವನ್ನು ಪ್ರೋತ್ಸಾಹಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಂತಹ ಧಾನ್ಯಗಳನ್ನು ಹೊರತುಪಡಿಸಿ ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ, ಈ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತದೆ.
2004-05 ರಿಂದ 2013-14ರ ಅವಧಿಯಲ್ಲಿ 2254 ಎಲ್ ಎಂಟಿ ಗೆ ಹೋಲಿಸಿದರೆ 2014-15 ರಿಂದ 2025-26ರ ಅವಧಿಯಲ್ಲಿ ಗೋಧಿಯ ಖರೀದಿಯು 3715 ಎಲ್ ಎಂಟಿ ಗೆ ಹೆಚ್ಚಾಗಿದೆ. 2004-05 ರಿಂದ 2013-14ರ ಅವಧಿಯಲ್ಲಿ 2302 ಎಲ್ ಎಂ ಟಿ ಗೆ ಹೋಲಿಸಿದರೆ 2014-15 ರಿಂದ 2025-26ರ ಅವಧಿಯಲ್ಲಿ ಆರು ಹಿಂಗಾರಿನ ಬೆಳೆಗಳ ಖರೀದಿಯು 3921 ಎಲ್ ಎಂಟಿ ಗೆ ಹೆಚ್ಚಾಗಿದೆ.
2014-15 ರಿಂದ 2025-26ರ ಅವಧಿಯಲ್ಲಿ ಗೋಧಿ ಬೆಳೆಯುವ ರೈತರಿಗೆ ಪಾವತಿಸಲಾದ ಕನಿಷ್ಠ ಬೆಂಬಲ ಬೆಲೆ ರೂ. 2004-05 ರಿಂದ 2013-14 ರವರೆಗಿನ ಅವಧಿಯಲ್ಲಿ ರೂ.2.56 ಲಕ್ಷ ಕೋಟಿಗಳಿಗೆ ಹೋಲಿಸಿದರೆ 7.31 ಲಕ್ಷ ಕೋಟಿಗಳು. 2014-15 ರಿಂದ 2025-26 ರವರೆಗಿನ ಅವಧಿಯಲ್ಲಿ ಆರು ಹಿಂಗಾರು ಬೆಳೆಗಳನ್ನು ಬೆಳೆಯುವ ರೈತರಿಗೆ ಪಾವತಿಸಲಾದ ಎಂ ಎಸ್ ಪಿ ಮೊತ್ತವು2004-05 ರಿಂದ 2013-14 ರವರೆಗಿನ ಅವಧಿಯಲ್ಲಿ 2.65 ಲಕ್ಷ ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 8.36 ಲಕ್ಷ ಕೋಟಿ ರೂಪಾಯಿ ಗಳಿಗಿಂತ ಹೆಚ್ಚಾಗಿದೆ.
*****