ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದ ಪುರುಷರ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅನಂತ್ಜೀತ್ ಸಿಂಗ್ ನರುಕಾ, ಭವ್ತೇಗ್ ಸಿಂಗ್ ಗಿಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 SEP 2026 10:30PM by PIB Bengaluru

ಏಷ್ಯನ್ ಕ್ರೀಡಾಕೂಟದ ಪುರುಷರ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅನಂತ್ಜೀತ್ ಸಿಂಗ್ ನರುಕಾ, ಭವ್ತೇಗ್ ಸಿಂಗ್ ಗಿಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು ಮತ್ತು ಇದನ್ನು ಹೆಮ್ಮೆಯ ಸಾಧನೆ ಎಂದು ಬಣ್ಣಿಸಿದರು.

ಅವರುಗಳ ಏಕಾಗ್ರತೆ ಮತ್ತು ತಂಡದ ಸಹಕಾರವು ಮಾದರಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅಲ್ಲದೆ, ಅವರುಗಳ ಮುಂದಿನ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು 'ಎಕ್ಸ್' ತಾಣದಲ್ಲಿ ಹೀಗೆ ಸಂದೇಶ ಹಂಚಿಕೊಂಡಿದೆ:

"ಏಷ್ಯನ್ ಕ್ರೀಡಾಕೂಟದಲ್ಲಿ ಹೆಮ್ಮೆಯ ಸಾಧನೆ!

ಪುರುಷರ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅನಂತ್ಜೀತ್ ಸಿಂಗ್ ನರುಕಾ, ಭವ್ತೇಗ್ ಸಿಂಗ್ ಗಿಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಅವರಿಗೆ ಅಭಿನಂದನೆಗಳು. ಅವರುಗಳ ಏಕಾಗ್ರತೆ ಮತ್ತು ತಂಡದ ಸಹಕಾರವು ಮಾದರಿಯಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2314697) ವಿಸಿಟರ್ ಕೌಂಟರ್ : 26
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Telugu , Malayalam