ಪ್ರಧಾನ ಮಂತ್ರಿಯವರ ಕಛೇರಿ
ಏಕ ಕೊಂಬಿನ ಘೇಂಡಾಮೃಗದ ಸಂರಕ್ಷಣಾ ಉಪಕ್ರಮವನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನಗಳನ್ನು ವಿವರಿಸುವ ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
23 SEP 2026 2:25PM by PIB Bengaluru
ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಬರೆದ ಲೇಖನವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಭಾರತದ ಘೇಂಡಾಮೃಗದ ವೃದ್ಧಿಯ ವಿಷಯವು, ಈ ಜಾತಿಯ ಮೃಗಗಳ ಗಮನಾರ್ಹ ಚೇತರಿಕೆಯ ವಿಶೇಷ ಕಥೆಯಾಗಿದೆ ಎಂದು ಪ್ರಧಾನಮಂತ್ರಿಯವರು ಗಮನಿಸಿದರು. ಖಡ್ಗಮೃಗಗಳ ಸಂಖ್ಯೆಯು ನಿರಂತರ ಬೆಳವಣಿಗೆಯನ್ನು ತೋರಿಸುತ್ತಿರುವುದರಿಂದ, ಭಾರತವು ಈಗ ದೊಡ್ಡ ಒಂದು ಕೊಂಬಿನ ಘೇಂಡಾಮೃಗದ ವಿಶ್ವದ ಪ್ರಮುಖ ರಕ್ಷಕರಲ್ಲಿ ಒಂದಾಗಿದೆ ಮತ್ತು ಈ ಮೃಗದ ಜಾತಿಗಳನ್ನು ಉಳಿಸಿಕೊಳ್ಳುವ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳನ್ನು ರಕ್ಷಿಸುವುದು ಅದರ ಭವಿಷ್ಯದ ಕೇಂದ್ರವಿಷಯವಾಗಿದೆ ಎಂದು ಅವರು ಹೇಳಿದರು. ಎಲ್ಲರೂ ಓದಲೇಬೇಕಾದ ಕೇಂದ್ರ ಸಚಿವರ ಈ ಲೇಖನವು ಕೇಂದ್ರ ಸರ್ಕಾರದ ಪ್ರಯತ್ನಗಳು ಸಂರಕ್ಷಣಾ ಉಪಕ್ರಮವನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೋದಿ ಅವರು ಗಮನಸೆಳೆದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ನಲ್ಲಿ:
"ಭಾರತದ ಖಡ್ಗಮೃಗದ ಕಥೆಯು , ಈ ಮೃಗ ಜಾತಿಯ ಗಮನಾರ್ಹ ಚೇತರಿಕೆಯ ವಿಷಯವಾಗಿದೆ.
ಖಡ್ಗಮೃಗದ ಸಂಖ್ಯೆಯು ನಿರಂತರ ಬೆಳವಣಿಗೆಯನ್ನು ತೋರಿಸುತ್ತಿರುವುದರಿಂದ, ಭಾರತವು ಈಗ ದೊಡ್ಡ ಏಕ ಕೊಂಬು ಖಡ್ಗಮೃಗದ ವಿಶ್ವದ ಪ್ರಮುಖ ರಕ್ಷಕರಲ್ಲಿ ಒಂದಾಗಿದೆ. ಈ ಮೃಗ ಜಾತಿಗಳನ್ನು ಉಳಿಸಿಕೊಳ್ಳುವ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳನ್ನು ರಕ್ಷಿಸುವುದು ಅದರ ಭವಿಷ್ಯದ ಕೇಂದ್ರವಾಗಿದೆ.
ಕೇಂದ್ರ ಸಚಿವರಾದ ಶ್ರೀ @byadavbjp ಅವರ ಈ ಓದಲೇಬೇಕಾದ ಲೇಖನವು ಕೇಂದ್ರ ಸರ್ಕಾರದ ಪ್ರಯತ್ನಗಳು ಸಂರಕ್ಷಣಾ ಪ್ರಯಾಣವನ್ನು ಹೇಗೆ ಬಲಪಡಿಸುತ್ತಿವೆ ಎಂಬುದನ್ನು ಉಲ್ಲೇಖಿಸುತ್ತದೆ."
*****
(ಪ್ರಕಟಣೆ ಐ.ಡಿ.: 2314340)
ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam