ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 27ರ ಭಾನುವಾರದಂದು ಕಾರ್ಯನಿರ್ವಹಿಸಲಿರುವ ಬ್ಯಾಂಕ್‌ಗಳು

ಪ್ರಕಟಣಾ ದಿನಾಂಕ: 23 SEP 2026 12:54PM by PIB Bengaluru

'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್' (ಯುಎಫ್ ಬಿಯು) 2026ರ ಸೆಪ್ಟೆಂಬರ್ 28 ರಿಂದ 30 ರವರೆಗೆ ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮತ್ತು ಅದಕ್ಕೆ ಮುನ್ನ ಬರುವ ಸೆಪ್ಟೆಂಬರ್ 26 ಹಾಗೂ 27ರ ವಾರಾಂತ್ಯದ ರಜಾದಿನಗಳನ್ನು ಗಮನದರಿಸಿಕೊಂಡು ಜನರ ಬ್ಯಾಂಕಿಂಗ್ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸಾರ್ವಜನಿಕರ ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ದೀರ್ಘಕಾಲದವರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು 2026ರ ಸೆಪ್ಟೆಂಬರ್ 27ಭಾನುವಾರದಂದು ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ 2026ರ ಸೆ. 27 ರಂದು ಎಲ್ಲಾ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಸಂಯೋಜಿತ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್‌ಗಳು (ನಗದು ಸಂಗ್ರಹಣಾ ಕೇಂದ್ರಗಳು) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿದೆ.

ಬ್ಯಾಂಕ್ ಗ್ರಾಹಕರ ಹಿತ ಮತ್ತು ಅನುಕೂಲಕ್ಕೆ ಕೇಂದ್ರ ಸರ್ಕಾರವು ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಇಲಾಖೆಯು ಪುನರುಚ್ಚರಿಸುತ್ತದೆ. ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಮುಷ್ಕರವನ್ನು ಮುಂದೂಡುವಂತೆ ಸಂಘಟನೆಗಳಿಗೆ ಮನವಿ ಮಾಡಿವೆ ಹಾಗೂ ಅಗತ್ಯ ಬ್ಯಾಂಕಿಂಗ್ ಸೇವೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದೆ.

 

*****


(ಪ್ರಕಟಣೆ ಐ.ಡಿ.: 2313805) ವಿಸಿಟರ್ ಕೌಂಟರ್ : 115
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Assamese , Bengali , Gujarati , Tamil , Telugu , Malayalam