ಗೃಹ ವ್ಯವಹಾರಗಳ ಸಚಿವಾಲಯ
ಗೃಹ ವ್ಯವಹಾರಗಳ ಸಚಿವಾಲಯದಿಂದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 'ಶಹಜಾದ್ ಭಟ್ಟಿ’ ಜಾಲ ಭಯೋತ್ಪಾದಕ ಸಂಘಟನೆ ಎಂದು ಘೋಷಣೆ - ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕನುಗುಣವಾಗಿ ಈ ಕ್ರಮ
ಯುವಜನರು ಹಾಗೂ ಸಣ್ಣಪುಟ್ಟ ಅಪರಾಧಿಗಳನ್ನು ಭಯೋತ್ಪಾದನೆಯತ್ತ ಪ್ರಚೋದಿಸುತ್ತಿರುವ ಈ ಗುಂಪಿನಿಂದ ಗಡಿಗಳ ಮೂಲಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ
ಭಾರತದ ಪ್ರಜಾಪ್ರಭುತ್ವ ರಚನೆ ಮತ್ತು ಕೋಮು ಸೌಹಾರ್ದತೆಯ ಚೌಕಟ್ಟನ್ನು ಗುರಿಯಾಗಿಸಿಕೊಂಡು, ಆ ಗುಂಪಿನಿಂದ ದ್ವೇಷಭರಿತ ಡಿಜಿಟಲ್ ವಿಚಾರ ಪ್ರಕಟ
ಪ್ರಕಟಣಾ ದಿನಾಂಕ:
16 SEP 2026 7:44PM by PIB Bengaluru
ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ'ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುನ್ನೋಟವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು 'ಶಹಜಾದ್ ಭಟ್ಟಿ ಜಾಲ’ವನ್ನು 'ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ' (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಇಂದು ತಿಳಿಸಿದ್ದಾರೆ.
ಶ್ರೀ ಅಮಿತ್ ಶಾ ಅವರು 'ಎಕ್ಸ್' ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ, "ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುನ್ನೋಟಕ್ಕನುಗುಣವಾಗಿ, ಗೃಹ ವ್ಯವಹಾರಗಳ ಸಚಿವಾಲಯವು 'ಶಹಜಾದ್ ಭಟ್ಟಿ ಜಾಲ'ವನ್ನು 'ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ' (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಈ ಗುಂಪು ಗಡಿಯಾಚೆಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದೆಯಲ್ಲದೇ, ಯುವಕರು ಹಾಗೂ ಸಣ್ಣಪುಟ್ಟ ಅಪರಾಧಿಗಳನ್ನು ಭಯೋತ್ಪಾದನೆಯತ್ತ ಪ್ರಚೋದಿಸುವ ಕೆಲಸವನ್ನೂ ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯ ಚೌಕಟ್ಟನ್ನು ಗುರಿಯಾಗಿಸಿಕೊಂಡಿರುವ ಈ ಜಾಲವು, ದ್ವೇಷಭರಿತ ಡಿಜಿಟಲ್ ವಿಷಯವನ್ನೂ ಪ್ರಕಟಿಸಿದೆ.”
*****
(ಪ್ರಕಟಣೆ ಐ.ಡಿ.: 2311176)
ವಿಸಿಟರ್ ಕೌಂಟರ್ : 14