ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಸೆಪ್ಟೆಂಬರ್ 17 ರಂದು ನವದೆಹಲಿಯಲ್ಲಿ ಸೆಮಿಕಾನ್ ಇಂಡಿಯಾ 2026 ಉದ್ಘಾಟನೆ


ಸೆಮಿಕಾನ್ ಇಂಡಿಯಾ 2026ರ ವಿಷಯ: 'ಸಿಲಿಕಾನ್ ಟು ಸಿಸ್ಟಮ್ಸ್: ಬಿಲ್ಡಿಂಗ್ ದಿ ಎಕೋಸಿಸ್ಟಮ್'

52 ದೇಶಗಳ 600ಕ್ಕೂ ಅಧಿಕ ಕಂಪನಿಗಳು ಮತ್ತು ಪ್ರತಿನಿಧಿಗಳು ಭಾಗಿ

ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್ ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್‌ನ ಆರು ದೇಶಗಳ ಮಳಿಗೆಗಳನ್ನು  ಒಳಗೊಂಡ  ಸೆಮಿಕಾನ್ ಇಂಡಿಯಾ 2026

ಪ್ರಕಟಣಾ ದಿನಾಂಕ: 16 SEP 2026 11:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಯಶೋಭೂಮಿಯಲ್ಲಿ ಸೆಮಿಕಾನ್ ಇಂಡಿಯಾ 2026 ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

2026ರ ಸೆಪ್ಟೆಂಬರ್ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನ ಮತ್ತು ಪ್ರದರ್ಶನವನ್ನು 'ಸಿಲಿಕಾನ್ ಟು ಸಿಸ್ಟಮ್ಸ್: ಬಿಲ್ಡಿಂಗ್ ದಿ ಎಕೋಸಿಸ್ಟಮ್' ಎಂಬ ವಿಷಯದ ಮೇಲೆ ಆಯೋಜಿಸಲಾಗಿದೆ. ಇದು ಜಾಗತಿಕ ಮತ್ತು ಭಾರತೀಯ ಕಂಪನಿಗಳು, ನೀತಿ ನಿರೂಪಕರು, ಹೂಡಿಕೆದಾರರು, ಸಂಶೋಧಕರು, ಸ್ಟಾರ್ಟ್-ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಮೌಲ್ಯ ಸರಣಿಯಾದ್ಯಂತದ ವಿದ್ಯಾರ್ಥಿಗಳನ್ನು ಒಗ್ಗೂಡಿಸುತ್ತದೆ. ಈ ಸಮ್ಮೇಳನವು ಭಾರತದಲ್ಲಿ ಸಹಯೋಗ, ಹೂಡಿಕೆ, ನಾವೀನ್ಯತೆ ಮತ್ತು ಪ್ರತಿಭೆಗಳ ಪೋಷಣೆಯನ್ನು ಮುಂದುವರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಸಮಾನಾಂತರ ಗೋಷ್ಠಿಗಳು ಪ್ರದರ್ಶನ ಉದ್ಯಮದಲ್ಲಿನ ಪ್ರಗತಿಗಳು, ಸಹಯೋಗ ಮತ್ತು ಜಂಟಿ ಉದ್ಯಮಗಳನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಆರು ದೇಶ ದುಂಡುಮೇಜಿನ ಸಭೆಗಳು, ಮಹಿಳಾ ನಾಯಕತ್ವದ ಕುರಿತಾದ ವೇದಿಕೆ, ಇತರ ಗೋಷ್ಠಿಗಳನ್ನು ಒಳಗೊಂಡಿರುತ್ತವೆ.

ಸೆಮಿಕಾನ್ ಇಂಡಿಯಾ 2026 ಸಮಗ್ರ ಮೌಲ್ಯ-ಸರಣಿ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ, ಇದು ಸೆಮಿಕಂಡಕ್ಟರ್ ಸಾಮಗ್ರಿಗಳು, ಉಪಕರಣಗಳು ಮತ್ತು ಚಿಪ್ ವಿನ್ಯಾಸದಿಂದ ಫ್ಯಾಬ್ರಿಕೇಶನ್, ಸುಧಾರಿತ ಪ್ಯಾಕೇಜಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ವ್ಯವಸ್ಥೆಗಳವರೆಗಿನ ಪಯಣವನ್ನು ಪ್ರದರ್ಶಿಸುತ್ತದೆ. ಹೊಸ 'ಮರಳಿನಿಂದ ಸಿಲಿಕಾನ್‌ಗೆ ವ್ಯವಸ್ಥೆಗಳು' ಮೌಲ್ಯ ಸರಣಿ ಅನುಭವವು ಸೆಮಿಕಂಡ್ಟಕರ್ ಪೂರಕ ವ್ಯವಸ್ಥೆಯಾದ್ಯಂತ ಈ ಪಯಣವನ್ನು ಪ್ರಸ್ತುತಪಡಿಸುತ್ತದೆ.

ಸೆಮಿಕಾನ್ ಇಂಡಿಯಾ 2026 ರಲ್ಲಿ 600 ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ ಮತ್ತು ಸುಮಾರು 50,000 ಸಂದರ್ಶಕರನ್ನು ಆಕರ್ಷಿಸುವ ನಿರೀಕ್ಷೆಯಿದೆ, 52 ದೇಶಗಳ ಪ್ರತಿನಿಧಿಗಳು, 400 ಕ್ಕೂ ಅಧಿಕ ಕಾರ್ಯನಿರ್ವಾಹಕರು ಮತ್ತು 150ಕ್ಕೂ ಅಧಿಕ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನವು ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್ ಅನ್ನು ಪ್ರತಿನಿಧಿಸುವ ಆರು ದೇಶ ಮಳಿಗೆಗಳು, ಜೊತೆಗೆ 12 ರಾಜ್ಯ ಬೂತ್‌ಗಳು, ಸ್ಟಾರ್ಟ್‌ಅಪ್ ಪೆವಿಲಿಯನ್, ನಾವೀನ್ಯತೆ ಪ್ರದರ್ಶನ, ವಿದ್ಯಾರ್ಥಿ ಹ್ಯಾಕಥಾನ್ ಮತ್ತು ದುಡಿಯುವಪಡೆ ಅಭಿವೃದ್ಧಿ ಮಂಟಪವನ್ನು ಒಳಗೊಂಡಿರುತ್ತದೆ.

 

*****


(ಪ್ರಕಟಣೆ ಐ.ಡಿ.: 2310800) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , Malayalam , English , हिन्दी , Bengali , Assamese , Punjabi , Gujarati , Telugu