ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣ ಭಾರತದ ಬಾಗಿಲಿಗೆ ನಿವೃತ್ತಿ ಭದ್ರತೆಯನ್ನು ಕೊಂಡೊಯ್ಯಲಿರುವ ಪಿಂಚಣಿ ಸಖಿಯರು
ಮಹಿಳಾ ನೇತೃತ್ವದ ಎನ್ ಆರ್ ಎಲ್ ಎಂ ಸಮುದಾಯ ಜಾಲದ ಮೂಲಕ ಪಿಂಚಣಿ ವ್ಯಾಪ್ತಿ ವಿಸ್ತರಣೆಗೆ ಕೈಜೋಡಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಿ ಎಫ್ ಆರ್ ಡಿ ಎ
ಪ್ರಕಟಣಾ ದಿನಾಂಕ:
15 SEP 2026 8:54AM by PIB Bengaluru
ಗ್ರಾಮೀಣ ಕುಟುಂಬಗಳಿಗೆ ಪಿಂಚಣಿಯ ಬಗ್ಗೆ ಅರಿವು ಮೂಡಿಸಲು ಮತ್ತು ನಿವೃತ್ತಿ ಭದ್ರತೆಯನ್ನು ಕೊಂಡೊಯ್ಯುವ ಪ್ರಮುಖ ಹೆಜ್ಜೆಯಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ (ಡಿಒಆರ್ ಡಿ) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಇಂದು ಗ್ರಾಮೀಣ ಭಾರತದಾದ್ಯಂತ 'ಪಿಂಚಣಿ ಸಖಿಯರ' ಸಮುದಾಯ ಆಧಾರಿತ ಸಂಪರ್ಕ ಕಾರ್ಯವಿಧಾನ ರಚಿಸಲು ಮತ್ತು ಬೆಂಬಲಿಸಲು ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್ ಅವರ ಸಮ್ಮುಖದಲ್ಲಿ ಡಿಒಆರ್ ಡಿ ಜಂಟಿ ಕಾರ್ಯದರ್ಶಿ ಶ್ರೀ ಅಮಿತ್ ಶುಕ್ಲಾ ಮತ್ತು ಪಿಎಫ್ ಆರ್ ಡಿಎ (PFRDA) ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸುಮೀತ್ ಕೌರ್ ಕಪೂರ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಪಾಲುದಾರಿಕೆಯು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಸೃಷ್ಟಿಸಲಾದ ವ್ಯಾಪಕವಾದ ಸಮುದಾಯ ಸಾಂಸ್ಥಿಕ ಜಾಲವನ್ನು ಅಂದರೆ ಬ್ಯಾಂಕಿಂಗ್ ಕರಸ್ಪಾಂಡೆಂಟ್ (ಬಿಸಿ) ಸಖಿಯರುಮತ್ತು ಇತರ ತರಬೇತಿ ಪಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು. ಪಿಂಚಣಿ ಅರಿವು, ಆರ್ಥಿಕ ಸಾಕ್ಷರತೆ, ದಾಖಲಾತಿ ಮತ್ತು ದಾಖಲಾತಿಯ ನಂತರದ ನೆರವನ್ನು ಗ್ರಾಮೀಣ ಮನೆಗಳಿಗೆ ಹತ್ತಿರವಾಗಿಸಲು ಪ್ರಯತ್ನಿಸುತ್ತದೆ.
ಈ ಉಪಕ್ರಮವು ಮಹಿಳಾ ನೇತೃತ್ವದ ಸ್ವಸಹಾಯ ಸಂಘದ ಸಾಂಸ್ಥಿಕ ಚೌಕಟ್ಟಿನ ಬಲವನ್ನು ಬಳಸಿಕೊಂಡು ಪಿಂಚಣಿ ವ್ಯಾಪ್ತಿಯಲ್ಲಿನ ಮೂಲಭೂತ ಸವಾಲಗಳನ್ನು ಅಂದರೆ ಅಧಿಕೃತ ಹಣಕಾಸು ಸಲಹೆ ಮತ್ತು ನಿವೃತ್ತಿ ಯೋಜನಾ ಸೇವೆಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವ ಮನೆಗಳನ್ನು ತಲುಪುವುದನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಹೊಸ ಪಾಲುದಾರಿಕೆಯಡಿಯಲ್ಲಿ ಪಿಂಚಣಿ ಸಖಿಯರು ವಿಶ್ವಾಸಾರ್ಹ ಸಮುದಾಯ ಮಟ್ಟದ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ, ವಿಶೇಷವಾಗಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮೀಣ ಮಹಿಳೆಯರು, ಲಖ್ಪತಿ ದೀದಿಗಳು ಮತ್ತು ಇತರ ಗ್ರಾಮೀಣ ಭಾಗವಹಿಸುವವರನ್ನು ತಲುಪುತ್ತಾರೆ. ಅವರು ಪಿಂಚಣಿ ಮತ್ತು ನಿವೃತ್ತಿ ಯೋಜನೆಯ ಬಗ್ಗೆ ಮಾಹಿತಿಯೊಂದಿಗೆ ಮನೆಗಳನ್ನು ಬೆಂಬಲಿಸುತ್ತಾರೆ, ನೋಂದಣಿಯನ್ನು ಸುಗಮಗೊಳಿಸುತ್ತಾರೆ ಮತ್ತು ಪಿಂಚಣಿ ಸಂಬಂಧಿತ ಸೇವೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್, ಸ್ವಸಹಾಯ ಸಂಘದ ಆಂದೋಲನದಲ್ಲಿ ಭಾಗವಹಿಸುವ ಗ್ರಾಮೀಣ ಕುಟುಂಬಗಳು ವಿಶಿಷ್ಟ ಉಳಿತಾಯ ಮಾದರಿಗಳು, ಜೀವನೋಪಾಯ ಸೈಕಲ್ ಗಳು ಮತ್ತು ಅಪಾಯದ ಪ್ರೊಫೈಲ್‌ಗಳನ್ನು ಹೊಂದಿವೆ ಮತ್ತು ಆದ್ದರಿಂದ ಸಾಮಾಜಿಕ ಭದ್ರತೆಯು ಸುಸ್ಥಿರ ಸಮೃದ್ಧಿಯ ಮಿಷನ್‌ನ ದೊಡ್ಡ ಉದ್ದೇಶದ ಪ್ರಮುಖ ಭಾಗವಾಗಬೇಕು ಎಂದು ಹೇಳಿದರು.
"ಸಾಮಾಜಿಕ ಭದ್ರತೆಯು ದುರ್ಬಲತೆಯ ವಿರುದ್ಧ ರಕ್ಷಣಾ ಅಸ್ತ್ರ ಮಾತ್ರವಲ್ಲ; ಇದು ನಿರಂತರ ಆರ್ಥಿಕ ಪ್ರಗತಿಯನ್ನು ಅನುಸರಿಸಲು ಮನೆಗಳಿಗೆ ವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡುವ ಬಗ್ಗೆಯೂ ಆಗಿದೆ" ಎಂದು ಅವರು ಒತ್ತಿ ಹೇಳಿದರು.
ಪಿಂಚಣಿ ಅರಿವು ಮತ್ತು ಆರ್ಥಿಕ ಸಾಕ್ಷರತೆಯನ್ನು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಂಬಿಕೆಯ ಮೇಲೆ ನಿರ್ಮಿಸಬೇಕು ಎಂದು ಶ್ರೀ ಕನ್ಸಾಲ್ ಒತ್ತಿ ಹೇಳಿದರು. ಗ್ರಾಮೀಣ ನಾಗರಿಕರು ತಮ್ಮ ದೀರ್ಘಕಾಲೀನ ಆರ್ಥಿಕ ಭದ್ರತೆಯ ಬಗ್ಗೆ ತಿಳಿವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಸ್ಪಷ್ಟ ಮತ್ತು ಪಾರದರ್ಶಕ ಮಾಹಿತಿಯನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವ ಮಹತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಹೆಚ್ಚುತ್ತಿರುವ ಜೀವಿತಾವಧಿ ಮತ್ತು ಬದಲಾಗುತ್ತಿರುವ ಜನಸಂಖ್ಯಾ ಮಾದರಿಗಳ ಸಂದರ್ಭದಲ್ಲಿ ನಿವೃತ್ತಿ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಶ್ರೀಮತಿ ಮಮತಾ ಶಂಕರ್ ಪ್ರಮುಖವಾಗಿ ಪ್ರಸ್ತಾಪಿಸಿದರು. ನಿವೃತ್ತಿ ಮತ್ತು ಸಾಮಾಜಿಕ-ಭದ್ರತಾ ಕಾರ್ಯವಿಧಾನಗಳ ಹೊರಗೆ ಉಳಿದಿರುವ ಗ್ರಾಮೀಣ ಕುಟುಂಬಗಳಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಸೇರಿದಂತೆ ಪಿಂಚಣಿ ವಿಧಾನಗಳ ಅರಿವು ಮತ್ತು ಅಳವಡಿಕೆಯನ್ನು ಪಾಲುದಾರಿಕೆ ಗಣನೀಯವಾಗಿ ಸುಧಾರಿಸುತ್ತದೆ ಎಂದು ಅವರು ಆಶಿಸಿದರು.
ಈ ಸಹಯೋಗವು ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳು ಮತ್ತು ಇಲಾಖೆಯ ಸ್ವಂತ LoKoS ವ್ಯವಸ್ಥೆ ಸೇರಿದಂತೆ ಮೊಬೈಲ್ ಮತ್ತು ವೆಬ್ ಆಧಾರಿತ ಪರಿಹಾರಗಳ ಮೂಲಕ ಸಂಪರ್ಕ ಮತ್ತು ದಾಖಲಾತಿಯ ಮೇಲ್ವಿಚಾರಣೆ ಬಲಪಡಿಸುತ್ತದೆ, ಇದು ಭಾಗವಹಿಸುವ ಸಂಸ್ಥೆಗಳು ಪ್ರಗತಿಯನ್ನು ಟ್ರ್ಯಾಕ್ ಮಾಡಲು ಮತ್ತು ವ್ಯಾಪ್ತಿಯಲ್ಲಿನ ಅಂತರವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಮೇಲ್ವಿಚಾರಣೆ ಮತ್ತು ಸೇವಾ ವಿತರಣೆಗಾಗಿ ಸೂಕ್ತವಾದ ಡಿಜಿಟಲ್ ವ್ಯವಸ್ಥೆಗಳಿಂದ ಸಮುದಾಯ ಮಟ್ಟದ ಸಂಪರ್ಕವನ್ನು ಬೆಂಬಲಿಸಲಾಗುತ್ತದೆ.
ಒಪ್ಪಂದವು ಎರಡು ಪೂರಕ ಸಾಮರ್ಥ್ಯಗಳನ್ನು ಒಟ್ಟುಗೂಡಿಸುತ್ತದೆ: ಅವುಗಳೆಂದರೆ ಪಿಂಚಣಿ ನಿಯಂತ್ರಣ ಮತ್ತು ನಿವೃತ್ತಿ-ಭದ್ರತಾ ವ್ಯವಸ್ಥೆಗಳಲ್ಲಿ PFRDA ಯ ಪರಿಣತಿ ಮತ್ತು ಮಹಿಳಾ ಸಾಮೂಹಿಕ ಮತ್ತು ತರಬೇತಿ ಪಡೆದ ತಳಮಟ್ಟದ ಕೇಡರ್‌ಗಳ ಮೂಲಕ DAY-NRLM ನ ಸಾಟಿಯಿಲ್ಲದ ಸಮುದಾಯ ವ್ಯಾಪ್ತಿಯು. ಈ ಪಾಲುದಾರಿಕೆಯು ಈ ಸಾಂಸ್ಥಿಕ ವ್ಯಾಪ್ತಿಯನ್ನು ಗ್ರಾಮೀಣ ಭಾರತದಾದ್ಯಂತ ನಿರಂತರ ಪಿಂಚಣಿ-ಅರಿವು ಮತ್ತು ದಾಖಲಾತಿ ಪ್ರಯತ್ನವಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ಬ್ಯಾಂಕಿಂಗ್ ಮತ್ತು ಜೀವನೋಪಾಯ ಲಭ್ಯತೆಯನ್ನು ಸುಗಮಗೊಳಿಸುವುದರಿಂದ ಹಿಡಿದು ಗ್ರಾಮೀಣ ಕುಟುಂಬಗಳು ದೀರ್ಘಾವಧಿಯ ಆರ್ಥಿಕ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಸಹಾಯ ಮಾಡುವವರೆಗೆ ಮಿಷನ್‌ನ ಸಮುದಾಯ ಪಡೆಗಳ ಪಾತ್ರದಲ್ಲಿ ಈ ಉಪಕ್ರಮವು ಒಂದು ಪ್ರಮುಖ ವಿಕಸನವನ್ನು ಗುರುತಿಸುತ್ತದೆ.
ಭಾರತದ ಗ್ರಾಮೀಣ ಕುಟುಂಬಗಳು ಸಾಂಸ್ಥಿಕ ಹಣಕಾಸು ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿವೆ, ಆದರೆ ಬ್ಯಾಂಕಿಂಗ್‌ಗೆ ಪ್ರವೇಶವು ಸ್ವಯಂಚಾಲಿತವಾಗಿ ಸಾಕಷ್ಟು ನಿವೃತ್ತಿ ಯೋಜನೆಯಾಗಿ ಪರಿವರ್ತನೆಯಾಗುತ್ತಿಲ್ಲ. ಕೃಷಿ, ಅಸಂಘಟಿತ ಉದ್ಯೋಗ ಮತ್ತು ಸಣ್ಣ ಉದ್ಯಮಗಳ ಮೇಲೆ ಅವಲಂಬಿತವಾಗಿರುವ ಅನೇಕ ಕುಟುಂಬಗಳಿಗೆ, ಆದಾಯವು ಅನಿಯಮಿತವಾಗಿರಬಹುದು ಮತ್ತು ಆರ್ಥಿಕ ಆಘಾತಗಳಿಗೆ ಗುರಿಯಾಗಬಹುದು. ಆದ್ದರಿಂದ ಜಾಗೃತಿ ಮೂಡಿಸುವುದು ಮತ್ತು ಆರಂಭಿಕ, ಮಾಹಿತಿಯುಕ್ತ ಪಿಂಚಣಿ ಭಾಗವಹಿಸುವಿಕೆ ಪ್ರೋತ್ಸಾಹಿಸುವುದು ಮನೆಯ ಆರ್ಥಿಕ ಸ್ಥಿತಿಸ್ಥಾಪಕತ್ವದ ಪ್ರಮುಖ ಅಂಶವಾಗಬಹುದು. ಆದ್ದರಿಂದ ಈ ಉಪಕ್ರಮವು ಗ್ರಾಮೀಣ ಹಣಕಾಸು ಸೇರ್ಪಡೆ ಕಾರ್ಯಸೂಚಿಯಲ್ಲಿ ವಿಶಾಲ ಬದಲಾವಣೆಗೆ ಕೊಡುಗೆ ನೀಡುತ್ತದೆ ಅದೆಂದರೆ, ಹಣಕಾಸು ಸೇವೆಗಳ ಲಭ್ಯತೆಯಿಂದ ಮಾಹಿತಿಯುಕ್ತ ಭಾಗವಹಿಸುವಿಕೆ, ದೀರ್ಘಕಾಲೀನ ಉಳಿತಾಯ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವದ ಕಡೆಗೆ ಸಾಗುವುದು.

2026ರ ಸೆಪ್ಟೆಂಬರ್ 14 ರಂದು ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಿ ಇ ಆರ್ ಡಿ ಎ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ.
*****
(ಪ್ರಕಟಣೆ ಐ.ಡಿ.: 2310412)
ವಿಸಿಟರ್ ಕೌಂಟರ್ : 24