ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜರ್ಮನಿಯ ಚಾನ್ಸೆಲರ್ ರಿಂದ ದೂರವಾಣಿ ಕರೆ
ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಾಗಿರುವ ಗಣನೀಯ ಪ್ರಗತಿಯ ಬಗ್ಗೆ ಉಭಯ ನಾಯಕರ ತೃಪ್ತಿ
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚೆ
ಪ್ರಕಟಣಾ ದಿನಾಂಕ:
10 SEP 2026 6:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜರ್ಮನಿ ಫೆಡರಲ್ ರಿಪಬ್ಲಿಕ್ ನ ಚಾನ್ಸೆಲರ್ ಮಾನ್ಯ ಫ್ರೆಡ್ರಿಕ್ ಮರ್ಜ್ ಅವರ ದೂರವಾಣಿ ಕರೆ ಸ್ವೀಕರಿಸಿದರು.
ಭಾರತ ಮತ್ತು ಜರ್ಮನಿಯು ರಾಜತಾಂತ್ರಿಕ ಬಾಂಧವ್ಯದ 75 ವರ್ಷಗಳನ್ನು ಆಚರಿಸುತ್ತಿರುವ ಈ ವರ್ಷದಲ್ಲಿ, ಪ್ರಧಾನಮಂತ್ರಿ ಮತ್ತು ಚಾನ್ಸೆಲರ್ ಮರ್ಜ್ ಅವರು ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಪರಾಮರ್ಶೆ ನಡೆಸಿದರು. ಉನ್ನತಮಟ್ಟದ ವಿನಿಮಯಗಳಲ್ಲಿನ ನಿರಂತರ ಆವೇಗವನ್ನು ಗಮನಿಸಿರುವ ಉಭಯರು, ವ್ಯಾಪಾರ ಮತ್ತು ಹೂಡಿಕೆ, ಸುಧಾರಿತ ತಂತ್ರಜ್ಞಾನಗಳು, ಶುದ್ಧ ಇಂಧನ, ರಕ್ಷಣೆ, ಶಿಕ್ಷಣ ಮತ್ತು ಪ್ರತಿಭಾ ಸಂಚಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಹಾಗೂ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸಮ್ಮತಿಸಿದರು.
*****
(ಪ್ರಕಟಣೆ ಐ.ಡಿ.: 2308985)
ವಿಸಿಟರ್ ಕೌಂಟರ್ : 3