ಗೃಹ ವ್ಯವಹಾರಗಳ ಸಚಿವಾಲಯ
ನವದೆಹಲಿಯಲ್ಲಿ ಘನತೆವೆತ್ತ ಪ್ರಿನ್ಸ್ ರಹೀಮ್ ಅಗಾ ಖಾನ್ V ಅವರನ್ನು ಭೇಟಿಯಾದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಮಾನವ ಅಭಿವೃದ್ಧಿಯ ಜಂಟಿ ಬದ್ಧತೆಯಿಂದ ಬೆಸೆದುಕೊಂಡಿರುವ ಅಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್‌ನೊಂದಿಗಿನ ತನ್ನ ಬಾಂಧವ್ಯವನ್ನು ಭಾರತವು ಗೌರವಿಸುತ್ತದೆ
ನಮ್ಮ ಚರ್ಚೆಗಳು ಸಾಮಾಜಿಕ ಅಭಿವೃದ್ಧಿ, ನೀರಾವರಿ, ಸಹಕಾರ ಸಂಘಗಳು, ಸಿರಿಧಾನ್ಯಗಳು ಸೇರಿದಂತೆ ನೈಸರ್ಗಿಕ ಕೃಷಿ ಮತ್ತು ಸೌರಶಕ್ತಿಯಲ್ಲಿನ ಸಹಕಾರವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು
ಸುಸ್ಥಿರ ಅಭಿವೃದ್ಧಿ ಮತ್ತು ಮಾನವೀಯತೆಯ ಮಹತ್ತರ ಒಳಿತಿಗಾಗಿ ಈ ಪಾಲುದಾರಿಕೆಗಳನ್ನು ಮುನ್ನಡೆಸುವ ನಮ್ಮ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿದೆವು
ಪ್ರಕಟಣಾ ದಿನಾಂಕ:
10 SEP 2026 9:54PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಘನತೆವೆತ್ತ ಪ್ರಿನ್ಸ್ ರಹೀಮ್ ಅಗಾ ಖಾನ್ V ಅವರನ್ನು ಭೇಟಿಯಾದರು.
'ಎಕ್ಸ್' (X) ಸಾಮಾಜಿಕ ಮಾಧ್ಯಮದ ತಮ್ಮ ಪೋಸ್ಟ್‌ನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, "ನವದೆಹಲಿಯಲ್ಲಿ ಘನತೆವೆತ್ತ ಪ್ರಿನ್ಸ್ ರಹೀಮ್ ಅಗಾ ಖಾನ್ V ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಮಾನವ ಅಭಿವೃದ್ಧಿಯ ಜಂಟಿ ಬದ್ಧತೆಯಿಂದ ಬೆಸೆದುಕೊಂಡಿರುವ ಅಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್‌ನೊಂದಿಗಿನ ತನ್ನ ಬಾಂಧವ್ಯವನ್ನು ಭಾರತವು ಗೌರವಿಸುತ್ತದೆ. ನಮ್ಮ ಚರ್ಚೆಗಳು ಸಾಮಾಜಿಕ ಅಭಿವೃದ್ಧಿ, ನೀರಾವರಿ, ಸಹಕಾರ ಸಂಘಗಳು, ಸಿರಿಧಾನ್ಯಗಳು ಸೇರಿದಂತೆ ನೈಸರ್ಗಿಕ ಕೃಷಿ ಮತ್ತು ಸೌರಶಕ್ತಿಯಲ್ಲಿನ ಸಹಕಾರವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಸುಸ್ಥಿರ ಅಭಿವೃದ್ಧಿ ಮತ್ತು ಮಾನವೀಯತೆಯ ಮಹತ್ತರ ಒಳಿತಿಗಾಗಿ ಈ ಪಾಲುದಾರಿಕೆಗಳನ್ನು ಮುನ್ನಡೆಸುವ ನಮ್ಮ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿದೆವು."
*****
(ಪ್ರಕಟಣೆ ಐ.ಡಿ.: 2308980)
ವಿಸಿಟರ್ ಕೌಂಟರ್ : 9