ಕೃಷಿ ಸಚಿವಾಲಯ
ಭಾರತ ಮತ್ತು ಮಲೇಷ್ಯಾ ದ್ವಿಪಕ್ಷೀಯ ಸಭೆ
ಭಾರತವು ಮಲೇಷ್ಯಾ, ಟಿಮೂರ್ ಲೆಸ್ಟೆ ಮತ್ತು ಮ್ಯಾನ್ಮಾರ್ ನೊಂದಿಗೆ ಕೃಷಿ ಸಹಕಾರವನ್ನು ಬಲಪಡಿಸುತ್ತದೆ
ಕೃಷಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಲೇಷ್ಯಾ, ಟಿಮೋರ್ ಲೆಸ್ಟೆ ಮತ್ತು ಮ್ಯಾನ್ಮಾರ್ ನೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು
ಆಸಿಯಾನ್ ಪಾಲುದಾರರೊಂದಿಗೆ ಕೃಷಿ ಸಂಶೋಧನೆ, ನಾವೀನ್ಯತೆ, ವ್ಯಾಪಾರ ಮತ್ತು ಆಹಾರ ಭದ್ರತೆಗಾಗಿ ಭಾರತವು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತದೆ
ಪ್ರಕಟಣಾ ದಿನಾಂಕ:
10 SEP 2026 11:04AM by PIB Bengaluru
ಸೆಪ್ಟೆಂಬರ್ 9, 2026 ರಂದು ನವದೆಹಲಿಯಲ್ಲಿ ಭಾರತದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಲೇಷ್ಯಾದ ಕೃಷಿ ಮತ್ತು ಆಹಾರ ಭದ್ರತಾ ಸಚಿವ ಘನತೆವೆತ್ತ ಶ್ರೀ ಮೊಹಮದ್ ಬಿನ್ ಸಾಬು ಅವರ ನಡುವೆ ಸಭೆ ನಡೆಯಿತು. ಸೆಪ್ಟೆಂಬರ್ 8 ಮತ್ತು 9, 2026 ರಂದು ನವದೆಹಲಿಯಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿ ಎ ಆರ್ ಇ) ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಆಯೋಜಿಸಿದ್ದ 9ನೇ ಆಸಿಯಾನ್-ಭಾರತ ಕೃಷಿ ಮತ್ತು ಅರಣ್ಯ ಸಚಿವರ ಸಭೆಯ (9ನೇ ಎಐಎಂಎಂಎಎಫ್) ಅಂಗವಾಗಿ ಈ ಸಭೆಯನ್ನು ನಡೆಸಲಾಯಿತು.
ಜ್ಞಾನ, ಪರಿಣತಿ ಮತ್ತು ಅತ್ಯುತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳುವ ಮಹತ್ವವನ್ನು ಸಚಿವರು ಗುರುತಿಸಿದರು. ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಸಾಂಸ್ಥಿಕ ಚೌಕಟ್ಟನ್ನು ಒದಗಿಸಲು ತಿಳುವಳಿಕಾ ಒಪ್ಪಂದದ (ಎಂಒಯು) ಮೂಲಕ ಜಂಟಿ ಕೃಷಿ ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಸಹಕಾರವನ್ನು ಬಲಪಡಿಸಲು ಆಸಕ್ತಿ ವ್ಯಕ್ತಪಡಿಸಿದರು. ಜರ್ಮ್ ಪ್ಲಾಸಂ (ಪ್ರಜನನ ದ್ರವ್ಯ) ವಿನಿಮಯ, ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಸ್ಪರ ಸಹಕಾರದ ಮೂಲಕ ಪರಿಹರಿಸಬಹುದು, ಇದು ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಭಾರತ ಮತ್ತು ಮಲೇಷ್ಯಾ ನಡುವಿನ ನಿಕಟ ಮತ್ತು ಬಲವಾದ ಪಾಲುದಾರಿಕೆಯನ್ನು ಬಲಪಡಿಸುತ್ತದೆ ಎಂದು ಇಬ್ಬರೂ ಸಚಿವರು ಎತ್ತಿ ತೋರಿದರು.
ಭಾರತದ ನಿಯೋಗದಲ್ಲಿ ಡಿ ಎ ಆರ್ ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್, ಡಿಎಆರ್ ಇ ಹೆಚ್ಚುವರಿ ಕಾರ್ಯದರ್ಶಿ ಮತ್ತು ಐಸಿಎಆರ್ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಜ್ಞಾನೇಂದ್ರ ದೇವ್ ತ್ರಿಪಾಠಿ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ (ಐಸಿ) ಶ್ರೀ ಎ.ಕೆ. ಸಾಹು, ಐಸಿಎಆರ್ ನ ಎಲ್ಲಾ ಉಪ ಮಹಾನಿರ್ದೇಶಕರು (ಡಿಡಿಜಿ) ಮತ್ತು ಐಸಿಎಆರ್ ನ ಎ ಡಿ ಜಿ ಐ ಆರ್ ಡಾ. ನವೀನ್ ಪಿ. ಸಿಂಗ್ ನೇತೃತ್ವದ ಅಂತರರಾಷ್ಟ್ರೀಯ ಸಂಬಂಧಗಳ ತಂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಭಾರತ ಟಿಮೂರ್ ಲೆಸ್ಟೆ ದ್ವಿಪಕ್ಷೀಯ ಸಭೆ
ನವದೆಹಲಿಯಲ್ಲಿ 2026ರ ಸೆಪ್ಟೆಂಬರ್ 8–9 ರಂದು ಡಿಎಆರ್ ಇ ಮತ್ತು ಐಸಿಎಆರ್ ಆಯೋಜಿಸಿದ್ದ 9ನೇ ಆಸಿಯಾನ್–ಭಾರತ ಕೃಷಿ ಮತ್ತು ಅರಣ್ಯ ಸಚಿವರ ಸಭೆಯ ಸಂದರ್ಭದಲ್ಲಿ, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಟಿಮೂರ್-ಲೆಸ್ಟೆಯ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಸಚಿವಾಲಯದ ಸಚಿವರಾದ ಘನತೆವೆತ್ತ ಶ್ರೀ ಮಾರ್ಕೋಸ್ ಡಾ ಕ್ರೂಜ್ ಅವರ ನಡುವೆ ಸೆಪ್ಟೆಂಬರ್ 9, 2026 ರಂದು ನವದೆಹಲಿಯಲ್ಲಿ ಸಭೆ ನಡೆಯಿತು.
ಕೃಷಿ ವಲಯದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಮತ್ತು ದೇಶಕ್ಕೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉಭಯ ದೇಶಗಳ ನಡುವೆ ಬಲವಾದ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಟಿಮೂರ್ ಲೆಸ್ಟೆಯ ಸಚಿವರು ಆಸಕ್ತಿ ವ್ಯಕ್ತಪಡಿಸಿದರು. ವಿಜ್ಞಾನಿಗಳು ಮತ್ತು ತಜ್ಞರ ವಿನಿಮಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ಟಿಮೂರ್ ಲೆಸ್ಟೆಗೆ ಅವರ ಕೃಷಿ ಸಂಶೋಧನೆ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಬೆಂಬಲ ನೀಡಲು ಭಾರತ ಸರ್ಕಾರವು ತನ್ನ ಅತ್ಯುತ್ತಮ ಉಪಕ್ರಮಗಳನ್ನು ಹಂಚಿಕೊಳ್ಳುವ ಬದ್ಧತೆಯನ್ನು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಪುನರುಚ್ಚರಿಸಿದರು.
ಕೃಷಿ, ಅರಣ್ಯ, ಪಶುಸಂಗೋಪನೆ ಮತ್ತು ಜಲಚರ ಕೃಷಿ ಕ್ಷೇತ್ರಗಳಲ್ಲಿ ತಳಮಟ್ಟದ ಸವಾಲುಗಳನ್ನು ಮೌಲ್ಯಮಾಪನ ಮಾಡಲು ಮತ್ತು ತಾಂತ್ರಿಕ ಶಿಫಾರಸುಗಳನ್ನು ಒದಗಿಸಲು ಭಾರತವು ತಾಂತ್ರಿಕ ಮತ್ತು ವೈಜ್ಞಾನಿಕ ತಜ್ಞರ ತಂಡವನ್ನು ಟಿಮೂರ್-ಲೆಸ್ಟೆಗೆ ಕಳುಹಿಸುವುದನ್ನು ಪರಿಗಣಿಸಬಹುದು ಎಂದು ಟಿಮೂರ್-ಲೆಸ್ಟೆಯ ಸಚಿವರು ಆಸಕ್ತಿ ವ್ಯಕ್ತಪಡಿಸಿದರು.
ಭಾರತದ ನಿಯೋಗದಲ್ಲಿ ಡಿಎಆರ್ ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್, ಡಿಎಆರ್ ಇ ಹೆಚ್ಚುವರಿ ಕಾರ್ಯದರ್ಶಿ ಮತ್ತು ಐಸಿಎಆರ್ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಜ್ಞಾನೇಂದ್ರ ದೇವ್ ತ್ರಿಪಾಠಿ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ (ಐಸಿ) ಶ್ರೀ ಎ.ಕೆ. ಸಾಹು, ಐಸಿಎಆರ್ ನ ಎಲ್ಲಾ ಉಪ ಮಹಾನಿರ್ದೇಶಕರು (ಡಿಡಿಜಿ) ಮತ್ತು ಐಸಿಎಆರ್ ನ ಎಡಿಜಿ ಐಆರ್ ಡಾ. ನವೀನ್ ಪಿ. ಸಿಂಗ್ ನೇತೃತ್ವದ ಅಂತರರಾಷ್ಟ್ರೀಯ ಸಂಬಂಧಗಳ ತಂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಭಾರತ–ಮ್ಯಾನ್ಮಾರ್ ದ್ವಿಪಕ್ಷೀಯ ಸಭೆ
ನವದೆಹಲಿಯಲ್ಲಿ ಸೆಪ್ಟೆಂಬರ್ 8 ಮತ್ತು 9, 2026 ರಂದು ಡಿ ಎ ಆರ್ ಇ ಮತ್ತು ಐಸಿಎಆರ್ ಆಯೋಜಿಸಿದ್ದ 9ನೇ ಆಸಿಯಾನ್–ಭಾರತ ಕೃಷಿ ಮತ್ತು ಅರಣ್ಯ ಸಚಿವರ ಸಭೆಯ ಸಂದರ್ಭದಲ್ಲಿ, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಮ್ಯಾನ್ಮಾರ್ ನ ಕೃಷಿ, ಪಶುಸಂಗೋಪನೆ ಮತ್ತು ನೀರಾವರಿ ಸಚಿವಾಲಯದ ಕೇಂದ್ರ ಸಚಿವರಾದ ಘನತೆವೆತ್ತ ಶ್ರೀ ಮಿನ್ ನೌಂಗ್ ಅವರ ನಡುವೆ ಸೆಪ್ಟೆಂಬರ್ 9, 2026ರಂದು ನವದೆಹಲಿಯಲ್ಲಿ ಸಭೆ ನಡೆಯಿತು.
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮ್ಯಾನ್ಮಾರ್ ನ ಸಚಿವರನ್ನು ಸ್ವಾಗತಿಸಿದರು ಮತ್ತು ಎರಡೂ ದೇಶಗಳು ಸುದೀರ್ಘ ಕಾಲದಿಂದ ಬಲವಾದ ಸಾಂಸ್ಕೃತಿಕ ಮತ್ತು ಜನರೊಂದಿಗಿನ ನಿಕಟ ಸಂಪರ್ಕವನ್ನು ಹಂಚಿಕೊಂಡಿವೆ ಎಂದು ತಿಳಿಸಿದರು. ಮ್ಯಾನ್ಮಾರ್ ಭಾರತದೊಂದಿಗೆ ಸುಮಾರು 1600 ಕಿ.ಮೀ ಗಡಿಯನ್ನು ಹಂಚಿಕೊಳ್ಳುವುದರಿಂದ ಭಾರತಕ್ಕೆ ನಿಕಟವಾದ ಪಾಲುದಾರ ದೇಶವಾಗಿದೆ ಎಂದು ಹೇಳಿದರು. ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳ ನಡುವಿನ ತಿಳುವಳಿಕಾ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.
ಎರಡೂ ದೇಶಗಳ ನಡುವಿನ ವ್ಯಾಪಾರ ಸಾಮರ್ಥ್ಯದ ಬಗ್ಗೆಯೂ ಸಚಿವರು ಚರ್ಚಿಸಿದರು ಮತ್ತು ಪರಸ್ಪರ ಗುರುತಿಸಲಾದ ಕ್ಷೇತ್ರಗಳಲ್ಲಿನ ಬಲವಾದ ಪಾಲುದಾರಿಕೆಯು ಧಾನ್ಯಗಳು, ಬೇಳೆಕಾಳುಗಳು, ಹತ್ತಿ, ಹೈನುಗಾರಿಕೆ ಅಭಿವೃದ್ಧಿ ಮತ್ತು ಕೃಷಿ ಶಿಕ್ಷಣದಂತಹ ಕೃಷಿ ಸಂಬಂಧಿತ ಸರಕುಗಳ ವ್ಯಾಪಾರವನ್ನು ಹೆಚ್ಚಿಸಲು ಪರಸ್ಪರ ನೆರವಾಗುತ್ತದೆ ಎಂದು ತಿಳಿಸಿದರು. ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಕೃಷಿ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸಲು ಮ್ಯಾನ್ಮಾರ್ ಪ್ರತಿನಿಧಿಗಳು ದೇಶದಲ್ಲಿ ಅನುಕೂಲಕರ ಹೂಡಿಕೆ ಅವಕಾಶಗಳ ಸಲಹೆ ಸೂಚಿಸಿದರು.
ಭಾರತದ ನಿಯೋಗದಲ್ಲಿ ಡಿಎಆರ್ ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್, ಡಿಎಆರ್ ಇ ಹೆಚ್ಚುವರಿ ಕಾರ್ಯದರ್ಶಿ ಮತ್ತು ಐಸಿಎಆರ್ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಜ್ಞಾನೇಂದ್ರ ದೇವ್ ತ್ರಿಪಾಠಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ (ಐಸಿ) ಶ್ರೀ ಎ.ಕೆ. ಸಾಹು, ಐಸಿಎಆರ್ ನ ಎಲ್ಲಾ ಉಪ ಮಹಾನಿರ್ದೇಶಕರು ಮತ್ತು ಐಸಿಎಆರ್ ನ ಎಡಿಜಿ ಐಆರ್ ಡಾ. ನವೀನ್ ಪಿ. ಸಿಂಗ್ ನೇತೃತ್ವದ ಅಂತರರಾಷ್ಟ್ರೀಯ ಸಂಬಂಧಗಳ ತಂಡ ಸಭೆಯಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2308626)
ವಿಸಿಟರ್ ಕೌಂಟರ್ : 28