ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಆಹಾರ ಧಾನ್ಯ ನಿರ್ವಹಣೆಯಲ್ಲಿ ದಕ್ಷತೆ, ತಂತ್ರಜ್ಞಾನ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಹಣಕಾಸು ವರ್ಷ 2026–27ಕ್ಕಾಗಿ ಡಿಎಫ್‌ಪಿಡಿ ಮತ್ತು ಎಫ್‌ಸಿಐ ನಡುವೆ ಒಪ್ಪಂದಕ್ಕೆ ಸಹಿ

ಪ್ರಕಟಣಾ ದಿನಾಂಕ: 08 SEP 2026 3:11PM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ಮತ್ತು ಭಾರತೀಯ ಆಹಾರ ನಿಗಮ (FCI), ನವದೆಹಲಿಯಲ್ಲಿ 2026–27 ರ ಹಣಕಾಸು ವರ್ಷಕ್ಕಾಗಿ ತಿಳುವಳಿಕಾಪತ್ರಕ್ಕೆ (MoU) ಸಹಿ ಹಾಕಿವೆ. ಈ ಒಪ್ಪಂದವು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದು, ಹೊಣೆಗಾರಿಕೆಯನ್ನು ಬಲಪಡಿಸುವುದು ಮತ್ತು ಆಹಾರ ಧಾನ್ಯ ನಿರ್ವಹಣೆಯಲ್ಲಿ ಆಧುನಿಕೀಕರಣವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ನಿರ್ದಿಷ್ಟ ಗುರಿಗಳೊಂದಿಗೆ, ಎಫ್‌ಸಿಐಗಾಗಿ ಸಮಗ್ರ ಕಾರ್ಯಕ್ಷಮತೆಯ ಚೌಕಟ್ಟನ್ನು ಸ್ಥಾಪಿಸುತ್ತದೆ.

ಈ ಒಪ್ಪಂದವು ಶೇಖರಣಾ ನಷ್ಟವನ್ನು ಕಡಿಮೆ ಮಾಡುವುದು, ಶೇಖರಣಾ ಸಾಮರ್ಥ್ಯದ ಅತ್ಯುತ್ತಮ ಬಳಕೆ, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಸುಧಾರಣೆ ಮತ್ತು ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳನ್ನು ಬಲಪಡಿಸುವುದು ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ಇದು ವ್ಯಾಪಾರ ಪ್ರಕ್ರಿಯೆಗಳ ಹೆಚ್ಚಿನ ಡಿಜಿಟಲೀಕರಣ ಮತ್ತು ಎಫ್‌ಸಿಐನ ಕಾರ್ಯಾಚರಣೆಗಳ ದಕ್ಷತೆ, ಪಾರದರ್ಶಕತೆ ಹಾಗೂ ಮೇಲ್ವಿಚಾರಣೆಯನ್ನು ಹೆಚ್ಚಿಸಲು ಆಧುನಿಕ ಮಾಹಿತಿ ತಂತ್ರಜ್ಞಾನ ಪರಿಹಾರಗಳ ಅಳವಡಿಕೆಗೆ ಒತ್ತು ನೀಡುತ್ತದೆ.

ಆಧುನಿಕೀಕರಣದ ಕಾರ್ಯಸೂಚಿಯ ಭಾಗವಾಗಿ, ಈ ಒಪ್ಪಂದವು ಎಫ್‌ಸಿಐ ಉದ್ಯೋಗಿಗಳಿಗೆ ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಒದಗಿಸುತ್ತದೆ, ಸಂಸ್ಥೆಯು ಉದಯೋನ್ಮುಖ ತಂತ್ರಜ್ಞಾನಗಳನ್ನು ಮತ್ತು ಆಹಾರ ಧಾನ್ಯ ನಿರ್ವಹಣೆಯ ಸಮಕಾಲೀನ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

ಆಹಾರ ನಿಗಮಗಳ ಕಾಯ್ದೆ 1964ರ ಅಡಿಯಲ್ಲಿ, 1965ರಲ್ಲಿ ಸ್ಥಾಪನೆಯಾದ ಎಫ್‌ಸಿಐ, ಭಾರತ ಸರ್ಕಾರದ ಪರವಾಗಿ ಆಹಾರ ಧಾನ್ಯಗಳ ಸಂಗ್ರಹಣೆ, ಶೇಖರಣೆ, ಸಾಗಣೆ ಮತ್ತು ವಿತರಣೆಯನ್ನು ಕೈಗೊಳ್ಳುವ ಮೂಲಕ ದೇಶದ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದರ ಕಾರ್ಯಾಚರಣೆಯಲ್ಲಿ ಒಳಗೊಂಡಿರುವ ಸಾರ್ವಜನಿಕ ಸಂಪನ್ಮೂಲಗಳ ಪ್ರಮಾಣವನ್ನು ಪರಿಗಣಿಸಿ, ಆಹಾರ ಸಬ್ಸಿಡಿಯ ದಕ್ಷ ಬಳಕೆ ಮತ್ತು ಕಾರ್ಯಾಚರಣೆಯ ಪ್ರಕ್ರಿಯೆಗಳಲ್ಲಿ ನಿರಂತರ ಸುಧಾರಣೆಯು ಪ್ರಮುಖ ಆದ್ಯತೆಗಳಾಗಿ ಉಳಿದಿವೆ.

ಈ ಒಪ್ಪಂದವು ಸ್ಪಷ್ಟವಾಗಿ ನಿರೂಪಿಸಲಾದ ವಾರ್ಷಿಕ ನಿಯತಾಂಕಗಳೊಂದಿಗೆ ತನ್ನ ಕಾರ್ಯಕ್ಷಮತೆಯನ್ನು ಜೋಡಿಸುವ ಮೂಲಕ ಎಫ್‌ಸಿಐನ ಕಾರ್ಯನಿರ್ವಹಣೆಗೆ ಅಳೆಯಬಹುದಾದ ಮತ್ತು ಫಲಿತಾಂಶ-ಸಂಯೋಜಿತ ವಿಧಾನವನ್ನು ಪರಿಚಯಿಸುತ್ತದೆ. ಈ ಚೌಕಟ್ಟು ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ದಕ್ಷತೆಯನ್ನು ಪ್ರೋತ್ಸಾಹಿಸಲು, ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ಬಲಪಡಿಸಲು ಮತ್ತು ಸಂಸ್ಥೆಯಾದ್ಯಂತ ತಂತ್ರಜ್ಞಾನ-ಚಾಲಿತ ಪರಿಹಾರಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ.

ಒಪ್ಪಂದದ ಗುರಿಗಳ ಒಂದು ಭಾಗವನ್ನು ಡಿಪೋ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಮೌಲ್ಯಮಾಪನ ಮಾಡುವ ವೆಬ್-ಆಧಾರಿತ ವೇದಿಕೆಯಾದ ' ಡಿಪೋ ದರ್ಪಣ್ ಪೋರ್ಟಲ್' ಮೂಲಕ ಎಫ್‌ಸಿಐ ಡಿಪೋಗಳ ಕಾರ್ಯಕ್ಷಮತೆಗೆ ಜೋಡಿಸಲಾಗಿದೆ. ಭೌತಿಕ ಮೂಲಸೌಕರ್ಯವನ್ನು ಬಲಪಡಿಸಲು, ಕಾರ್ಯಾಚರಣೆಯ ಪ್ರದರ್ಶನವನ್ನು ಸುಧಾರಿಸಲು ಮತ್ತು ಎಫ್‌ಸಿಐ ಡೆಪೋಗಳಾದ್ಯಂತ ನಿರಂತರ ಸುಧಾರಣೆಯನ್ನು ಪ್ರೋತ್ಸಾಹಿಸಲು ಫಲಿತಾಂಶ- ಮತ್ತು ಗುರಿ-ಆಧಾರಿತ ಮಾನದಂಡಗಳನ್ನು ಸೇರಿಸಲಾಗಿದೆ.

ತಿಳುವಳಿಕಾಪತ್ರಕ್ಕೆ ಸಹಿ ಹಾಕಿರುವುದು, ಆಹಾರ ಧಾನ್ಯ ನಿರ್ವಹಣಾ ವ್ಯವಸ್ಥೆಯನ್ನು ಆಧುನಿಕಗೊಳಿಸುವ ಮತ್ತು ದೇಶದ ಆಹಾರ ಭದ್ರತಾ ರಚನೆಯ ದಕ್ಷತೆ ಹಾಗೂ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ಷಮತೆ-ಆಧಾರಿತ ಚೌಕಟ್ಟಿನ ಮೂಲಕ, ಡಿಎಫ್‌ಪಿಡಿ ಮತ್ತು ಎಫ್‌ಸಿಐ ದೇಶಕ್ಕೆ ಹೆಚ್ಚಿನ ಮೌಲ್ಯವನ್ನು ತಲುಪಿಸುವಾಗ, ಆಹಾರ ಸಬ್ಸಿಡಿ ಸಂಪನ್ಮೂಲಗಳನ್ನು ವೆಚ್ಚ-ಪರಿಣಾಮಕಾರಿ ಮತ್ತು ಪಾರದರ್ಶಕ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2307912) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali