ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳ ಪಾರದರ್ಶಕತೆ ಮತ್ತು ಸಕಾಲಿಕ ವಿತರಣೆ ಬಲವರ್ಧನೆಗೊಳಿಸಿದ ಕೇಂದ್ರ ಸರ್ಕಾರ


ಅರ್ಹ ವಿದ್ಯಾರ್ಥಿಗಳ ಡಿಬಿಟಿ ಮತ್ತು ಆಧಾರ್- ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಕೇಂದ್ರ ಪಾಲಿನ ನೇರ ನಗದು ವರ್ಗಾವಣೆ ಸಕ್ರಿಯ

ವೆಬ್-ಆಧಾರಿತ ಮೇಲ್ವಿಚಾರಣೆ, ಅಗ್ಗಾಗ್ಗೆ ಪರಾಮರ್ಶೆ ಮತ್ತು ತಳಮಟ್ಟದ ಭೇಟಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಹೊಣೆಗಾರಿಕೆ ಬಲವರ್ಧನೆ

ಪ್ರಕಟಣಾ ದಿನಾಂಕ: 07 SEP 2026 2:22PM by PIB Bengaluru

ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತಿತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಗಳ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ವಿತರಣೆ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಚೌಕಟ್ಟನ್ನು ಬಲವರ್ಧನೆಗೊಳಿಸಿದೆ. ಈ ಯೋಜನೆಗಳು ದೇಶಾದ್ಯಂತ ಮಾನ್ಯತೆ ಪಡೆದ ಸಂಸ್ಥೆಗಳ ಅರ್ಹ ವಿದ್ಯಾರ್ಥಿಗಳಿಗೆ ನೆರವು ನೀಡುತ್ತವೆ ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮೂಲಕ ಜಾರಿಗೊಳಿಸಲಾಗುವುದು.

ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಮುಕ್ತ ಮತ್ತು ಬೇಡಿಕೆ-ಆಧಾರಿತವಾಗಿವೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು 2021-22 ರಿಂದ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಾರಿಗೆ ತರಲಾಗಿದೆ, ಆದರೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯು 2022-23 ರಿಂದ ಡಿಬಿಟಿ ಮೋಡ್ ಅನ್ನು ಅನುಸರಿಸಿದೆ. ಈ ವ್ಯವಸ್ಥೆಯಡಿಯಲ್ಲಿ, ಕೇಂದ್ರ ಪಾಲನ್ನು ಅರ್ಹ ಅರ್ಜಿದಾರರ ಆಧಾರ್-ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುವುದು.

ಕೇಂದ್ರ ಪಾಲಿನ ಬಿಡುಗಡೆಯು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ತಮ್ಮ ಪಾಲಿನ ಪಾವತಿಗೆ ಸಂಬಂಧಿಸಿದ ದತ್ತಾಂಶವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರವಾನಿಸುವುದರೊಂದಿಗೆ ಸಂಬಂಧ ಹೊಂದಿದೆ. ಈ ಡಿಜಿಟಲ್ ಪ್ರಕ್ರಿಯೆಯು ವಿದ್ಯಾರ್ಥಿವೇತನ ಅರ್ಜಿಗಳು ಮತ್ತು ವಿತರಣೆಯ ಕೇಂದ್ರ ಮತ್ತು ರಾಜ್ಯ ಮಟ್ಟದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ, ಸಕಾಲಿಕ ವಿತರಣೆಯನ್ನು ಉತ್ತೇಜಿಸುತ್ತದೆ ಮತ್ತು ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳುಸುವುದು ಅಥವಾ ದುರುಪಯೋಗದ ವ್ಯಾಪ್ತಿಯನ್ನು ತಗ್ಗಿಸುತ್ತದೆ.

ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳು ಅಥವಾ ಮನವಿಗಳನ್ನು ಅನ್ವಯವಾಗುವ ಕಾರ್ಯವಿಧಾನದ ಅಡಿಯಲ್ಲಿ ಪರೀಕ್ಷೆ ಮತ್ತು ಪರಿಹಾರ ಕ್ರಮಕ್ಕಾಗಿ ಅನುಷ್ಠಾನ ಸಂಸ್ಥೆಯಾಗಿರುವ ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ತ್ವರಿತವಾಗಿ ರವಾನಿಸಲಾಗುತ್ತದೆ. ಅಗತ್ಯವಿರುವಲ್ಲೆಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಳ್ಳಲಿದ್ದಾರೆ.

ಸುಧಾರಿತ ಚೌಕಟ್ಟು ಸಮಗ್ರ ಹೊಣೆಗಾರಿಕೆ, ನಿರಂತರ ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗೆ ಒತ್ತು ನೀಡುತ್ತದೆ. ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದಲ್ಲಿ ಸಭೆಗಳ ಮೂಲಕ ಹಾಗೂ ತಳಮಟ್ಟದ ಭೇಟಿಗಳ ಮೂಲಕ ಅನುಷ್ಠಾನವನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಮತ್ತು ರಾಜ್ಯಗಳ ಇತರ ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಯೋಜನೆಯ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ರಾಷ್ಟ್ರೀಯ ಸಮ್ಮೇಳನಗಳು ಮತ್ತು ಚಿಂತನ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತದೆ.

ಒಟ್ಟಾರೆ, ಡಿಬಿಟಿ, ಆಧಾರ್ ಸಂಯೋಜನೆ, ಪೋರ್ಟಲ್ ಆಧಾರಿತ ದತ್ತಾಂಶ ವಿನಿಮಯ ಮತ್ತು ನಿಯಮಿತ ವಿಮರ್ಶೆಗಳು ಮಂಜೂರಾತಿಯಿಂದ ಸ್ವೀಕೃತಿಯವರೆಗೆ ಪತ್ತೆಹಚ್ಚಬಹುದಾದ ವಿತರಣಾ ಸರಣಿಯನ್ನು ಸೃಷ್ಟಿಸುತ್ತವೆ. ವಿದ್ಯಾರ್ಥಿವೇತನ ನೆರವು ಅರ್ಹ ವಿದ್ಯಾರ್ಥಿಗಳನ್ನು ನೇರವಾಗಿ ತಲುಪುತ್ತದೆ ಮತ್ತು ತಪ್ಪಿಸಬಹುದಾದ ವಿಳಂಬಗಳಿಲ್ಲದೆ ಅವರ ಮುಂದುವರಿದ ಶಿಕ್ಷಣವನ್ನು ಬೆಂಬಲಿಸುತ್ತದೆ ಎಂದು ಖಾತ್ರಿಪಡಿಸಿಕೊಳ್ಳಲು ಈ ಕ್ರಮಗಳ ಉದ್ದೇಶಿಸಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪಾರದರ್ಶಕ, ತಂತ್ರಜ್ಞಾನ-ಆಧರಿತ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿವೇತನ ವಿತರಣಾ ವ್ಯವಸ್ಥೆಗಳ ಮೂಲಕ ಅನನುಕೂಲಕರ ಸಮುದಾಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಲಭ್ಯತೆಯನ್ನು ಬಲಪಡಿಸಲು ಬದ್ಧವಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ: https://socialjustice.gov.in/schemes/23

 

*****


(ಪ್ರಕಟಣೆ ಐ.ಡಿ.: 2307421) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Bengali-TR , Gujarati , Tamil , Telugu