ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಎನ್ ಸಿ ಪಿ ಸಿ ಆರ್ ವಿಶೇಷ ಅಭಿಯಾನದಡಿ ಬಾಲ ಕಾರ್ಮಿಕ ಪದ್ಧತಿಯಿಂದ 3800ಕ್ಕೂ ಅಧಿಕ ಮಕ್ಕಳ ರಕ್ಷಣೆ

ಪ್ರಕಟಣಾ ದಿನಾಂಕ: 04 SEP 2026 11:04AM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾದ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ (NCPCR) 2026ರ ಜೂನ್ 12 ರಂದು ವಿಶೇಷ "ಪ್ಯಾನ್-ಇಂಡಿಯಾ ರಕ್ಷಣೆ  ಮತ್ತು ಪುನರ್ವಸತಿ" ಅಭಿಯಾನವನ್ನು ಆರಂಭಿಸಿದ್ದು, ಅದು 2026ರ ಆಗಸ್ಟ್ 31, ರವರೆಗೆ ಮುಂದುವರೆಯಿತು. ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಮತ್ತು ಕಳ್ಳಸಾಗಣೆ ಮತ್ತು ಶೋಷಣೆಗೆ ಗುರಿಯಾಗುವ ಮಕ್ಕಳ ಗುರುತಿಸುವಿಕೆ, ರಕ್ಷಣೆ ಮತ್ತು ಪುನರ್ವಸತಿ ತೀವ್ರಗೊಳಿಸಲು ಎನ್ ಸಿ ಪಿ ಸಿ ಆರ್ ಸಂಬಂಧಪಟ್ಟ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಕಾರ್ಮಿಕ ಇಲಾಖೆಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಪಾಲುದಾರರೊಂದಿಗೆ ಸಂಘಟಿತ ಕ್ರಮಗಳನ್ನು ಕೈಗೊಂಡಿತು.

ಮಕ್ಕಳ ಕಾರ್ಮಿಕ ಪದ್ಧತಿ ಮತ್ತು ಕಳ್ಳಸಾಗಣೆ ತಾಣಗಳಲ್ಲಿ ತೀವ್ರ ಮತ್ತು ಗುರಿಯಿಟ್ಟು ರಕ್ಷಣಾ ಕಾರ್ಯಾಚರಣೆಗಳನ್ನು ಕೋರಲು ಎನ್ ಸಿ ಪಿ ಸಿ ಆರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿತು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಕ್ಷಣಾ ಕಾರ್ಯಾಚರಣೆಗಳು, ರಕ್ಷಿಸಲ್ಪಟ್ಟ ಮಕ್ಕಳು, ನೋಂದಾಯಿತ ಎಫ್ ಐಆರ್ ಗಳು, ಪುನರ್ವಸತಿ, ಪುನಃಸ್ಥಾಪನೆ, ಶೈಕ್ಷಣಿಕ ಮುಖ್ಯವಾಹಿನಿಗೆ ತರುವುದು, ಪರಿಹಾರ ಮತ್ತು ಇತರ ಅನುಸರಣಾ ಕ್ರಮಗಳು ಇತ್ಯಾದಿಗಳ ಬಗ್ಗೆ ನಿಯಮಿತ ಡೇಟಾವನ್ನು ಒದಗಿಸುವಂತೆಯೂ ಕೋರಲಾಯಿತು.

ಯೋಜನೆ ಜಾರಿಯ ಮೇಲ್ವಿಚಾರಣೆ ಮಾಡಲು ಮತ್ತು ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸಲು, ಎನ್ ಸಿ ಪಿ ಸಿ ಆರ್ ಜಿಲ್ಲಾಡಳಿತಗಳೊಂದಿಗೆ ಸಭೆಗಳನ್ನು ನಡೆಸಿತು. ಸಭೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸುವುದು, ಕಾರ್ಯಾಚರಣೆಯ ಅಡಚಣೆಗಳನ್ನು ನಿವಾರಿಸುವುದು, ATR ಗಳನ್ನು ಸಕಾಲಿಕವಾಗಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಂಬಂಧಪಟ್ಟ ಇಲಾಖೆಗಳು ಮತ್ತು ಸಂಸ್ಥೆಗಳ ನಡುವೆ ಸಮನ್ವಯವನ್ನು ಬಲಪಡಿಸುವತ್ತ ಗಮನಹರಿಸಿದವು.

ಎನ್ ಸಿ ಪಿ ಸಿ ಆರ್ ಸಾಮಾಜಿಕ ಮಾಧ್ಯಮ ಮತ್ತು ಇತರ ಸಂವಹನ ವೇದಿಕೆಗಳ ಮೂಲಕ ಜಾಗೃತಿ ಮತ್ತು ಪ್ರಚಾರವನ್ನು ಕೈಗೊಂಡಿತು, ಅಭಿಯಾನದ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು, ಬಾಲ ಕಾರ್ಮಿಕರ ವರದಿ ಮತ್ತು ರಕ್ಷಣೆಯ ನಂತರ ಪುನರ್ವಸತಿ ಮತ್ತು ಶೈಕ್ಷಣಿಕ ಮುಖ್ಯವಾಹಿನಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.

ಮೇಲೆ ತಿಳಿಸಿದ ಅಭಿಯಾನದ ನಿರಂತರ ಮತ್ತು ಪೂರ್ವಭಾವಿ ಮೇಲ್ವಿಚಾರಣೆಯೊಂದಿಗೆ ಎನ್ ಸಿ ಪಿ ಸಿ ಆರ್ ರಾಜ್ಯ ಅಧಿಕಾರಿಗಳ ಸಹಯೋಗದೊಂದಿಗೆ 3,800 ಕ್ಕೂ ಅಧಿಕ ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿದೆ. ಅಲ್ಲದೆ, ಅಭಿಯಾನದ ಸಮಯದಲ್ಲಿ 575ಕ್ಕೂ ಅಧಿಕ ಎಫ್‌ ಐ ಆರ್‌ ಗಳನ್ನು ದಾಖಲಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2306660) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी