ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಆಗಸ್ಟ್ 29 ರಿಂದ 31 ರವರೆಗೆ ತಮಿಳುನಾಡು, ಕರ್ನಾಟಕ, ಕೇರಳಂ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದಾರೆ

ಪ್ರಕಟಣಾ ದಿನಾಂಕ: 28 AUG 2026 5:51PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು 2026 ರ ಆಗಸ್ಟ್ 29 ರಿಂದ 31 ರವರೆಗೆ ತಮಿಳುನಾಡು, ಕರ್ನಾಟಕ, ಕೇರಳಂ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದಾರೆ.

ಮೂರು ದಿನಗಳ ಈ ಭೇಟಿಯ ಸಮಯದಲ್ಲಿ, ಉಪರಾಷ್ಟ್ರಪತಿಯವರು ಶಿಕ್ಷಣ, ಸಾರ್ವಜನಿಕ ಸೇವೆ, ಸಾಂಸ್ಕೃತಿಕ ಪರಂಪರೆ, ಉದ್ಯಮ-ಶೈಕ್ಷಣಿಕ ಸಹಯೋಗ, ಮೀನುಗಾರಿಕೆ ಜನಸಂಪರ್ಕ ಕಾರ್ಯಕ್ರಮ ಮತ್ತು ಪ್ರಮುಖ ಸಾರ್ವಜನಿಕ ಆಚರಣೆಗಳನ್ನು ಒಳಗೊಂಡ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಗಸ್ಟ್ 29 ರಂದು ತಮಿಳುನಾಡು ಮತ್ತು ಕರ್ನಾಟಕ ಭೇಟಿ

ಆಗಸ್ಟ್ 29 ರಂದು, ಉಪರಾಷ್ಟ್ರಪತಿಯವರು ತಮಿಳುನಾಡಿನ ಈರೋಡ್‌ ನಲ್ಲಿ ಕೊಂಗು ವೆಳ್ಳಾಲರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಟ್ರಸ್ಟ್ (KVITT) ನ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ಅದೇ ದಿನ, ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಪ್ರಯಾಣಿಸಲಿದ್ದು, ಅಲ್ಲಿ ವಿಧಾನಸೌಧದಲ್ಲಿ ನಡೆಯಲಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಆಗಸ್ಟ್ 30 ರಂದು ಕೇರಳಂ ಭೇಟಿ

ಆಗಸ್ಟ್ 30 ರಂದು, ಉಪರಾಷ್ಟ್ರಪತಿಯವರು ಕೇರಳಂ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅಲಪ್ಪುಳದಿಂದ ತಮ್ಮ ಕಾರ್ಯಕ್ರಮ ಪ್ರಾರಂಭಿಸಲಿದ್ದಾರೆ. ಅಲ್ಲಿ ಲಿಯೋ XIII ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ 'ಕೇರಳ ಕೌಮುದಿ'ಯ 115 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ತದನಂತರ ಅವರು ಪತ್ತನಂತಿಟ್ಟಕ್ಕೆ ತೆರಳಿ ಆರನ್ಮುಳ ಜಲಮಹೋತ್ಸವ-2026 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ನಂತರ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ತಿರುವನಂತಪುರಕ್ಕೆ ಪ್ರಯಾಣಿಸಲಿದ್ದು, ಕೇರಳಂನ ಪ್ರಮುಖ ಸಾಂಸ್ಕೃತಿಕ ಹಬ್ಬವಾದ ಓಣಂ ಆಚರಣೆಯ ಅಂಗವಾಗಿ ನಡೆಯಲಿರುವ ಓಣಂ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಆಗಸ್ಟ್ 31 ರಂದು ಲಕ್ಷದ್ವೀಪ ಮತ್ತು ಕೇರಳಂ ಭೇಟಿ

ಆಗಸ್ಟ್ 31 ರಂದು, ಉಪರಾಷ್ಟ್ರಪತಿಯವರು ಲಕ್ಷದ್ವೀಪದ ಅಗತ್ತಿಗೆ ಭೇಟಿ ನೀಡಲಿದ್ದು, ಅಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಆಯೋಜಿಸಿರುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮರಳಿ ಕೇರಳಂಗೆ ಆಗಮಿಸುವ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಕೊಚ್ಚಿಯ ಕಕ್ಕನಾಡ್‌ ನಲ್ಲಿರುವ ರಾಜಗಿರಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಆರ್‌ ಎಸ್‌ ಇ ಟಿ) ಸಭಾಂಗಣದಲ್ಲಿ ನಡೆಯಲಿರುವ ಆರ್‌ ಎಸ್‌ ಇ ಟಿ ಬೆಳ್ಳಿಹಬ್ಬದ ಆಚರಣೆ ಮತ್ತು 'ಕಾನ್‌ಫ್ಲುಯೆನ್ಸ್ 3.0' ಉದ್ಯಮ-ಶೈಕ್ಷಣಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

 

******

 


(ಪ್ರಕಟಣೆ ಐ.ಡಿ.: 2304376) ವಿಸಿಟರ್ ಕೌಂಟರ್ : 27
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Gujarati , Tamil