ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಈದ್ – ಎ – ಮಿಲಾದ್ – ಉನ್ - ನಬಿ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರಿಂದ ಶುಭಾಶಯ

ಪ್ರಕಟಣಾ ದಿನಾಂಕ: 25 AUG 2026 6:16PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈದ್-ಎ-ಮಿಲಾದ್-ಉನ್-ನಬಿ ಮುನ್ನಾದಿನದಂದು ನೀಡಿರುವ ಸಂದೇಶ ಹೀಗಿದೆ :-

“ಈದ್-ಎ-ಮಿಲಾದ್-ಉನ್-ನಬಿ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಸಹ ನಾಗರಿಕರಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳು.

ಈದ್-ಎ-ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರ ಧರ್ಮೋಪದೇಶಗಳನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಅವರ ಬೋಧನೆಗಳು ಧರ್ಮನಿಷ್ಠ ನಡವಳಿಕೆ ಮತ್ತು ಕರ್ತವ್ಯನಿಷ್ಠೆಯ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತವೆ.

ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತಾಗಲು ಪ್ರವಾದಿ ಮುಹಮ್ಮದ್ ಅವರ ಉದಾತ್ತ ಆದರ್ಶಗಳು ನಮಗೆ ಪ್ರೇರಣೆ ನೀಡಲಿ”.

 

*****


(ಪ್ರಕಟಣೆ ಐ.ಡಿ.: 2303374) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Tamil , Malayalam