ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ದಿವ್ಯಾಂಗ (ವಿಶೇಷಚೇತನ) ಪುರುಷರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು


ದೇಶಕ್ಕಾಗಿ ಗೌರವಗಳನ್ನು ಗೆಲ್ಲುವ ಅವರ ಪ್ರಯತ್ನಗಳು ಮತ್ತು ದೃಢಸಂಕಲ್ಪ ಭಾರತದ ಯುವಕರಿಗೆ ಸ್ಫೂರ್ತಿ ನೀಡುತ್ತದೆ

ಭಾರತ-ಇಂಗ್ಲೆಂಡ್ ಪುರುಷರ ಮಿಶ್ರ ಅಂಗವೈಕಲ್ಯ ಟಿ20ಐ ಸರಣಿ 2026 ಗಾಗಿ ಇಂಗ್ಲೆಂಡ್ ಪ್ರವಾಸದಿಂದ ತಂಡವು ಹಿಂತಿರುಗಿದೆ

ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು

प्रविष्टि तिथि: 23 AUG 2026 9:25PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಭಾರತದ ದಿವ್ಯಾಂಗ (ವಿಶೇಷಚೇತನ) ಪುರುಷರ ಕ್ರಿಕೆಟ್ ತಂಡವನ್ನು ಭೇಟಿಯಾದರು. ʻಎಕ್ಸ್ʼ ನಲ್ಲಿ ಪೋಸ್ಟ್ ಮಾಡಿರುವ ಶ್ರೀ ಅಮಿತ್ ಶಾ, "ಇಂದು ನವದೆಹಲಿಯಲ್ಲಿ ಭಾರತದ ವಿಶೇಷಚೇತನ ಪುರುಷರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ  ಸಂತೋಷವಾಯಿತು. ಭಾರತ-ಇಂಗ್ಲೆಂಡ್ ಪುರುಷರ ಮಿಶ್ರ ಅಂಗವೈಕಲ್ಯ ಟಿ20ಐ ಸರಣಿ 2026 ಗಾಗಿ ಇಂಗ್ಲೆಂಡ್ ಪ್ರವಾಸದಿಂದ ತಂಡವು ಹಿಂತಿರುಗಿದೆ. ರಾಷ್ಟ್ರಕ್ಕಾಗಿ ಗೌರವಗಳನ್ನು ಗೆಲ್ಲುವ ಅವರ ಪ್ರಯತ್ನಗಳು ಮತ್ತು ದೃಢಸಂಕಲ್ಪವು ಭಾರತದ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ."

 

*****


(रिलीज़ आईडी: 2302704) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Bengali-TR , Punjabi , Gujarati , Telugu , Malayalam