ಸಂವಹನ ಸಚಿವಾಲಯ
azadi ka amrit mahotsav

ಭಾರತದ ಅಧ್ಯಕ್ಷತೆಯ ಆಶಯವಾದ "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ತತ್ವದಡಿಯಲ್ಲಿ ಡಿಜಿಟಲ್ ಸಹಕಾರ ಮತ್ತು ಭವಿಷ್ಯದ ನೆಟ್‌ವರ್ಕ್ ತಂತ್ರಜ್ಞಾನಗಳನ್ನು ಬಲಪಡಿಸಲು ಪುಣೆಯಲ್ಲಿ 7 ನೇ ಬ್ರಿಕ್ಸ್ (BRICS) ಐಸಿಟಿ ಕಾರ್ಯನಿರತ ತಂಡದ ಸಭೆಯನ್ನು ಆಯೋಜಿಸಿದ ಭಾರತ


ಎಐ (AI), ಮುಂದಿನ ಪೀಳಿಗೆಯ ಸಂವಹನಗಳು, ಇಂಡಸ್ಟ್ರಿ 4.0, ವಿದ್ಯುತ್ಕಾಂತೀಯ ಕ್ಷೇತ್ರ (EMF) ಮಾನ್ಯತೆ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಯ ಸಂಯೋಜನೆಯ ಕುರಿತು ಚರ್ಚಿಸಲು ಒಂದೆಡೆ ಸೇರಿದ ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳು

प्रविष्टि तिथि: 17 AUG 2026 8:08PM by PIB Bengaluru

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಸಹಕಾರ ಕುರಿತ ಬ್ರಿಕ್ಸ್ ಟ್ರ್ಯಾಕ್‌ನ ಪ್ರತ್ಯಕ್ಷ (in-person) ಸಭೆಗಳು ಭಾರತದ ಬ್ರಿಕ್ಸ್ ಅಧ್ಯಕ್ಷತೆಯಡಿಯಲ್ಲಿ ಐಸಿಟಿಗಳ ಸಹಕಾರಕ್ಕಾಗಿ ಬ್ರಿಕ್ಸ್ ಕಾರ್ಯನಿರತ ಗುಂಪಿನ 7 ನೇ ಸಭೆಯ ಪ್ರಾರಂಭದೊಂದಿಗೆ ಇಂದು ಪುಣೆಯಲ್ಲಿ ಉದ್ಘಾಟನೆಗೊಂಡವು.

ಸಭೆಗಳನ್ನು ಉದ್ಘಾಟಿಸಿ ಮಾತನಾಡಿದ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀ ಅಮಿತ್ ಅಗರ್ವಾಲ್ ಅವರು, ನಿಯೋಗಗಳನ್ನು ಸ್ವಾಗತಿಸಿದರು ಮತ್ತು ಭಾರತದ ಅಧ್ಯಕ್ಷತೆಯಡಿಯಲ್ಲಿ ಐಸಿಟಿ ಟ್ರ್ಯಾಕ್‌ನ ಆಶಯವಾದ "ಸ್ಥಿತಿಸ್ಥಾಪಕ ಭವಿಷ್ಯಕ್ಕಾಗಿ ನಾವೀನ್ಯತೆ, ಸಹಕಾರ ಮತ್ತು ರೂಪಾಂತರ (ICT)" ಹಾಗೂ ಅದರ ನಾಲ್ಕು ಮೂಲಸ್ತಂಭಗಳನ್ನು ವಿವರಿಸಿದರು. ಭಾಗವಹಿಸಿದ ಪ್ರತಿಯೊಂದು ಸದಸ್ಯ ದೇಶಗಳ ಪ್ರತಿನಿಧಿಗಳು ಪ್ರಾಸ್ತಾವಿಕ ನುಡಿಗಳನ್ನು ಆಡಿದರೂ.

ಈ ಸಂದರ್ಭದಲ್ಲಿ ಮಾತನಾಡಿದ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀ ಅಮಿತ್ ಅಗರ್ವಾಲ್, "ಇಂದಿನ ಉದ್ಘಾಟನೆಯು ಬ್ರಿಕ್ಸ್ ಐಸಿಟಿ ಟ್ರ್ಯಾಕ್ ಅಡಿಯಲ್ಲಿ ಪ್ರಮುಖ ವಾರದ ತೊಡಗಿಸಿಕೊಳ್ಳುವಿಕೆಯ ಆರಂಭವನ್ನು ಸೂಚಿಸುತ್ತದೆ ಮತ್ತು ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ಸಹಯೋಗದ ಪ್ರಕ್ರಿಯೆಯ ಮುಂದುವರಿಕೆಯನ್ನು ಪ್ರತಿನಿಧಿಸುತ್ತದೆ. ಈ ವರ್ಷದ ಆರಂಭದಲ್ಲಿ ಬ್ರಿಕ್ಸ್ ಐಸಿಟಿ ಟ್ರ್ಯಾಕ್‌ನ ಭಾರತದ ಅಧ್ಯಕ್ಷತೆ ಪ್ರಾರಂಭವಾದಂದಿನಿಂದ, ನಾವು ಸರಣಿ ಕಾರ್ಯನಿರತ ಗುಂಪಿನ ಸಭೆಗಳು, ವಿಷಯಾಧಾರಿತ ವೆಬ್‌ನಾರ್‌ಗಳು, ಪರಿಕಲ್ಪನಾ ಟಿಪ್ಪಣಿಗಳ ಮೇಲಿನ ಚರ್ಚೆಗಳು ಹಾಗೂ ತಜ್ಞರು ಮತ್ತು ಅಧಿಕಾರಿಗಳ ನಡುವಿನ ನಿಯಮಿತ ವಿನಿಮಯಗಳ ಮೂಲಕ ನಿಕಟವಾಗಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಈ ತೊಡಗಿಸಿಕೊಳ್ಳುವಿಕೆಗಳು ನಮ್ಮ ಅನುಭವಗಳನ್ನು ಹಂಚಿಕೊಳ್ಳಲು, ನಮ್ಮ ಆದ್ಯತೆಗಳ ಬಗ್ಗೆ ಜಂಟಿ ತಿಳುವಳಿಕೆಯನ್ನು ನಿರ್ಮಿಸಲು ಮತ್ತು ಇಂದು ನಮ್ಮ ಮುಂದಿರುವ ಕಾರ್ಯಸೂಚಿಯನ್ನು ಸಾಮೂಹಿಕವಾಗಿ ರೂಪಿಸಲು ನಮಗೆ ಅನುವು ಮಾಡಿಕೊಟ್ಟಿವೆ" ಎಂದು ಹೇಳಿದರು.

ಫ್ಯೂಚರ್ ನೆಟ್‌ವರ್ಕ್ಸ್‌ನ ಬ್ರಿಕ್ಸ್ ಸಂಸ್ಥೆಯ ಮಂಡಳಿಯು, ದಿನದ ಅವಧಿಯಲ್ಲಿ ಸಭೆ ಸೇರಿ, ಗೊತ್ತುಪಡಿಸಿದ ರಾಷ್ಟ್ರೀಯ ಶಾಖೆಗಳ ಚಟುವಟಿಕೆಗಳನ್ನು ಹಾಗೂ ಕೃತಕ ಬುದ್ಧಿಮತ್ತೆ (AI), ಮುಂದಿನ ಪೀಳಿಗೆಯ ಸಂವಹನಗಳು, ಇಂಡಸ್ಟ್ರಿ 4.0 ರಲ್ಲಿ ಇಂಟರ್ನೆಟ್ ಅಪ್ಲಿಕೇಶನ್‌ಗಳು ಮತ್ತು ವಿದ್ಯುತ್ಕಾಂತೀಯ ಕ್ಷೇತ್ರದ (EMF) ಮಾನ್ಯತೆ ಕುರಿತ ಅಧ್ಯಯನ ತಂಡಗಳ ನವೀಕರಣಗಳನ್ನು ಪರಿಶೀಲಿಸಿತು.

ಬಳಿಕ, ಕಾರ್ಯನಿರತ ತಂಡವು, ಅಧ್ಯಕ್ಷತೆಯು ನಿಗದಿಪಡಿಸಿದ ವಿಷಯಗಳ ಟಿಪ್ಪಣಿ ಆದ್ಯತೆಗಳು ಮತ್ತು ಪ್ರತಿಯೊಂದು ಮೂಲಸ್ತಂಭದ ಅಡಿಯಲ್ಲಿ ಚರ್ಚೆಗಾಗಿ ಇರುವ ಪ್ರಶ್ನೆಗಳನ್ನು, ಸದಸ್ಯ ದೇಶಗಳಿಂದ ಸಮೀಕ್ಷಾ ಪ್ರಶ್ನಾವಳಿಗೆ ಸ್ವೀಕರಿಸಿದ ಪ್ರತಿಕ್ರಿಯೆಗಳ ಸಂಕಲನದೊಂದಿಗೆ ಕೈಗೆತ್ತಿಕೊಂಡಿತು. ಸದಸ್ಯ ದೇಶಗಳು ಸಲ್ಲಿಸಿದ ಪರಿಕಲ್ಪನಾ ಟಿಪ್ಪಣಿಗಳನ್ನು ಚರ್ಚೆ ಮಾಡಲಾಯಿತು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಮೇಲಿನ ಫೋಕಸ್ ಗ್ರೂಪ್ ಸಭೆ ಮತ್ತು ಡಿಜಿಟಲ್ ಬ್ರಿಕ್ಸ್ ಟಾಸ್ಕ್ ಫೋರ್ಸ್ ಸಭೆಯೊಂದಿಗೆ ಸಭೆಗಳು ನಾಳೆಯೂ ಮುಂದುವರಿಯಲಿವೆ.

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa

 

*****


(रिलीज़ आईडी: 2300661) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , Malayalam