ಪರಿಸರ ಮತ್ತು ಅರಣ್ಯ ಸಚಿವಾಲಯ
2015ರಲ್ಲಿ 523 ಇದ್ದ ಏಷ್ಯಾಟಿಕ್ ಸಿಂಹಗಳ ಸಂಖ್ಯೆ 2025ರಲ್ಲಿ 891ಕ್ಕೆ ಏರಿದೆ; ಇದು ಅರಣ್ಯಾಧಿಕಾರಿಗಳು, ಸಂರಕ್ಷಣಾವಾದಿಗಳು ಮತ್ತು ಸ್ಥಳೀಯ ಸಮುದಾಯಗಳ ಸಮರ್ಪಣೆಯನ್ನು ಸೂಚಿಸುತ್ತದೆ: ಶ್ರೀ ಭೂಪೇಂದರ್ ಯಾದವ್
ʻವಿಶ್ವ ಸಿಂಹ ದಿನʼದಂದು, ವನ್ಯಜೀವಿ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಪರಿಸರ ಸಚಿವರು
ಪ್ರಕಟಣಾ ದಿನಾಂಕ:
10 AUG 2026 12:02PM by PIB Bengaluru
2026ರ ‘ವಿಶ್ವ ಸಿಂಹ ದಿನʼದಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಸಿಂಹಗಳ ಸಂರಕ್ಷಣೆಯಲ್ಲಿ ಭಾರತದ ಗಮನಾರ್ಹ ಪ್ರಯಾಣವನ್ನು ಆಚರಿಸಿದರು ಮತ್ತು ವನ್ಯಜೀವಿಗಳು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವ ದೇಶದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸಚಿವರು, 2015ರಲ್ಲಿ 523 ಇದ್ದ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು 2025ರಲ್ಲಿ 891ಕ್ಕೆ ಸ್ಥಿರವಾಗಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಅರಣ್ಯ ಅಧಿಕಾರಿಗಳು, ಸಂರಕ್ಷಣಾವಾದಿಗಳು, ಸ್ಥಳೀಯ ಸಮುದಾಯಗಳು ಮತ್ತು ಪ್ರಮುಖ ಪ್ರಭೇದಗಳನ್ನು ರಕ್ಷಿಸಲು ದಣಿವರಿಯದೆ ಶ್ರಮಿಸುತ್ತಿರುವ ಎಲ್ಲರ ಸಮರ್ಪಣೆಯಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಏಷ್ಯಾಟಿಕ್ ಸಿಂಹವನ್ನು ಸಂರಕ್ಷಿಸುವಲ್ಲಿ ಭಾರತದ ಯಶಸ್ಸು ವನ್ಯಜೀವಿಗಳು ಮತ್ತು ಜೀವವೈವಿಧ್ಯತೆಗೆ ದೇಶದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಶ್ರೀ ಯಾದವ್ ಹೇಳಿದ್ದಾರೆ. ಭಾರತದ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವ ಮತ್ತು ಏಷ್ಯಾಟಿಕ್ ಸಿಂಹದ ಘರ್ಜನೆ ಮುಂದಿನ ಪೀಳಿಗೆಗೆ ಅನುರಣಿಸುವುದನ್ನು ಖಚಿತಪಡಿಸಿಕೊಳ್ಳುವ ಸಂಕಲ್ಪವನ್ನು ಅವರು ಪುನರುಚ್ಚರಿಸಿದ್ದಾರೆ.
ʻವಿಶ್ವ ಸಿಂಹ ದಿನದʼ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಹಾಯಕ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು “ನಿರ್ಣಾಯಕ ಆವಾಸಸ್ಥಾನಗಳನ್ನು ರಕ್ಷಿಸುವ ಮೂಲಕ, ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸುವ ಮೂಲಕ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ಮೂಲಕ, ಅಭಿವೃದ್ಧಿ ಮತ್ತು ಪ್ರಕೃತಿ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂದು ಭಾರತವು ಜಗತ್ತಿಗೆ ತೋರಿಸಿದೆ,ʼʼ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಆಗಸ್ಟ್ 15ರಂದು ದೊಡ್ಡ ಬೆಕ್ಕುಗಳ (ಬಿಗ್ ಕ್ಯಾಟ್) ದೀರ್ಘಕಾಲೀನ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು 'ಪ್ರಾಜೆಕ್ಟ್ ಲಯನ್' ಅನ್ನು ಘೋಷಿಸಿದರು. ಪ್ರಸ್ತುತ, ಸಿಂಹಗಳ ವ್ಯಾಪ್ತಿಯು 2020ರಲ್ಲಿ ಸುಮಾರು 30,000 ಚದರ ಕಿ.ಮೀ.ನಿಂದ ಸುಮಾರು 35,000 ಚದರ ಕಿ.ಮೀ.ಗೆ ವಿಸ್ತರಿಸಿದೆ.
ಈ ಯೋಜನೆಯು ಜೀವವೈವಿಧ್ಯ ಸಂರಕ್ಷಣೆಗೆ ಭೂಮೇಲ್ಮೈ ಮಟ್ಟದ, ಸಮಗ್ರ ಕಾರ್ಯವಿಧಾನವನ್ನು ನುಸರಿಸುತ್ತದೆ. ಜೊತೆಗೆ ಆವಾಸಸ್ಥಾನ ವಿಸ್ತರಣೆ, ರೋಗ ಮೇಲ್ವಿಚಾರಣೆ ಮತ್ತು ಪಶುವೈದ್ಯಕೀಯ ಬೆಂಬಲ, ವೈಜ್ಞಾನಿಕ ವನ್ಯಜೀವಿ ಸಂಖ್ಯೆ ನಿಗಾ, ತಂತ್ರಜ್ಞಾನ-ನೆರವಿನ ಮಧ್ಯಸ್ಥಿಕೆಗಳು, ಜೀವವೈವಿಧ್ಯ ಸಂರಕ್ಷಣೆ, ಪ್ರಯೋಜನ ಹಂಚಿಕೆ ಮತ್ತು ಸಮುದಾಯದ ಒಳಗೊಳ್ಳುವಿಕೆಗೆ ಒತ್ತು ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2296999)
ವಿಸಿಟರ್ ಕೌಂಟರ್ : 159
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
English
,
Urdu
,
Marathi
,
हिन्दी
,
Bengali
,
Bengali-TR
,
Punjabi
,
Gujarati
,
Tamil
,
Malayalam