ಪ್ರಧಾನ ಮಂತ್ರಿಯವರ ಕಛೇರಿ
2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ ಡೆಕಥ್ಲಾನ್ ನಲ್ಲಿ ಕಂಚಿನ ಪದಕ ಗೆದ್ದ ತೇಜಸ್ವಿನ್ ಶಂಕರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
01 AUG 2026 8:43AM by PIB Bengaluru
ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ ಡೆಕಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ತೇಜಸ್ವಿನ್ ಶಂಕರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ತೇಜಸ್ವಿನ್ ಶಂಕರ್ ಅವರು ಎಲ್ಲಾ ಹತ್ತು ಸ್ಪರ್ಧೆಗಳಲ್ಲಿ ಅಸಾಧಾರಣ ಸರ್ವಾಂಗೀಣ ಪ್ರದರ್ಶನ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಈ ಸಾಧನೆಗಾಗಿ ಶ್ರೀ ನರೇಂದ್ರ ಮೋದಿ ಅವರು, ಅವರನ್ನು ಅಭಿನಂದಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಅವರ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ;
"ಭಾರತೀಯ ಕ್ರೀಡಾಪಟುಗಳು ಇತಿಹಾಸವನ್ನು ಸೃಷ್ಟಿಸುವುದನ್ನು ಮುಂದುವರಿಸಿದ್ದಾರೆ ಮತ್ತು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ!
ಗ್ಲಾಸ್ಗೊ ಸಿಡಬ್ಲ್ಯೂಜಿಯಲ್ಲಿ ನಡೆದ ಪುರುಷರ ಡೆಕಥ್ಲಾನ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ. ಅವರು 10 ಸ್ಪರ್ಧೆಗಳಲ್ಲಿ ಅಸಾಧಾರಣ ಆಲ್ ರೌಂಡ್ ಪ್ರದರ್ಶನ ನೀಡಿದರು. ಅವರಿಗೆ ಅಭಿನಂದನೆಗಳು. ಅವರು ಮಿಂಚುವುದನ್ನು ಮುಂದುವರಿಸಲಿ. ನನ್ನ ಶುಭ ಹಾರೈಕೆಗಳು.
#CWG2026"
*****
(ಪ್ರಕಟಣೆ ಐ.ಡಿ.: 2292905)
ವಿಸಿಟರ್ ಕೌಂಟರ್ : 81
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
Assamese
,
Odia
,
English
,
Urdu
,
हिन्दी
,
Marathi
,
Bengali
,
Bengali-TR
,
Manipuri
,
Punjabi
,
Gujarati
,
Tamil
,
Malayalam