ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ F57ರಲ್ಲಿ ಚಿನ್ನದ ಪದಕ ಗೆದ್ದ ಶರ್ಮಿಳಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

प्रविष्टि तिथि: 28 JUL 2026 2:05PM by PIB Bengaluru

2026ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶರ್ಮಿಳಾ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.

ಅವರ ಈ ಸ್ಪರ್ಧೆಯ ಅತ್ಯುತ್ತಮ ಎಸೆತವು ಗಮನಾರ್ಹ ಸಾಧನೆಯಾಗಿದೆ ಎಂದು ಪ್ರಧಾನಿಯವರು ಹೇಳಿದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಚಿನ್ನದ ಪದಕಕ್ಕಾಗಿ ಎರಡು ದಶಕಗಳ ಕಾಯುವಿಕೆಯನ್ನು ಇದು ಕೊನೆಗೊಳಿಸಿದೆ ಎಂದು ಅವರು ಹೇಳಿದರು.

ಶ್ರೀ ಮೋದಿಯವರು ಶರ್ಮಿಳಾ ಅವರ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಸಿದರು.

ಪ್ರಧಾನ ಮಂತ್ರಿಯವರು Xನಲ್ಲಿ;

“ಗ್ಲಾಸ್ಗೋದಲ್ಲಿ ಇತಿಹಾಸ ಸೃಷ್ಟಿಯಾಗಿದೆ!

ಮಹಿಳಾ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ ವಿಶೇಷ ಚಿನ್ನ ಚಿನ್ನದ ಪದಕ ಗೆದ್ದ ಶರ್ಮಿಳಾ ಅವರಿಗೆ ಅವರ ಈ ಅತ್ಯುತ್ತಮ ಸಾಧನೆಗಾಗಿ ಅಭಿನಂದನೆಗಳು. ಈ ಗಮನಾರ್ಹ ಪ್ರದರ್ಶನವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಎರಡು ದಶಕಗಳ ಕಾಲದ ಕಾಯುವಿಕೆಯನ್ನು ಕೊನೆಗೊಳಿಸಿದೆ.

ಶರ್ಮಿಳಾ ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.

#CWG2026”

 

*****


(रिलीज़ आईडी: 2292360) आगंतुक पटल : 5
इस विज्ञप्ति को इन भाषाओं में पढ़ें: Bengali , Assamese , Odia , English , Urdu , हिन्दी , Marathi , Manipuri , Punjabi , Gujarati , Tamil , Telugu , Malayalam