ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರಮುಖ ಸಹಾಯವಾಣಿ ಸೇವೆಗಳಿಗೆ ತ್ವರಿತ ಪ್ರವೇಶಕ್ಕಾಗಿ ಮಿಷನ್ ಶಕ್ತಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ನಾಗರಿಕರಿಗೆ ಮನವಿ
प्रविष्टि तिथि:
31 JUL 2026 11:20AM by PIB Bengaluru
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಕೇವಲ ಒಂದು ಕ್ಲಿಕ್ ದೂರದಲ್ಲಿ ಸುರಕ್ಷತೆ ಮತ್ತು ಸಹಾಯವನ್ನು ನೀಡುವ ಮಿಷನ್ ಶಕ್ತಿ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ನೆರವು ಮತ್ತು ಸಬಲೀಕರಣದ ಬಗ್ಗೆ ಸರ್ಕಾರದ ಸಂಕಲ್ಪವನ್ನು ಮಿಷನ್ ಶಕ್ತಿ ಆ್ಯಪ್ ಮತ್ತಷ್ಟು ಬಲಪಡಿಸುತ್ತದೆ ಎಂದು ಕೇಂದ್ರ ಸಚಿವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳಾ ಸಹಾಯವಾಣಿ 181, ತುರ್ತು ಸೇವೆ 112, ಪೋಷಣ್ ಮತ್ತು ಪಿಎಂಎಂವಿವೈ ಸಹಾಯವಾಣಿ 1515, ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930, ಕಾನೂನು ನೆರವು (ಎನ್ಎಎಲ್ಎಸ್ಎ) 15100, ಟೆಲಿ-ಮಾನಸ್ 14416 ಮತ್ತು ಮಕ್ಕಳ ಸಹಾಯವಾಣಿ 1098 ಸೇರಿದಂತೆ ಒಂದೇ ವೇದಿಕೆಯಲ್ಲಿ ಪ್ರಮುಖ ಸಹಾಯವಾಣಿ ಸೇವೆಗಳಿಗೆ ತ್ವರಿತ ಮತ್ತು ಸುಲಭ ಪ್ರವೇಶವನ್ನು ಈ ಅಪ್ಲಿಕೇಶನ್ ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತಿಯೊಬ್ಬರೂ ಮಿಷನ್ ಶಕ್ತಿ ಆ್ಯಪ್ ಡೌನ್ ನೋಡ್ ಮಾಡಿಕೊಳ್ಳಬೇಕು ಮತ್ತು ಈ ಪ್ರಮುಖ ಸೇವೆಗಳ ಬಗ್ಗೆ ಮಾಹಿತಿಯನ್ನು ತಮ್ಮ ಕುಟುಂಬಗಳು ಮತ್ತು ಪರಿಚಯಸ್ಥರೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
*****
(रिलीज़ आईडी: 2292310)
आगंतुक पटल : 7