ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿರುವ ಶ್ರೀಶಂಕರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 30 JUL 2026 5:24PM by PIB Bengaluru

ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ರಜತ ಪದಕ ಜಯಿಸಿರುವ ಶ್ರೀಶಂಕರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಇದು ಅನನ್ಯ ಸಾಧನೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿಗಳು, ಅವರ ಅತ್ಯುತ್ತಮ ಸಾಧನೆಗೆ ಪದಕ ಲಭಿಸಿದೆ ಎಂದು ಹೇಳಿದ್ದಾರೆ.

ಶ್ರೀಶಂಕರ್ ಅವರ ಯಶಸ್ಸು ಅಥ್ಲೆಟಿಕ್ಸ್ ನಲ್ಲಿ ಶ್ರೇಷ್ಠತೆ ಸಾಧಿಸಲು ಅನೇಕ ಯುವಜನರಿಗೆ ಸ್ಫೂರ್ತಿ ನೀಡಿದೆ ಎಂದು ತಿಳಿಸುತ್ತಾ, ಅವರ ಭವಿಷ್ಯದ ಪ್ರಯತ್ನಗಳಿಗೆ ಶ್ರೀ ಮೋದಿ ಅವರು ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ಶ್ರೀಶಂಕರ್ ಅವರಿಗೆ ಅಮೋಘ ಬೆಳ್ಳಿ ಪದಕ! ಎಂತಹ ಅಸಾಧಾರಣ ಪ್ರದರ್ಶನ!

ಅತ್ಯುತ್ತಮ ಜಿಗಿತದೊಂದಿಗೆ ಪದಕ ಜಯಿಸಿರುವ ಅವರಿಗೆ ಅಭಿನಂದನೆಗಳು. ಅವರ ಯಶಸ್ಸು ಅಥ್ಲೆಟಿಕ್ಸ್ ನಲ್ಲಿ ಶ್ರೇಷ್ಠತೆ ಸಾಧಿಸಲು ಹಲವಾರು ಯುವಜನರನ್ನು ಪ್ರೇರೇಪಿಸಲಿದೆ. ಅವರ ಮುಂಬರುವ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.

#CWG2026”

 

*****


(रिलीज़ आईडी: 2292100) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Telugu , Malayalam