ರೈಲ್ವೇ ಸಚಿವಾಲಯ
ದಕ್ಷಿಣ ಮಧ್ಯ ರೈಲ್ವೆಯ ನಾಂದೇಡ್ ವಿಭಾಗದ ಪರ್ಭಾನಿ-ಮುದ್ಖೇಡ್ ವಿಭಾಗಕ್ಕೆ 163 ಕೋಟಿ ರೂ. ವೆಚ್ಚದ ವಿದ್ಯುತ್ ಟ್ರಾಕ್ಷನ್ ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ಅನುಮೋದನೆ
ಹೆಚ್ಚಿನ ಸರಕು ಸಾಗಣೆ ಪ್ರಮಾಣ ನಿರ್ವಹಿಸಲು ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಬೆಂಬಲಿಸಲು 164 ಹಳಿ ಕಿ.ಮೀ.ಗಿಂತ ಹೆಚ್ಚಿನ ಟ್ರಾಕ್ಷನ್ ವ್ಯವಸ್ಥೆ ನವೀಕರಣ
प्रविष्टि तिथि:
28 JUL 2026 1:39PM by PIB Bengaluru
ರೈಲ್ವೆ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸುವ ಮತ್ತು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಕ್ರಮವಾಗಿ ಭಾರತೀಯ ರೈಲ್ವೆ ದಕ್ಷಿಣ ಮಧ್ಯ ರೈಲ್ವೆಯ ನಾಂದೇಡ್ ವಿಭಾಗದ ಪರ್ಭಾನಿ-ಮುದ್ಖೇಡ್ ಡಬಲ್ ಲೈನ್ ವಿಭಾಗದಲ್ಲಿ ವಿದ್ಯುತ್ ಟ್ರಾಕ್ಷನ್ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈ ಸಂಬಂಧಿತ ವಿದ್ಯುತ್ ಸರಬರಾಜು ಅಳವಡಿಕೆ ಕಾರ್ಯಗಳನ್ನು ಸಹ ಒಳಗೊಂಡಿರುವ ಈ ಯೋಜನೆಗೆ 163 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ
ಈ ಯೋಜನೆಯು ಅಸ್ತಿತ್ವದಲ್ಲಿರುವ 1x25 kV ವಿದ್ಯುತ್ ಟ್ರಾಕ್ಷನ್ ವ್ಯವಸ್ಥೆಯನ್ನು 164 ಟ್ರ್ಯಾಕ್ ಕಿಲೋಮೀಟರ್‌ಗಳಷ್ಟು ವಿಸ್ತಾರದಲ್ಲಿ ಹೆಚ್ಚು ಸುಧಾರಿತ 2x25 kV ವ್ಯವಸ್ಥೆಯಾಗಿ ಪರಿವರ್ತಿಸುವುದನ್ನು ಒಳಗೊಂಡಿದೆ, ಇದು ವರ್ಧಿತ ವಿದ್ಯುತ್ ಹೊರೆಯನ್ನು ಪೂರೈಸಲು ನವೀಕರಿಸಿದ ವಿದ್ಯುತ್ ಸರಬರಾಜು ಮೂಲಸೌಕರ್ಯದ ನೆರವನ್ನು ಪಡೆಯುತ್ತದೆ.
ಪರ್ಭಾನಿ-ಮುದ್ಖೇಡ್ ವಿಭಾಗವು ಅಜ್ಮೀರ್-ಇಂದೋರ್-ಖಂಡ್ವಾ-ಅಕೋಲಾ-ಪೂರ್ಣ-ಮುದ್ಖೇಡ್-ಸಿಕಂದರಾಬಾದ್-ಮಹಬೂಬ್‌ನಗರ-ಧೋನ್ ಅನ್ನು ಸಂಪರ್ಕಿಸುವ ಕಾರ್ಯತಂತ್ರದ ಪ್ರಮುಖ ಹೈಲಿ ಹೆಚ್ಚು ಬಳಕೆಯಲ್ಲಿರುವ ಜಾಲ (ಹೈಲಿ ಯುಟಿಲೈಸ್ಡ್ ನೆಟ್‌ವರ್ಕ್ ) (ಎಚ್ ಯುಎನ್ ) ಮಾರ್ಗ-9 ರ ಭಾಗವಾಗಿದೆ.
ನವೀಕರಿಸಿದ ಟ್ರ್ಯಾಕ್ಷನ್ ವ್ಯವಸ್ಥೆಯು ರೈಲು ಕಾರ್ಯಾಚರಣೆಗಳಿಗೆ ವಿದ್ಯುತ್ ಸರಬರಾಜನ್ನು ಬಲಪಡಿಸುತ್ತದೆ, ಈ ವಿಭಾಗವು ಹೆಚ್ಚಿನ ಸರಕು ಸಾಗಣೆ ಪ್ರಮಾಣ ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆ ಬೆಂಬಲಿಸುತ್ತದೆ. ಇದು 2029-30ರ ವೇಳೆಗೆ 3,000 ಮಿಲಿಯನ್ ಟನ್ ಸರಕು ಸಾಗಣೆಯನ್ನು ಸಾಧಿಸುವ ಭಾರತೀಯ ರೈಲ್ವೆಯ ಗುರಿಗೆ ಕೊಡುಗೆ ನೀಡುತ್ತದೆ.
ಈ ಯೋಜನೆಯು ದೇಶಾದ್ಯಂತ ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ಗಳಲ್ಲಿ ವಿದ್ಯುತ್ ಮೂಲಸೌಕರ್ಯ ಆಧುನೀಕರಿಸಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಭಾರತೀಯ ರೈಲ್ವೆಯ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2290328)
आगंतुक पटल : 10