ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಎಥೆನಾಲ್-ಮಿಶ್ರಿತ ಪೆಟ್ರೋಲ್‌ನ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ರಾಷ್ಟ್ರೀಯ ಪ್ರಯೋಜನಗಳನ್ನು ಉಲ್ಲೇಖಿಸಿದ ಸರಕಾರ
प्रविष्टि तिथि:
23 JUL 2026 3:06PM by PIB Bengaluru
ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣವನ್ನು 20% ಕ್ಕಿಂತ ಮೀರಿ ಹೆಚ್ಚಿಸಲು ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೆಚ್ಚಿನ ಎಥೆನಾಲ್ ಮಿಶ್ರಣಗಳ ಕುರಿತು ಯಾವುದೇ ಭವಿಷ್ಯದ ನಿರ್ಧಾರವನ್ನು ವಿವರವಾದ ವೈಜ್ಞಾನಿಕ ಮತ್ತು ತಾಂತ್ರಿಕ ಅಧ್ಯಯನಗಳು ಮತ್ತು ಆಟೋಮೊಬೈಲ್ ತಯಾರಕರು, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆಗಳ ನಂತರ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ, ಇ 85 ಇಂಧನವನ್ನು (85% ಎಥೆನಾಲ್ ಮತ್ತು 15% ಪೆಟ್ರೋಲ್ ಅನ್ನು ಒಳಗೊಂಡಿರುತ್ತದೆ) ಅಂತಹ ಇಂಧನಕ್ಕಾಗಿ (E85) ವಿನ್ಯಾಸಗೊಳಿಸಲಾದ ಮತ್ತು ಪ್ರಮಾಣೀಕರಿಸಿದ ಫ್ಲೆಕ್ಸ್ ಇಂಧನ ವಾಹನಗಳಲ್ಲಿ (FFV ಗಳು) ಮಾತ್ರವೇ ಬಳಸಲು ಪ್ರತ್ಯೇಕವಾಗಿ ಪರಿಚಯಿಸಲಾಗಿದೆ ಮತ್ತು ಇದು ಪೆಟ್ರೋಲ್‌ನ ರಾಷ್ಟ್ರವ್ಯಾಪಿ ಮೂಲ ಎಥೆನಾಲ್ ಮಿಶ್ರಣ ಮಟ್ಟದಲ್ಲಿ ಹೆಚ್ಚಳವನ್ನು ಪ್ರತಿನಿಧಿಸುವುದಿಲ್ಲ..
ಕಳೆದ ಮೂರು ವರ್ಷಗಳಲ್ಲಿ ವರ್ಷವಾರು ಮತ್ತು ಪ್ರಸ್ತುತ ಸೂಚಿಸಲಾದ ಎಥೆನಾಲ್ ಮಿಶ್ರಣ ಶೇಕಡಾವಾರು ಪ್ರಮಾಣ ಹಾಗು ಸಾಧಿಸಿದ ಸರಾಸರಿ ಮಿಶ್ರಣದ ವಿವರಗಳು ಈ ಕೆಳಗಿನಂತಿವೆ.
|
ಎಥೆನಾಲ್ ಪೂರೈಕೆ ವರ್ಷ
|
ಸರಾಸರಿ ಮಿಶ್ರಣ (%)
|
|
2022-23
|
~12
|
|
2023-24
|
~14.6
|
|
2024-25
|
~19.2
|
|
2025-26 (ನವೆಂಬರ್-ಜೂನ್)
|
20
|
ಎಥೆನಾಲ್ ಹೊಸ ಇಂಧನವಲ್ಲ. ಇದನ್ನು ಜಾಗತಿಕವಾಗಿ ಒಂದು ಶತಮಾನದಿಂದಲೂ ಹೆಚ್ಚು ಕಾಲದಿಂದ ಬಳಸಲಾಗುತ್ತಿದೆ, ಬ್ರೆಜಿಲ್‌ನಂತಹ ದೇಶಗಳು ದಶಕಗಳಿಂದ ಹೆಚ್ಚಿನ ಎಥೆನಾಲ್ ಮಿಶ್ರಣಗಳನ್ನು ನಿರ್ವಹಿಸುತ್ತಿವೆ. ಭಾರತದಲ್ಲಿ, ನೀತಿ ಆಯೋಗ, ಆಟೋಮೊಬೈಲ್ ತಯಾರಕರು, ತೈಲ ಮಾರುಕಟ್ಟೆ ಕಂಪನಿಗಳು (OMC ಗಳು), ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (SIAM), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP) ಮತ್ತು ಇತರ ತಾಂತ್ರಿಕ ಸಂಸ್ಥೆಗಳನ್ನು ಒಳಗೊಂಡ ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಮತ್ತು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಹಂತ ಹಂತವಗಿ ಇ.ಬಿ.ಪಿ. (EBP) ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲದ ಹಂತ ಹಂತದ ನೀತಿ ಅಭಿವೃದ್ಧಿ, ಪಾಲುದಾರರ ಸಮಾಲೋಚನೆಗಳು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಮರ್ಥ್ಯ ಸೃಷ್ಟಿಯ ನಂತರ ಭಾರತವು ಮೂಲ ಗುರಿಗಿಂತ ಐದು ವರ್ಷಗಳ ಮೊದಲೇ 20% ಎಥೆನಾಲ್ ಮಿಶ್ರಣವನ್ನು ಸಾಧಿಸಿದೆ.
ವೈಜ್ಞಾನಿಕ ಅಧ್ಯಯನಗಳು, ಕ್ಷೇತ್ರ ಪರಿಶೀಲನೆ ಮತ್ತು ವ್ಯಾಪಕವಾದ ನೈಜ-ಪ್ರಪಂಚದ ಕಾರ್ಯಾಚರಣೆಯ ಅನುಭವವು, ನಿಗದಿತ
ಮಾನದಂಡಗಳು ಮತ್ತು ತಯಾರಕರ ಶಿಫಾರಸುಗಳಿಗೆ ಅನುಗುಣವಾಗಿ ಬಳಸಿದಾಗ ಇ-20 ಸುರಕ್ಷಿತ, ಸ್ವಚ್ಛ ಮತ್ತು ತಾಂತ್ರಿಕವಾಗಿ ಉತ್ತಮ ಇಂಧನವಾಗಿದೆ ಎಂಬುದನ್ನು ತೋರಿಸಿವೆ. ಸರ್ಕಾರದ ಮೌಲ್ಯಮಾಪನವು ಪ್ರಯೋಗಾಲಯ ಸಂಶೋಧನೆಯನ್ನು ಮಾತ್ರವಲ್ಲದೆ ರಾಷ್ಟ್ರವ್ಯಾಪಿ ಅನುಷ್ಠಾನದ ನಂತರದ ವ್ಯಾಪಕ ಪ್ರಮಾಣದ ಅನುಭವವನ್ನು ಆಧರಿಸಿದೆ.
ಇ-15+ ಮಿಶ್ರಿತ ಪೆಟ್ರೋಲ್ ಮೂರುವರೆ ವರ್ಷಗಳಿಗೂ ಹೆಚ್ಚು ಕಾಲ ಮತ್ತು E19-E20 ಇಂಧನ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲದಿಂದ ವ್ಯಾಪಕವಾಗಿ ಬಳಕೆಯಲ್ಲಿದೆ. 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಈ ಮಿಶ್ರಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಎಥೆನಾಲ್ ಮಿಶ್ರಣದಿಂದ ಉಂಟಾಗುತ್ತದೆ ಎನ್ನಲಾಗುವ ವ್ಯಾಪಕವಾದ ಎಂಜಿನ್ ವೈಫಲ್ಯ ಅಥವಾ ವಾಹನ ಸ್ಥಗಿತದ ಯಾವುದೇ ಪರಿಶೀಲಿಸಿದ ಪುರಾವೆಗಳು ಲಭ್ಯವಿಲ್ಲ.. ಇದನ್ನು ದೊಡ್ಡ ಪ್ರಮಾಣದ ನೈಜ-ಪ್ರಪಂಚದ ಅನುಭವದ ಮೂಲಕ ಮತ್ತಷ್ಟು ಮೌಲ್ಯೀಕರಿಸಲಾಗಿದೆ. E20 ಇಂಧನದಿಂದಾಗಿ ವಾಹನದ ಜೀವಿತಾವಧಿಯಲ್ಲಿ ಯಾವುದೇ ಅಸಹಜ ತುಕ್ಕು, ಸವೆತ ಅಥವಾ ವಾಹನದ ಜೀವಿತಾವಧಿಯಲ್ಲಿ ಕಡಿತವಿಲ್ಲ ಎಂದು ತಯಾರಕರ ಸೇವಾ ದತ್ತಾಂಶವು ದೃಢಪಡಿಸುತ್ತದೆ. ತಯಾರಕರು E20 ಇಂಧನವನ್ನು ಬಳಸುವ ವಾಹನಗಳಿಗೆ ಖಾತರಿ ಬಾಧ್ಯತೆಗಳನ್ನು ನೀಡುವುದನ್ನು ಮುಂದುವರಿಸಿರುತ್ತರೆ, ಇದು ಅದರ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಮತ್ತಷ್ಟು ವಿಶ್ವಾಸವನ್ನು ನೀಡುತ್ತದೆ..
ದೇಶದ ಅತಿದೊಡ್ಡ ಪ್ರಯಾಣಿಕ ವಾಹನ ತಯಾರಕರಲ್ಲಿ ಒಂದಾಗಿರುವ ಕಂಪನಿಯು 2025–26ರ ಹಣಕಾಸು ವರ್ಷದಲ್ಲಿ 2.84 ಕೋಟಿ ವಾಹನಗಳನ್ನು ಸರ್ವಿಸ್ ಮಾಡಿದೆ. ಇದರಲ್ಲಿ ಸುಮಾರು 1.5 ಕೋಟಿ ಹಳೆಯ, E20-ಪ್ರಮಾಣೀಕರಿಸದ ವಾಹನಗಳು ಸೇರಿವೆ, ಇವುಗಳಲ್ಲಿ ಯಾವುದೇ E20-ಸಂಬಂಧಿತ ಎಂಜಿನ್ ಹಾನಿ ಅಥವಾ ಅಸಹಜವಾದ ಬಿಡಿಭಾಗಗಳ ಹಾನಿ ವರದಿ ಆಗಿಲ್ಲ. ಅದೇ ರೀತಿ, ಪ್ರಮುಖ ದ್ವಿಚಕ್ರ ವಾಹನ ತಯಾರಕರಲ್ಲಿ ಒಬ್ಬರು, ವ್ಯಾಪಕ ಸೇವಾ ದಾಖಲೆಗಳ ಆಧಾರದ ಮೇಲೆ, ಹಿಂದಿನ ಇಂಧನ ಮಿಶ್ರಣಗಳಿಗೆ ಹೋಲಿಸಿದರೆ E20 ಯಲ್ಲಿ ಕಾರ್ಯನಿರ್ವಹಿಸುವ ವಾಹನಗಳಲ್ಲಿ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ವರದಿ ಮಾಡಿದ್ದಾರೆ.
E20 ಇಂಧನದಿಂದಾಗಿ ಮೈಲೇಜ್‌ನಲ್ಲಿ ತೀವ್ರ ಕಡಿತ, ನಿಧಾನಗತಿಯ ಪಿಕ್-ಅಪ್ ಮತ್ತು ಪೆಟ್ರೋಲ್ ಟ್ಯಾಂಕ್‌ಗಳ ತುಕ್ಕು ಹಿಡಿಯುವಿಕೆಯ ಬಗ್ಗೆ ವಾಹನ ತಯಾರಕರು, ಆಟೋಮೊಬೈಲ್ ಸಂಘಗಳು ಅಥವಾ ಗ್ರಾಹಕ ಸಂಸ್ಥೆಗಳಿಂದ ಸರ್ಕಾರವು ಯಾವುದೇ ವ್ಯಾಪಕ ಅಥವಾ ಸಮರ್ಥನೀಯ ದೂರುಗಳನ್ನು ಸ್ವೀಕರಿಸಿಲ್ಲ. ಆದಾಗ್ಯೂ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಎತ್ತಲಾದ ಕೆಲವು ಕಳವಳಗಳನ್ನು ಸರ್ಕಾರ ಗಮನಿಸಿದೆ, ಇವುಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆ
ನೀತಿ ಆಯೋಗ, ಐಒಸಿಎಲ್, ಎಆರ್ಎಐ, ಐಐಪಿ ಮತ್ತು ಎಸ್ಐಎಎಂ ಅಡಿಯಲ್ಲಿ ಅಂತರ-ಸಚಿವಾಲಯ ಸಮಿತಿಯಿಂದ ವ್ಯಾಪಕವಾದ ಪ್ರಯೋಗಾಲಯ ಪರೀಕ್ಷೆ ಮತ್ತು ಕ್ಷೇತ್ರ ಮೌಲ್ಯೀಕರಣವು ಇ 20 ಇಂಧನವು ಅಸಹಜ ಸವೆತ ಅಥವಾ ಹೊಂದಾಣಿಕೆಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ದೃಢಪಡಿಸಿದೆ.
ಮೈಲೇಜ್‌ಗೆ ಸಂಬಂಧಿಸಿದಂತೆ, ಸರ್ಕಾರಿ ಸಂಸ್ಥೆಗಳು ಮತ್ತು ಆಟೋಮೊಬೈಲ್ ತಯಾರಕರ ಅಧ್ಯಯನಗಳು ಇಂಧನ ದಕ್ಷತೆಯು ಚಾಲನಾ ಪರಿಸ್ಥಿತಿಗಳು, ಚಾಲನಾ ಅಭ್ಯಾಸಗಳು ಮತ್ತು ವಾಹನ ನಿರ್ವಹಣೆ ಸೇರಿದಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ ಎಂದು ಸೂಚಿಸುತ್ತವೆ. ಕೆಲವು ಇ 10-ವಿನ್ಯಾಸಗೊಳಿಸಿದ ವಾಹನಗಳಲ್ಲಿ ಇಂಧನ ಆರ್ಥಿಕತೆಯಲ್ಲಿನ ಯಾವುದೇ ಕಡಿತ/ಇಳಿಕೆಯು ಸಾಮಾನ್ಯವಾಗಿ ಸುಮಾರು 3-5% ಗೆ ಸೀಮಿತವಾಗಿರುತ್ತದೆ, ಆದರೆ ಇ 20 ಹೆಚ್ಚಿನ ಆಕ್ಟೇನ್ ರೇಟಿಂಗ್, ಉತ್ತಮ ಆಂಟಿ-ನಾಕ್ ಗುಣಲಕ್ಷಣಗಳು, ಸ್ವಚ್ಛ ದಹನ ಮತ್ತು ಸುಗಮ ಎಂಜಿನ್ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಆಟೋಮೊಬೈಲ್ ತಯಾರಕರು, ಘಟಕ ಪೂರೈಕೆದಾರರು, ಎಸ್.ಐ.ಎ.ಎಂ, ಎ.ಆರ್.ಎ.ಐ., ಪರೀಕ್ಷಾ ಏಜೆನ್ಸಿಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳು E20 ರ ವೈಜ್ಞಾನಿಕ ಮೌಲ್ಯಮಾಪನ ಮತ್ತು ಅದರ ಬಿಡುಗಡೆಯ ಪ್ರತಿಯೊಂದು ಹಂತದಲ್ಲೂ ಭಾಗಿಯಾಗಿದ್ದವು. ಇಂಧನ ವ್ಯವಸ್ಥೆಗಳು, ಎಂಜಿನ್ ಬಾಳಿಕೆ, ಚಾಲನಾ ಸಾಮರ್ಥ್ಯ, ಸಮಂಜಸವಾದ ವಸ್ತು ಹೊಂದಾಣಿಕೆ ಮತ್ತು ಹೊರಸೂಸುವಿಕೆ ಕಾರ್ಯಕ್ಷಮತೆಯ ಯಶಸ್ವಿ ಮೌಲ್ಯೀಕರಣದ ನಂತರವೇ E20 ನ್ನು ಹೊರತರಲಾಯಿತು. ಈ ಅಧ್ಯಯನಗಳು ಹಿಂದಿನ/ಪರಂಪರೆಯ ವಾಹನಗಳು E20 ಕಾರಣದಿಂದಾಗಿ ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಅಥವಾ ಅಸಹಜ ಸವೆತ ಮತ್ತು ಹಾನಿ ಕಂಡುಬಂದಿಲ್ಲ ಎಂಬುದನ್ನು ಸಾಬೀತು ಮಾಡಿವೆ,
ಎಸ್.ಐ.ಎ.ಎಂ. ಮತ್ತು ಎ.ಆರ್.ಎ.ಐ.ಪ್ರಕಾರ, E20 ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಜೊತೆ ವೇಗವರ್ಧನೆ ಮತ್ತು ಸವಾರಿ ಗುಣಮಟ್ಟವನ್ನು ಸುಧಾರಿಸುತ್ತದೆ. ಎಥೆನಾಲ್‌ನ ಹೆಚ್ಚಿನ-ಆಕ್ಟೇನ್ ಸಂಖ್ಯೆಯು ಆಧುನಿಕ ಹೆಚ್ಚಿನ-ಸಂಕೋಚನ ಎಂಜಿನ್‌ಗಳನ್ನು ಬೆಂಬಲಿಸುತ್ತದೆ ಮತ್ತು ಅದರ ಹೆಚ್ಚಿನ ಆವಿಯಾಗುವಿಕೆಯ ಶಾಖವು ದಹನ ದಕ್ಷತೆಯನ್ನು ಸುಧಾರಿಸುತ್ತದೆ.
E20 ಗೆ ಪರಿವರ್ತನೆಯು ಗಮನಾರ್ಹ ರಾಷ್ಟ್ರೀಯ ಪ್ರಯೋಜನಗಳನ್ನು ನೀಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮವು ₹1.97 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಿದೆ, ಸುಮಾರು 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಮೂಡಿ ಬಂದಿದೆ, ಸುಮಾರು 952 ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ (CO₂) ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಮತ್ತು ₹1.66 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ರೈತರಿಗೆ ವರ್ಗಾಯಿಸಿದೆ.
ರಾಷ್ಟ್ರೀಯ ಜೈವಿಕ ಇಂಧನ ನೀತಿ ಮತ್ತು ಭಾರತದ ಇಂಧನ ಸುರಕ್ಷತೆ ಹಾಗು ಹೊರಸೂಸುವಿಕೆ ಕಡಿತ ಉದ್ದೇಶಗಳಿಗೆ ಅನುಗುಣವಾಗಿ ಶುದ್ಧ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರಕ್ಕೆ ಸುಸ್ಥಿರವಾದ ಇಂಧನಗಳ ಕಡೆಗೆ ಹಂತಹಂತವಾಗಿ ಪರಿವರ್ತನೆಗೊಳ್ಳುವುದು ಸರ್ಕಾರದ ನೀತಿಯಾಗಿದೆ.
ಆಟೋಮೊಬೈಲ್ ತಯಾರಕರು, ಎ.ಆರ್.ಎ.ಐ, ಎಸ್.ಐ.ಎ.ಎಂ,, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಇತರ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ಅನುಸರಿಸಿ E20 ಗೆ ಪರಿವರ್ತನೆಯನ್ನು ಹಂತಹಂತವಾಗಿ, ಸಮಾಲೋಚನಾ ವಿಧಾನದಲ್ಲಿ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಲಾಗಿದೆ. ಸಾಮಗ್ರಿ/ವಸ್ತು/ಬಿಡಿಭಾಗಗಳ ಹೊಂದಾಣಿಕೆ, ಎಂಜಿನ್ ಬಾಳಿಕೆ, ಇಂಧನ ವ್ಯವಸ್ಥೆಗಳು, ಚಾಲನಾ ಸಾಮರ್ಥ್ಯ, ಹೊರಸೂಸುವಿಕೆ ಮತ್ತು ಕಾರ್ಯಕ್ಷಮತೆಯನ್ನು ಈ ಇಂಧನ ಬಿಡುಗಡೆ ಮಾಡುವ ಮೊದಲು ಸಮಗ್ರವಾಗಿ ಮೌಲ್ಯಮಾಪನ ಮಾಡಲಾಗಿದೆ
ವ್ಯಾಪಕ ಪರೀಕ್ಷೆಯ ನಂತರ ಆಟೋಮೊಬೈಲ್ ಉದ್ಯಮದಿಂದ ವೈಜ್ಞಾನಿಕವಾಗಿ ಮೌಲ್ಯೀಕರಿಸಲ್ಪಟ್ಟ ಮತ್ತು ಅಂಗೀಕರಿಸಲ್ಪಟ್ಟಿರುವ E0/E10 ಪೆಟ್ರೋಲ್‌ಗೆ ಮರಳುವ ಯಾವುದೇ ಪ್ರಸ್ತಾಪವಿಲ್ಲ. ಸಾರ್ವಜನಿಕ ನೀತಿಯ ಉದ್ದೇಶವು ಉತ್ತಮ ಇಂಧನದೊಂದಿಗೆ ಮುಂದುವರಿಯುವುದಾಗಿದೆಯೇ ಹೊರತು ಕೆಳದರ್ಜೆಯ ಗುಣಮಟ್ಟಕ್ಕೆ ಹಿಂತಿರುಗುವುದು ಅಲ್ಲ.
ಒಂದು ಲಕ್ಷಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ E0, E10 ಮತ್ತು E20 ಪೆಟ್ರೋಲ್‌ಗಾಗಿ ಸಮಾನಾಂತರ ರಾಷ್ಟ್ರವ್ಯಾಪಿ ಪೂರೈಕೆ ಸರಪಳಿಗಳನ್ನು ನಿರ್ವಹಿಸುವುದು ಲಾಜಿಸ್ಟಿಕ್ಸ್ ಸಂಕೀರ್ಣತೆ, ದಾಸ್ತಾನು ಮತ್ತು ನಿರ್ವಹಣಾ ವೆಚ್ಚಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಸಾರ್ವಜನಿಕ ನೀತಿಯು ಗ್ರಾಹಕರ ಅನುಕೂಲತೆಯನ್ನು ಇಂಧನ ಸುರಕ್ಷತೆ, ಪರಿಸರ ಸುಸ್ಥಿರತೆ ಮತ್ತು ರೈತರ ಕಲ್ಯಾಣದೊಂದಿಗೆ ಸಮತೋಲನಗೊಳಿಸಬೇಕಾಗುತ್ತದೆ.
ಒಮ್ಮೆ ಶುದ್ಧ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಇಂಧನವನ್ನು ಅಳವಡಿಸಿಕೊಂಡ ನಂತರ, ಉತ್ತಮ ತಂತ್ರಜ್ಞಾನದೊಂದಿಗೆ ಮುಂದುವರಿಯುವುದು ಇದರ ಉದ್ದೇಶವಾಗಿದೆ, ಕೆಳಮಟ್ಟದ ಗುಣಮಟ್ಟಕ್ಕೆ ಹಿಮ್ಮರಳುವುದಲ್ಲ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCಗಳು) E20 ಇಂಧನಕ್ಕೆ ಸಂಬಂಧಿಸಿದ ದೂರುಗಳು ಸೇರಿದಂತೆ ಗ್ರಾಹಕರ ದೂರುಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು, ತನಿಖೆ ಮಾಡಲು ಮತ್ತು ಪರಿಹರಿಸಲು ಬಲಿಷ್ಠವಾದ ಗ್ರಾಹಕ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಸ್ಥಾಪಿಸಿವೆ. ಗ್ರಾಹಕರು ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ದೂರು/ಸಲಹೆ ರಿಜಿಸ್ಟರ್ ಗ್ಳು/ನೋಂದಣಿಗಳು, ಮೀಸಲಾದ ಟೋಲ್-ಫ್ರೀ ಗ್ರಾಹಕ ಆರೈಕೆ ಸಂಖ್ಯೆಗಳು, ಕಂಪನಿ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು, ಗ್ರಾಹಕ ಸಂಬಂಧ ನಿರ್ವಹಣೆ (CRM) ವ್ಯವಸ್ಥೆಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಇ-ಮೇಲ್ ಮತ್ತು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS) ಗಳಂತಹ ಬಹು ಆಫ್‌ಲೈನ್ ಮತ್ತು ಆನ್‌ಲೈನ್ ಚಾನೆಲ್‌ಗಳ ಮೂಲಕ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಬಹುದು. ತ್ವರಿತ ಕುಂದುಕೊರತೆ ಪರಿಹಾರವನ್ನು ಸುಗಮಗೊಳಿಸಲು ಡೀಲರ್‌ಗಳು ಮತ್ತು ಸಂಬಂಧಪಟ್ಟ ಕ್ಷೇತ್ರ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತಿದೆ. ಈ ಚಾನೆಲ್‌ಗಳ ಮೂಲಕ ಸ್ವೀಕರಿಸಿದ ಎಲ್ಲಾ ದೂರುಗಳನ್ನು ಒ.ಎಂ.ಸಿ. ಗಳ ಸ್ಥಾಪಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ನಿಗದಿತ ಸಮಯದ ಚೌಕಟ್ಟಿನೊಳಗೆ ಸರಿಯಾಗಿ ತನಿಖೆ ಮಾಡಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ.
ಯಾವುದೇ ಕಾರ್ಯಕ್ಷಮತೆಯ ಸಮಸ್ಯೆಯಿಲ್ಲದೆ ಎಲ್ಲಾ ಪೆಟ್ರೋಲ್ ವಾಹನಗಳೊಂದಿಗೆ E20 ಇಂಧನದ ತಾಂತ್ರಿಕ ಹೊಂದಾಣಿಕೆ ಮತ್ತು ಎಥೆನಾಲ್ ಮಿಶ್ರಣದ ಪರಿಸರ ಮತ್ತು ಇಂಧನ ಭದ್ರತಾ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಶಿಕ್ಷಣ ನೀಡಲು/ಜಾಗ್ರತಿ ಮೂಡಿಸಲು ಸಾರ್ವಜನಿಕ ಜಾಗೃತಿ ಉಪಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಸ್ವೀಕರಿಸಿದ ಗ್ರಾಹಕರ ಪ್ರತಿಕ್ರಿಯೆಯನ್ನು ಒ.ಎಂ.ಸಿ. ಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತವೆ ಮತ್ತು ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮವನ್ನು ಮುನ್ನಡೆಸುವಾಗ ಗ್ರಾಹಕರ ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವಲ್ಲೆಲ್ಲಾ ಸೂಕ್ತ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಈ ಮಾಹಿತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಇಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2288416)
आगंतुक पटल : 12