ಪ್ರಧಾನ ಮಂತ್ರಿಯವರ ಕಛೇರಿ
ವಿಕ್ರಮ್ -1 ರ ಯಶಸ್ವಿ ಉಡಾವಣೆಗೆ ಸ್ಕೈರೂಟ್ ಏರೋಸ್ಪೇಸ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
18 JUL 2026 1:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿ, ವಿಕ್ರಮ್ -1 ರ ಯಶಸ್ವಿ ಉಡಾವಣೆಗೆ ಅಭಿನಂದಿಸಿದ್ದಾರೆ. ಭಾರತದ ಬಾಹ್ಯಾಕಾಶ ಪಯಣದಲ್ಲಿ ಇದು ನಿರ್ಣಾಯಕ ಕ್ಷಣ ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ಅವಕಾಶಗಳನ್ನು ತೆರೆಯುತ್ತಾ ನಾವೀನ್ಯತೆಗೆ ವೇಗ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಈ ಸಾಧನೆಯು ಅಸಂಖ್ಯಾತ ಯುವಜನರಿಗೆ ದೊಡ್ಡ ದೊಡ್ಡ ಕನಸು ಕಾಣಲು ಮತ್ತು ನಿರ್ಭೀತಿಯಿಂದ ಹೊಸತನ್ನು ಅನ್ವೇಷಿಸಲು ಪ್ರೋತ್ಸಾಹ ನೀಡುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿ, ವಿಕ್ರಮ್ -1 ರ ಯಶಸ್ವಿ ಉಡಾವಣೆಗೆ ಅಭಿನಂದಿಸಿದೆ.
ಭಾರತದ ಬಾಹ್ಯಾಕಾಶ ಪಯಣದಲ್ಲಿ ಇದು ನಿರ್ಣಾಯಕ ಕ್ಷಣವಾಗಿದೆ. ನಮ್ಮ ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ವ್ಯಾಪ್ತಿಯನ್ನು ತೆರೆದು ನಾವೀನ್ಯತೆಗೆ ವೇಗ ನೀಡಲಿದೆ.
ಈ ಸಾಧನೆಯು ಅಸಂಖ್ಯಾತ ಯುವಜನರು ದೊಡ್ಡ ದೊಡ್ಡ ಕನಸು ಕಾಣಲು ಮತ್ತು ನಿರ್ಭಯವಾಗಿ ಹೊಸತನ್ನು ಕಂಡುಕೊಳ್ಳಲು ಪ್ರೋತ್ಸಾಹ ನೀಡುತ್ತದೆ.
@SkyrootA
*****
(रिलीज़ आईडी: 2286471)
आगंतुक पटल : 14
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam