ಪ್ರಧಾನ ಮಂತ್ರಿಯವರ ಕಛೇರಿ
ದೃಢ ಸಂಕಲ್ಪ ಮತ್ತು ಸಕಾರಾತ್ಮಕ ಚಿಂತನೆಯ ಶಕ್ತಿಯನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
09 JUL 2026 7:39AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೃಢ ನಂಬಿಕೆ, ನಿರಂತರ ಪ್ರಯತ್ನ ಮತ್ತು ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ನಿಜವಾದ ಗುಟ್ಟು ಎಂದು ಹೇಳಿದ್ದಾರೆ. ಇದೇ ಗುಣಗಳ ಮಾರ್ಗದರ್ಶನದಲ್ಲಿ ದೇಶದ ಯುವಜನತೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಸಾಕಾರಗೊಳಿಸಲು ಸಂಪೂರ್ಣ ಸಮರ್ಪಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ-
“अनिर्वेदः श्रियो मूलमनिर्वेदः परं सुखम्।
अनिर्वेदो हि सततं सर्वार्थेषु प्रवर्तकः॥”
ಈ ಸುಭಾಷಿತದ ಅರ್ಥವೇನೆಂದರೆ, ಉತ್ಸಾಹ, ಅಚಲ ನಂಬಿಕೆ ಮತ್ತು ನಿರಂತರ ಪ್ರಯತ್ನವೇ ಪ್ರಗತಿಯ ಮೂಲಾಧಾರವಾಗಿದೆ. ನಿರಾಶೆಗೆ ಒಳಗಾಗದೆ ತಮ್ಮ ಗುರಿಯತ್ತ ಸತತವಾಗಿ ಶ್ರಮಿಸುವ ವ್ಯಕ್ತಿ ಅಂತಿಮವಾಗಿ ಯಶಸ್ಸನ್ನು ಸಾಧಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಅಚಲ ವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ತಮ್ಮ ಕಾರ್ಯವನ್ನು ಮುಂದುವರಿಸಬೇಕು. ಇಂತಹ ಗುಣಗಳೇ ವ್ಯಕ್ತಿಯನ್ನು ಪ್ರಗತಿ, ಯಶಸ್ಸು ಹಾಗೂ ಜೀವನದ ಶ್ರೇಷ್ಠತೆಯತ್ತ ಕೊಂಡೊಯ್ಯುತ್ತವೆ ಎಂದು ಸುಭಾಷಿತ ಸಾರುತ್ತದೆ.
ಪ್ರಧಾನಮಂತ್ರಿ ಕಚೇರಿಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;
“दृढ़ विश्वास, सतत प्रयास और सकारात्मक सोच सफलता की असली कुंजी है। हमारे युवा साथी इन्हीं गुणों के साथ पूरे समर्पण भाव से विकसित भारत के निर्माण में जुटे हैं।
अनिर्वेदः श्रियो मूलमनिर्वेदः परं सुखम्।
अनिर्वेदो हि सततं सर्वार्थेषु प्रवर्तकः॥”
*****
(रिलीज़ आईडी: 2283996)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam