ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಜುಲೈ 15 ರೊಳಗೆ ಲಾಸ್ ಏಂಜಲೀಸ್ 2028ರ ಒಲಿಂಪಿಕ್ ಕ್ರೀಡಾಕೂಟದ ಅರ್ಹತೆ ಮತ್ತು ಕ್ರೀಡಾಪಟುಗಳ ಆಯ್ಕೆ ಮಾರ್ಗವನ್ನು ಪ್ರಕಟಿಸುವಂತೆ ಒಲಿಂಪಿಕ್ಸ್ ಕ್ರೀಡೆಗಳ ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (NSFs) ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶನ


ಲಾಸ್ ಏಂಜಲೀಸ್ 2028ರ ಒಲಿಂಪಿಕ್ ಕ್ರೀಡಾಕೂಟಗಳಿಗೆ ಒಲಿಂಪಿಕ್ ಅರ್ಹತೆ ಮತ್ತು ಆಯ್ಕೆ ಮಾನದಂಡಗಳ ಪಾರದರ್ಶಕ ಪ್ರಕಟಣೆಗೆ ಕೇಂದ್ರ ಕ್ರೀಡಾ ಸಚಿವಾಲಯ ಕರೆ

प्रविष्टि तिथि: 09 JUL 2026 5:32PM by PIB Bengaluru

ಲಾಸ್ ಏಂಜಲೀಸ್ 2028ರ ಒಲಿಂಪಿಕ್ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳ ಆಯ್ಕೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡಗಳು ಮತ್ತು ಪ್ರಕ್ರಿಯೆ ಸೇರಿದಂತೆ ಒಲಿಂಪಿಕ್ ಅರ್ಹತೆ ಮತ್ತು ಆಯ್ಕೆ ಮಾರ್ಗವನ್ನು ಪ್ರಕಟಿಸುವಂತೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್.ಎಸ್.ಎಫ್.) ನಿರ್ದೇಶಿಸಿದೆ.

ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟಗಳು, ಪ್ಯಾರಾ ಏಷ್ಯನ್ ಕ್ರೀಡಾಕೂಟಗಳು ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಂತಹ ಬೃಹತ್ ಕ್ರೀಡಾಕೂಟಗಳ ಆಯ್ಕೆ ನೀತಿ ಮತ್ತು ಮಾನದಂಡಗಳನ್ನು ಆಯಾ ಕ್ರೀಡಾಕೂಟಗಳು ಪ್ರಾರಂಭವಾಗುವ ಕನಿಷ್ಠ ಎರಡು ವರ್ಷಗಳ ಮೊದಲು ಸಂಬಂಧಪಟ್ಟ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್.ಎಸ್.ಎಫ್.) ಅಧಿಕೃತ ವೆಬ್‌ಸೈಟ್‌ ನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಬೇಕು ಮತ್ತು ಅಪ್‌ಲೋಡ್ ಮಾಡಬೇಕು ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಪುನರುಚ್ಚರಿಸಿದೆ.

ಆಯ್ಕೆ ನೀತಿ ಮತ್ತು ಮಾನದಂಡಗಳನ್ನು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್.ಎಸ್.ಎಫ್.) ಸದಸ್ಯ ಘಟಕಗಳು ಮತ್ತು ಭಾರತದ ಕ್ರೀಡಾ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಬೇಕು.

ಲಾಸ್ ಏಂಜಲೀಸ್ 2028ರ ಒಲಿಂಪಿಕ್ ಕ್ರೀಡಾಕೂಟವು 2028ರ ಜುಲೈ 14 ರಿಂದ ಜುಲೈ 30 ರವರೆಗೆ ನಡೆಯಲಿದೆ.

ಲಾಸ್ ಏಂಜಲೀಸ್ 2028ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತಾ ಮಾರ್ಗಗಳನ್ನು ಆಯಾ ಅಂತರರಾಷ್ಟ್ರೀಯ ಒಕ್ಕೂಟಗಳು ಬಿಡುಗಡೆ ಮಾಡಿವೆ ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ, ಅವುಗಳು ಈ ಕೆಳಗಿನ ಕೊಂಡಿಯಲ್ಲಿ ಲಭ್ಯವಿವೆ:

https://www.olympics.com/ioc/documents/olympic-games/los-angeles-2028-olympic-games

ಅದರಂತೆ, ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್.ಎಸ್.ಎಫ್.) ಒಲಿಂಪಿಕ್ ಅರ್ಹತೆ ಮತ್ತು ಆಯ್ಕೆ ಮಾರ್ಗವನ್ನು, ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ಆಯ್ಕೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡಗಳು ಮತ್ತು ಪ್ರಕ್ರಿಯೆಯನ್ನು ಒಳಗೊಂಡಂತೆ, ತಮ್ಮ ಅಧಿಕೃತ ವೆಬ್‌ಸೈಟ್‌ ಗಳಲ್ಲಿ ತಕ್ಷಣವೇ ಮತ್ತು 2026ರ ಜುಲೈ 15 ರೊಳಗೆ ಪ್ರಕಟಿಸಲು ವಿನಂತಿಸಲಾಗಿದೆ.

ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್.ಎಸ್.ಎಫ್.) ಎಲ್ಲಾ ಸಂಯೋಜಿತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಘಗಳಿಗೆ ಆಯ್ಕೆ ಮಾರ್ಗವನ್ನು ತಲುಪಿಸಲು ಸಹ ಸೂಚಿಸಲಾಗಿದೆ.

ಕ್ರೀಡಾಕೂಟದ ಅರ್ಹತಾ ಮಾರ್ಗ, ಆಯ್ಕೆ ಮಾನದಂಡಗಳು ಮತ್ತು ಆಯ್ಕೆ ವಿಧಾನವನ್ನು ಎಲ್ಲಾ ಪಾಲುದಾರರ ಪ್ರಯೋಜನಕ್ಕಾಗಿ ಸಾಕಷ್ಟು ಮುಂಚಿತವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ (public domain) ಖಚಿತಪಡಿಸುವ ಮೂಲಕ, ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

******


(रिलीज़ आईडी: 2283027) आगंतुक पटल : 30
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Gujarati , Telugu , Malayalam