ಸಹಕಾರ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ ನವದೆಹಲಿಯಲ್ಲಿ ನಡೆಯಲಿರುವ ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಹಲವಾರು ಪ್ರಮುಖ ಉಪಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ


ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಯಡಿಯಲ್ಲಿ 232 ಧಾನ್ಯ ಸಂಗ್ರಹಣಾ ಗೋದಾಮುಗಳ ಹಸ್ತಾಂತರ, ಉದ್ಘಾಟನೆ ಮತ್ತು ಶಿಲಾನ್ಯಾಸ

ಅಮುಲ್   ಮತ್ತು ಎನ್ ಸಿಸಿಎಫ್   ಸಂಸ್ಥೆಗಳಿಂದ 64 ಎಕರೆ ಸಹಕಾರಿ ಅರಣ್ಯೀಕರಣ ಯೋಜನೆಯಾದ ‘ಸಹಕಾರ ವನ’ದ ಭೂಮಿ ಪೂಜೆ

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಬಿಎಸ್ ಎಸ್ ಎಲ್  ನ ಅಂಗಾಂಶ ಕೃಷಿ ಸೌಲಭ್ಯಗಳ ಭೂಮಿ ಪೂಜೆ

ಎನ್‌ಸಿಡಿ 3.0, ಜಿಯೋ-ಟ್ಯಾಗ್ ಮೊಬೈಲ್ ಆ್ಯಪ್ ಮತ್ತು ಎನ್ ಡಿಡಿಬಿ  ಯ ಹಾಲು ಪೂರೈಕೆ ಪರಿಶೀಲನಾ ಡ್ಯಾಶ್ ಬೋರ್ಡ್ ಪೋರ್ಟಲ್ ಬಿಡುಗಡೆ

50,000 ಪಿಎಸಿಎಸ್  ಗಳನ್ನು ಇ-ಪಿಎಸಿಎಸ್ ಗಳಾಗಿ ಪರಿವರ್ತನೆ

ನಗರ ಸಹಕಾರಿ ಬ್ಯಾಂಕುಗಳಿಗಾಗಿ ಎನ್ ಯುಸಿಎಫ್ ಡಿಸಿ ಯ ಎರಡು ಪ್ರಮುಖ ಡಿಜಿಟಲ್ ಉಪಕ್ರಮಗಳಾದ — 'ಸಹಕಾರ್ ಸಿಬಿಎಸ್'  ಮತ್ತು 'ಸಹಕಾರ್ ಸಹಯೋಗಿ' ಗೆ ಚಾಲನೆ ನೀಡಲಿರುವ  ಶ್ರೀ ಅಮಿತ್ ಶಾ

ಕೋಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಆರ್ಗನೈಸೇಶನ್ ಮಲ್ಟಿ-ಸ್ಟೇಟ್ ಲಿಮಿಟೆಡ್ ಮತ್ತು ಗೋಮಯ್ ಕೋಆಪರೇಟಿವ್ ಸೊಸೈಟಿ ಮಲ್ಟಿ-ಸ್ಟೇಟ್ ಲಿಮಿಟೆಡ್ ಉದ್ಘಾಟನೆ

ಬೀಜ ವ್ಯವಸ್ಥೆಯನ್ನು ಬಲಪಡಿಸಲು ಬಿಬಿಎಸ್ ಎಸ್ ಎಲ್ ಮತ್ತು ಐಸಿಎಆರ್ ನಡುವೆ ಒಪ್ಪಂದಕ್ಕೆ  ಸಹಿ; ಡೈರಿ ಸಹಕಾರ ಸಂಘಗಳ ಮಾದರಿ ಬೈಲಾಗಳ  ಬಿಡುಗಡೆ

प्रविष्टि तिथि: 05 JUL 2026 5:21PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ, 6 ಜುಲೈ 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಸಹಕಾರ ಸಚಿವಾಲಯದ 5 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರದಿಂದ ಸಮೃದ್ಧಿ" ದೃಷ್ಟಿಕೋನಕ್ಕೆ ಅನುಗುಣವಾಗಿ ಮತ್ತು ಸಹಕಾರ ವಲಯವನ್ನು ಹೆಚ್ಚಿನ ಪಾರದರ್ಶಕತೆ, ತಂತ್ರಜ್ಞಾನ ಅಳವಡಿಕೆ, ಸಾಂಸ್ಥಿಕ ಬಲವರ್ಧನೆ ಹಾಗೂ ತಳಮಟ್ಟದ ಸಬಲೀಕರಣದತ್ತ ಮುನ್ನಡೆಸಿರುವ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಈ ಸಮಾರಂಭವು ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ, ಸಚಿವಾಲಯವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕುಗಳು, ಡೈರಿ ಸಹಕಾರ ಸಂಘಗಳು, ನಗರ ಸಹಕಾರ ಸಂಘಗಳು, ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳು ಮತ್ತು ಬಹು-ರಾಜ್ಯ ಸಹಕಾರ ಸಂಘಗಳಿಗಾಗಿ ಹಲವಾರು ಪರಿವರ್ತನಾತ್ಮಕ ಉಪಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್; ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ; ಸಹಕಾರ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜರ್; ಮತ್ತು ಸಹಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಮುರಳಿಧರ್ ಮೋಹೋಲ್ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭುತಾನಿ; ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ; ಮತ್ತು ಪಶುಸಂಗೋಪನೆ ಮತ್ತು ಡೈರಿ ಇಲಾಖೆಯ ಕಾರ್ಯದರ್ಶಿ ಶ್ರೀ ನರೇಶ್ ಪಾಲ್ ಗಂಗ್ವಾರ್ ಸೇರಿದಂತೆ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು, ಸಹಕಾರಿ ಒಕ್ಕೂಟಗಳು, ಸಹಕಾರಿ ಬ್ಯಾಂಕುಗಳು, ಡೈರಿ ಸಹಕಾರ ಸಂಘಗಳು, ಭಾರತ್ ಟ್ಯಾಕ್ಸಿ, ಪಿಎಸಿಎಸ್ ಗಳ ಪ್ರತಿನಿಧಿಗಳು ಮತ್ತು ಸಹಕಾರ ವಲಯದ ಇತರ ಪಾಲುದಾರರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶ್ರೀ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ಹಲವಾರು ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ 135 ಗೋದಾಮುಗಳ ಹಸ್ತಾಂತರ, 85 ಗೋದಾಮುಗಳ ಉದ್ಘಾಟನೆ ಮತ್ತು 47 ಧಾನ್ಯ ಸಂಗ್ರಹಣಾ ಗೋದಾಮುಗಳಿಗೆ ಶಂಕುಸ್ಥಾಪನೆ; ಅಮುಲ್ ಮತ್ತು ಎನ್ ಸಿಸಿಎಫ್ ನಿಂದ ಸಹಕಾರ ವನದ ಭೂಮಿ ಪೂಜೆ, ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಬಿಬಿಎಸ್ ಎಸ್ಎಲ್ ನ ಅಂಗಾಂಶ ಕೃಷಿ  ಸೌಲಭ್ಯಗಳ ಭೂಮಿ ಪೂಜೆ, ಎನ್ ಸಿಡಿ 3.0 ಮತ್ತು ಜಿಯೋ-ಟ್ಯಾಗ್ ಮೊಬೈಲ್ ಆ್ಯಪ್ ಬಿಡುಗಡೆ; ಎನ್ ಡಿಡಿಬಿಯ ಹಾಲು ಪೂರೈಕೆ ಪರಿಶೀಲನಾ ಡ್ಯಾಶ್ ಬೋರ್ಡ್ ಪೋರ್ಟಲ್ ಬಿಡುಗಡೆ, ಕೋಆಪರೇಟಿವ್ ಇನ್ ಪುಟ್ಸ್ ಅಂಡ್ ಸರ್ವಿಸಸ್ ಡೆಲಿವರಿ ಮಲ್ಟಿ-ಸ್ಟೇಟ್ ಲಿಮಿಟೆಡ್ ಅಡಿಯಲ್ಲಿ ಡೈರಿ ಪ್ರಾಣಿಗಳ ಉತ್ಪಾದಕತೆಗೆ ಸಂಬಂಧಿಸಿದ ಉಪಕ್ರಮಗಳು, ಕೋಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಆರ್ಗನೈಸೇಶನ್ ಮಲ್ಟಿ-ಸ್ಟೇಟ್ ಲಿಮಿಟೆಡ್ ಉದ್ಘಾಟನೆ, ಗೋಮಯ್ ಕೋಆಪರೇಟಿವ್ ಸೊಸೈಟಿ ಮಲ್ಟಿ-ಸ್ಟೇಟ್ ಲಿಮಿಟೆಡ್ ಉದ್ಘಾಟನೆ; ಮತ್ತು ನಗರ ಸಹಕಾರಿ ಬ್ಯಾಂಕುಗಳಿಗಾಗಿ ಎನ್ ಯುಸಿಎಫ್ ಡಿಸಿಯ ಎರಡು ಪ್ರಮುಖ ಉಪಕ್ರಮಗಳಾದ — ಕೇಂದ್ರೀಕೃತ ಕೋರ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ 'ಸಹಕಾರ್ ಸಿಬಿಎಸ್' ಮತ್ತು ಸಂಭಾಷಣಾ ಎಐ-ಚಾಲಿತ  ಪ್ಲಾಟ್ಫಾರ್ಮ್ 'ಸಹಕಾರ್ ಸಹಯೋಗಿ'ಗೆ ಚಾಲನೆ ನೀಡುವಿಕೆ ಸೇರಿವೆ.

ಕಾರ್ಯಕ್ರಮದ ಮತ್ತೊಂದು ಪ್ರಮುಖ ಮುಖ್ಯಾಂಶವೆಂದರೆ 50,000 ಪಿಎಸಿಎಸ್ ಗಳನ್ನು ಇ-ಪಿಎಸಿಎಸ್ ಗಳಾಗಿ ಪರಿವರ್ತಿಸುವುದು, ಇದು ತಳಮಟ್ಟದ ಸಹಕಾರಿ ಸಂಸ್ಥೆಗಳ ಡಿಜಿಟಲ್ ಸಬಲೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಕಾರ್ಯಕ್ರಮದ ಅವಧಿಯಲ್ಲಿ, ಬೀಜ ವ್ಯವಸ್ಥೆಯನ್ನು ಬಲಪಡಿಸಲು ಬಿಬಿಎಸ್ ಎಸ್ ಎಲ್ ಮತ್ತು ಐಸಿಎಆರ್ ನಡುವೆ ತಿಳುವಳಿಕಾ ಒಪ್ಪಂದಕ್ಕೆ  ಸಹಿ ಹಾಕಲಾಗುವುದು. ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಡೈರಿ ಸಹಕಾರ ಸಂಘಗಳ ಮಾದರಿ ಬೈಲಾಗಳನ್ನು ಮತ್ತು ಕಳೆದ ಐದು ವರ್ಷಗಳಲ್ಲಿ ಸಹಕಾರ ಸಚಿವಾಲಯದ ಸಾಧನೆಗಳನ್ನು ಬಿಂಬಿಸುವ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಸಮಾರಂಭವು “ಸಹಕಾರದಿಂದ ಸಮೃದ್ಧಿ” ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತದ ದೃಷ್ಟಿಕೋನದೊಂದಿಗೆ ರೈತರು, ಮಹಿಳೆಯರು, ಯುವಕರು, ಸಣ್ಣ ಉತ್ಪಾದಕರು, ಡೈರಿ ರೈತರು, ನಗರ ಸಹಕಾರ ಸಂಘಗಳು ಮತ್ತು ಗ್ರಾಮೀಣ ಸಂಸ್ಥೆಗಳನ್ನು ಜೋಡಿಸುವ ಸಹಕಾರಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸಚಿವಾಲಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

 

*****


(रिलीज़ आईडी: 2281498) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Gujarati , Odia , Tamil , Malayalam