ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಸರ್ಕಾರದಿಂದ ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿಯಲ್ಲಿ ಸುಧಾರಣಾ ಸೂಚನೆ (ನೋಟಿಸ್) ಕಾರ್ಯವಿಧಾನ ಜಾರಿ


ಸುಲಭ ವ್ಯವಹಾರ ಮತ್ತು ನಂಬಿಕೆ ಆಧಾರಿತ ಆಡಳಿತ ಉತ್ತೇಜಿಸಲು ಪ್ರಮುಖ ಸುಧಾರಣೆ

ಮೊದಲ ಬಾರಿಗೆ ಕಾರ್ಯವಿಧಾನ ಮತ್ತು ನಿಯಂತ್ರಣ ತಪ್ಪುಗಳನ್ನು ಈಗ ದಂಡಕ್ಕಿಂತ ಮುಂಚೆಯೇ ಸರಿಪಡಿಸಲು ಅವಕಾಶ

ಗ್ರಾಹಕ ರಕ್ಷಣೆಯನ್ನು ಬಲಪಡಿಸುವ  ಸುಧಾರಣೆಯಿಂದ ಅನುಸರಣೆ ಹೊರೆ ತಗ್ಗಲಿದೆ

प्रविष्टि तिथि: 29 JUN 2026 10:39AM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆಯು ಕಾನೂನು ಮಾಪನಶಾಸ್ತ್ರ ಕಾಯ್ದೆ 2009 ರಡಿಯಲ್ಲಿ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ 2026 ರ ಮೂಲಕ ಸುಧಾರಣಾ ನೋಟಿಸ್ (ಸೂಚನೆ) ಕಾರ್ಯವಿಧಾನವನ್ನು ಪರಿಚಯಿಸಿದೆ. ಹೊಸ ಕಾರ್ಯವಿಧಾನದಡಿಯಲ್ಲಿ ನಿರ್ದಿಷ್ಟಪಡಿಸಿದ ಮೊದಲ ಬಾರಿಗೆ ಕಾರ್ಯವಿಧಾನ ಅಥವಾ ನಿಯಂತ್ರಣ ಅನುಸರಣೆ ಮಾಡದ ವ್ಯವಹಾರಗಳಿಗೆ ದಂಡದ ಪ್ರಕ್ರಿಯೆಗಳನ್ನು ಆರಂಭಿಸುವ ಮೊದಲು ಕೊರತೆಯನ್ನು ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ಗ್ರಾಹಕ ರಕ್ಷಣೆ ಬಲವರ್ಧನೆಗೊಳಿಸುವ ಸುಧಾರಣೆಯು ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುವ ಮೂಲಕ, ಅನಗತ್ಯ ಮೊಕದ್ದಮೆಗಳನ್ನು ತಗ್ಗಿಸುವ ಮೂಲಕ ಮತ್ತು ಹೆಚ್ಚು ನಂಬಿಕೆ ಆಧಾರಿತ ನಿಯಂತ್ರಣ ಚೌಕಟ್ಟನ್ನು ಬೆಂಬಲಿಸುವ ಮೂಲಕ ವ್ಯವಹಾರವನ್ನು ಸುಲಭಗೊಳಿಸುವ (ಇಒಡಿಬಿ) ವುದನ್ನು ಉತ್ತೇಜಿಸುತ್ತದೆ.

ಪ್ರಮುಖ ಮುಖ್ಯಾಂಶಗಳು

  • ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿಯಲ್ಲಿ ಸುಧಾರಣಾ ಸೂಚನೆ ಕಾರ್ಯವಿಧಾನವು, ದಂಡದ ಕ್ರಮವನ್ನು ಆರಂಭಿಸುವ ಮೊದಲು ನಿರ್ದಿಷ್ಟಪಡಿಸಿದ ಮೊದಲ ಬಾರಿಗೆ ಕಾರ್ಯವಿಧಾನ ಅಥವಾ ನಿಯಂತ್ರಕ ಅನುಸರಣೆ ಮಾಡದಿರುವಿಕೆಗಳನ್ನು ಸರಿಪಡಿಸಲು ನಿಯಂತ್ರಿತ ಸಂಸ್ಥೆಗಳಿಗೆ ಅನುಕೂಲಕರ ಅವಕಾಶವನ್ನು ಒದಗಿಸುತ್ತದೆ.
  • ವ್ಯಾಪಾರವನ್ನು ಸುಲಭಗೊಳಿಸಲು, ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸಲು ಮತ್ತು ಅನಗತ್ಯ ಮೊಕದ್ದಮೆಗಳನ್ನು ತಗ್ಗಿಸುವ ಉದ್ದೇಶವನ್ನು ಈ ಸುಧಾರಣೆಯ ಹೊಂದಿದೆ.
  • ಇದು ಉತ್ಪಾದಕರು, ಆಮದುದಾರರು, ಪ್ಯಾಕರ್‌ಗಳು, ವಿತರಕರು, ದುರಸ್ತಿ ಮಾಡುವವರು, ವ್ಯಾಪಾರಿಗಳು, ಎಂಎಸ್ ಎಂಇಗಳು ಮತ್ತು ಇತರ ನಿಯಂತ್ರಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
  • ವಂಚನೆ, ಪುನರಾವರ್ತಿತ ಉಲ್ಲಂಘನೆಗಳು, ನಕಲು ಮಾಡುವುದು (ಟ್ಯಾಂಪರಿಂಗ್) ಮತ್ತು ಗ್ರಾಹಕರ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಇತರ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯುತ್ತದೆ.
  • ಒಟ್ಟಾರೆ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಾಗ ನಂಬಿಕೆ ಆಧಾರಿತ ಆಡಳಿತ ಬಲವರ್ಧನೆಗೊಳಿಸುವುದು ಉದ್ದೇಶವಾಗಿದೆ.

ಸುಧಾರಣಾ ನೋಟಿಸ್ ಎಂದರೇನು?

ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿಯಲ್ಲಿ ಒಳಗೊಂಡಿರುವ ನಿರ್ದಿಷ್ಟಪಡಿಸಿದ ಮೊದಲ ಬಾರಿಗೆ ಕಾರ್ಯವಿಧಾನ ಅಥವಾ ನಿಯಂತ್ರನ ಅನುಸರಣೆ ಮಾಡದಿರುವಿಕೆಯನ್ನು ಒಬ್ಬ ವ್ಯಕ್ತಿಯು ಮಾಡಿದರೆ, ಕಾನೂನು ಮಾಪನಶಾಸ್ತ್ರ ಅಧಿಕಾರಿಯು ನ್ಯೂನತೆಯನ್ನು ಗುರುತಿಸುವ ಮತ್ತು ಅದನ್ನು ಸರಿಪಡಿಸಲು ಸಮಂಜಸವಾದ ಸಮಯ ಒದಗಿಸುವ ಸುಧಾರಣಾ ನೋಟಿಸ್ ಅನ್ನು ನೀಡಬಹುದು.

ನಿಯಂತ್ರಣ ಸಂಸ್ಥೆಯು ನಿಗದಿತ ಅವಧಿಯೊಳಗೆ ಪಾಲಿಸಿದರೆ, ಅನಗತ್ಯ ದಂಡದ ಪ್ರಕ್ರಿಯೆಗಳು ಮತ್ತು ಮೊಕದ್ದಮೆಗಳನ್ನು ತಪ್ಪಿಸಬಹುದು. ಆದರೂ ಸುಧಾರಣಾ ನೋಟಿಸ್ ಅನ್ನು ಪಾಲಿಸಲು ವಿಫಲವಾದರೆ ಅಥವಾ ಪದೇ ಪದೇ ಪಾಲಿಸದಿರುವುದು ಕಾನೂನು ಮಾಪನಶಾಸ್ತ್ರ ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ. ಈ ಕಾರ್ಯವಿಧಾನವು ಜಾರಿಗೊಳಿಸುವಿಕೆಯಲ್ಲಿ ರಾಜಿ ಮಾಡಿಕೊಳ್ಳದೆ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುವ ಮೂಲಕ ಹೆಚ್ಚು ಅನುಕೂಲಕರ ಮತ್ತು ನಂಬಿಕೆ ಆಧಾರಿತ ನಿಯಂತ್ರಣ ಚೌಕಟ್ಟಿನತ್ತ ಬದಲಾವಣೆಯನ್ನು ಪ್ರತಿನಿಧಿಸುತ್ತದೆ.

ಸುಧಾರಣೆ ಏಕೆ ಮುಖ್ಯವಾಗಿದೆ?

ಸುಧಾರಣಾ ನೋಟಿಸ್ ಕಾರ್ಯವಿಧಾನವು ಹೆಚ್ಚು ಊಹಿಸಬಹುದಾದ, ಪಾರದರ್ಶಕ ಮತ್ತು ವ್ಯವಹಾರ ಸ್ನೇಹಿ ನಿಯಂತ್ರಣ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ:

  • ಸ್ವಯಂಪ್ರೇರಿತ ಅನುಸರಣೆ ಮತ್ತು ಸಕಾಲಿಕ ಸ್ವಯಂ ತಿದ್ದುಪಡಿ ಪ್ರೋತ್ಸಾಹಿಸುವುದು.
  • ದಂಡ ವಿಧಿಸುವ ಮುನ್ನ ವ್ಯವಹಾರಗಳಿಗೆ ನಿಜವಾದ ಮೊದಲ ಬಾರಿಗೆ ಕಾರ್ಯವಿಧಾನದ ಲೋಪಗಳನ್ನು ಸರಿಪಡಿಸಲು ಅವಕಾಶವನ್ನು ಒದಗಿಸುವುದು.
  • ಅಜಾಗರೂಕ ಅನುಸರಣೆ-ಸಂಬಂಧಿತ ದೋಷಗಳಿಂದ ಉಂಟಾಗುವ ಅನಗತ್ಯ ಮೊಕದ್ದಮೆಗಳನ್ನು ತಗ್ಗಿಸುವುದು.
  • ಅನುಸರಣೆ ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ನಿಯಂತ್ರಣ ಖಚಿತತೆಯನ್ನು ಸುಧಾರಿಸುವುದು.
  • ಗ್ರಾಹಕರ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ಉಲ್ಲಂಘನೆಗಳ ಮೇಲೆ ಜಾರಿ ಅಧಿಕಾರಿಗಳು ಗಮನಹರಿಸಲು ಅವಕಾಶ ನೀಡುವುದು.

ಸುಧಾರಣಾ ನೋಟಿಸ್ ಕಾರ್ಯವಿಧಾನದಡಿಯಲ್ಲಿ ಬರುವ ನಿಬಂಧನೆಗಳು

ಸುಧಾರಣಾ ನೋಟಿಸ್ ಕಾರ್ಯವಿಧಾನವು ಇದಕ್ಕೆ ಸಂಬಂಧಿಸಿದ ನಿರ್ದಿಷ್ಟಪಡಿಸಿದ ಮೊದಲ ಬಾರಿಗೆ ಕಾರ್ಯವಿಧಾನ ಮತ್ತು ನಿಯಂತ್ರಣ ಅನುಸರಣೆಗಳಿಗೆ ಅನ್ವಯಿಸುತ್ತದೆ:

  • ನೋಂದಣಿ ಅವಶ್ಯಕತೆಗಳು
  • ದಾಖಲೆ ಮತ್ತು ದಾಖಲೆ ನಿರ್ವಹಣೆ
  • ಮಾದರಿ ಅನುಮೋದನೆ
  • ತೂಕ ಮತ್ತು ಅಳತೆಗಳ ತಯಾರಿಕೆ, ಮಾರಾಟ ಮತ್ತು ದುರಸ್ತಿ
  • ತೂಕ ಮತ್ತು ಅಳತೆಗಳ ಆಮದು
  • ವಹಿವಾಟುಗಳು ಮತ್ತು ಪ್ಯಾಕೇಜ್ ಮಾಡಿದ ಸರಕುಗಳು
  • ಶಾಸನಬದ್ಧ ಮಾಹಿತಿ ಮತ್ತು ರಿಟರ್ನ್‌ಗಳನ್ನು ಒದಗಿಸುವುದು

ಈ ಕಾರ್ಯವಿಧಾನವು ಕಾನೂನು ಮಾಪನಶಾಸ್ತ್ರ ಕಾಯ್ದೆಯ ಈ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿದೆ:

  • ಸೆಕ್ಷನ್ 25 – ಪ್ರಮಾಣಿತವಲ್ಲದ ತೂಕ ಅಥವಾ ಅಳತೆಗಳ ಬಳಕೆ
  • ಸೆಕ್ಷನ್ 27 – ಪ್ರಮಾಣಿತವಲ್ಲದ ತೂಕ ಅಥವಾ ಅಳತೆ ಸಾಧನಗಳ ತಯಾರಿಕೆ ಅಥವಾ ಮಾರಾಟ
  • ಸೆಕ್ಷನ್ 28 – ನಿಗದಿತ ಮಾನದಂಡಗಳ ಉಲ್ಲಂಘಿಸಿ ಮಾರಾಟ ವಹಿವಾಟುಗಳು
  • ಸೆಕ್ಷನ್ 29 – ಪ್ರಮಾಣಿತವಲ್ಲದ ಘಟಕಗಳನ್ನು ಉಲ್ಲೇಖಿಸುವುದು ಅಥವಾ ಪ್ರಕಟಿಸುವುದು
  • ಸೆಕ್ಷನ್ 31 – ದಾಖಲೆಗಳನ್ನು ಮಾಡಿಸಿಕೊಳ್ಳದಿರುವುದು
  • ಸೆಕ್ಷನ್ 32 – ಮಾದರಿ ಅನುಮೋದನೆಯನ್ನು ಪಡೆಯುವಲ್ಲಿ ವಿಫಲ
  • ಸೆಕ್ಷನ್ 34 – ಪ್ರಮಾಣಿತವಲ್ಲದ ತೂಕ ಅಥವಾ ಅಳತೆಗಳನ್ನು ಬಳಸಿಕೊಂಡು ಮಾರಾಟ ಅಥವಾ ವಿತರಣೆ
  • ಸೆಕ್ಷನ್ 35 – ಪ್ರಮಾಣಿತವಲ್ಲದ ತೂಕ, ಅಳತೆ ಅಥವಾ ಸಂಖ್ಯೆಯ ಮೂಲಕ ಸೇವೆಗಳನ್ನು ಸಲ್ಲಿಸುವುದು
  • ಸೆಕ್ಷನ್ 36(1) – ಪ್ರಮಾಣಿತವಲ್ಲದ ಪ್ಯಾಕ್ ಮಾಡಲಾದ ಸರಕುಗಳ ಮಾರಾಟ
  • ಸೆಕ್ಷನ್ 38 – ನೋಂದಣಿ ಇಲ್ಲದೆ ತೂಕ ಮತ್ತು ಅಳತೆಗಳ ಆಮದು
  • ಸೆಕ್ಷನ್ 39 – ಪ್ರಮಾಣಿತವಲ್ಲದ ತೂಕ ಮತ್ತು ಅಳತೆಗಳ ಆಮದು
  • ಸೆಕ್ಷನ್ 41(1) ಮತ್ತು 41(2) – ಸುಳ್ಳು ಮಾಹಿತಿ ಅಥವಾ ಸುಳ್ಳು ರಿಟರ್ನ್‌ಗಳನ್ನು ಒದಗಿಸುವುದು
  • ಸೆಕ್ಷನ್ 45 – ನೋಂದಣಿ ಇಲ್ಲದೆ ತೂಕ ಮತ್ತು ಅಳತೆಗಳ ತಯಾರಿಕೆ
  • ಸೆಕ್ಷನ್ 46 – ತೂಕ ಮತ್ತು ಅಳತೆಗಳಲ್ಲಿ ದುರಸ್ತಿ, ಮಾರಾಟ ಅಥವಾ ವ್ಯವಹಾರ ನೋಂದಣಿ ಇಲ್ಲದಿರುವುದು
  • ಸೆಕ್ಷನ್ 47 – ನೋಂದಣಿ ಪ್ರಮಾಣಪತ್ರವನ್ನು ತಿರುಚುವುದು

ಸುಧಾರಣಾ ನೋಟಿಸ್ ಕಾರ್ಯವಿಧಾನವು ಗ್ರಾಹಕರ ರಕ್ಷಣೆಯನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಕಾನೂನು ಮಾಪನಶಾಸ್ತ್ರ ಕಾಯಿದೆ ಜಾರಿಗೊಳಿಸುವಿಕೆಯನ್ನು ದುರ್ಬಲಗೊಳಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಕಾರ್ಯವಿಧಾನವು ಮೊದಲ ಬಾರಿಗೆ ನಿರ್ದಿಷ್ಟಪಡಿಸಿದ ಕಾರ್ಯವಿಧಾನ ಮತ್ತು ನಿಯಂತ್ರಣ ಅನುಸರಣೆಗಳಿಗೆ ಮಾತ್ರ ಅನ್ವಯಿಸುತ್ತದೆ.

ಸುಧಾರಣಾ ನೋಟಿಸ್ ಕಾರ್ಯವಿಧಾನದ ಜಾರಿಯು ನಂಬಿಕೆ ಆಧಾರಿತ ನಿಯಂತ್ರಣವನ್ನು ಉತ್ತೇಜಿಸುವ, ಅನಗತ್ಯ ಅನುಸರಣೆ ಹೊರೆ ತಗ್ಗಿಸುವ, ಸ್ವಯಂಪ್ರೇರಿತ ಅನುಸರಣೆ ಪ್ರೋತ್ಸಾಹಿಸುವ ಮತ್ತು ಪಾರದರ್ಶಕ, ಊಹಿಸಬಹುದಾದ ಮತ್ತು ವ್ಯವಹಾರ ಸ್ನೇಹಿ ನಿಯಂತ್ರಣ ಪೂರಕ ವ್ಯವಸ್ಥೆ ರೂಪಿಸುವ ಮೂಲಕ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ಎಂಬ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಕಾನೂನು ಮಾಪನಶಾಸ್ತ್ರ ವ್ಯವಸ್ಥೆಯ ಸಮಗ್ರತೆ ಕಾಯ್ದುಕೊಂಡು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಾಗ ಅನುಸರಣೆ ಸಾಧಿಸುವಲ್ಲಿ ಪ್ರಾಮಾಣಿಕ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಸುಧಾರಣೆಯು ಸಮತೋಲಿತ ವಿಧಾನ ಹೊಂದಲಿದೆ.

 

*****


(रिलीज़ आईडी: 2278889) आगंतुक पटल : 8
इस विज्ञप्ति को इन भाषाओं में पढ़ें: Urdu , English , हिन्दी , Bengali , Gujarati , Tamil