ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಬಿಷ್ಕೇಕ್ ನಲ್ಲಿ ನಡೆದ ಎಸ್ ಸಿಒ  ಮಹಿಳಾ ವೇದಿಕೆ 2026 ರಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಭಾರತವು ಪುನರುಚ್ಚರಿಸಿತು

प्रविष्टि तिथि: 26 JUN 2026 11:02AM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಇಂದು ಕಿರ್ಗಿಜ್ ಗಣರಾಜ್ಯದ ಬಿಷ್ಕೇಕ್ ನಲ್ಲಿ ನಡೆದ ಎಸ್ ಸಿ ಒ  ಮಹಿಳಾ ವೇದಿಕೆ 2026 ಅನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಮತ್ತು ಅದರ ಪರಸ್ಪರ ಗೌರವ, ಸಮಾನತೆ ಮತ್ತು ಒಮ್ಮತದ ತತ್ವಗಳಿಗೆ ಭಾರತದ ಬದ್ಧತೆ, ಜೊತೆಗೆ, ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಸಂಘಟನೆಯ ಜಂಟಿ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಭಾರತ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
 
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಎನ್ನುವ ವಿಷಯದ ಮೇಲಿನ ಸಮಿತಿ ಚರ್ಚೆಯಲ್ಲಿ ಭಾರತದ ಆರಂಭಿಕ ಹೇಳಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದ ಸಚಿವರು, ಮಹಿಳೆಯರು ಕೇವಲ ಬೆಳವಣಿಗೆಯ ಫಲಾನುಭವಿಗಳಲ್ಲ, ಬದಲಿಗೆ ಅವರು ಅದರ ಅತ್ಯಂತ ಶಕ್ತಿಶಾಲಿ ಚಾಲಕ ಶಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಒತ್ತಿಹೇಳಿದರು. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯ ಭಾರತದ ದೃಷ್ಟಿಕೋನ ಮತ್ತು 2047 ರ ವೇಳೆಗೆ ವಿಕಸಿತ ಭಾರತದ ಗುರಿಯ ಸಾರವಾಗಿದೆ ಎಂದು ಅವರು ಹೇಳಿದರು.
 
ಸುಮಾರು 10  ಕೋಟಿ ಮಹಿಳೆಯರು  90 ಲಕ್ಷಕ್ಕಿಂತಲೂ  ಹೆಚ್ಚು ಸ್ವಸಹಾಯ ಗುಂಪುಗಳಲ್ಲಿ ಸಂಘಟಿತರಾಗಿದ್ದು, ಅವರಲ್ಲಿ 3 ಕೋಟಿಗಿಂತಲೂ ಹೆಚ್ಚು ಮಹಿಳೆಯರು 'ಲಖ್ ಪತಿ ದೀದಿ'ಯರಾಗಿದ್ದಾರೆ   ಎಂದು ಸಚಿವರು ಹೇಳಿದರು. ಮಹಿಳೆಯರ ಸುರಕ್ಷತೆ, ಆರೈಕೆ ಮತ್ತು ಆರ್ಥಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಮುಖ ಸ್ತಂಭಗಳಾಗಿ 'ಮಿಷನ್ ಶಕ್ತಿ' ಮತ್ತು 'ಮಿಷನ್ ಪೋಷಣ್ 2.0' ಅನ್ನು ಅವರು ಉಲ್ಲೇಖಿಸಿದರು.

ಇಡೀ ಪ್ರದೇಶದಾದ್ಯಂತ ಮಹಿಳೆಯರ ಆರ್ಥಿಕ ನಾಯಕತ್ವ ಮತ್ತು ಯೋಗಕ್ಷೇಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ಎಸ್ ಸಿಒ ಪಾಲುದಾರರೊಂದಿಗೆ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಭಾರತ ತನ್ನ ಸಿದ್ಧತೆಯನ್ನು ಪುನರುಚ್ಚರಿಸಿತು.

 

******
 


 


(रिलीज़ आईडी: 2278153) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Tamil , Malayalam