ಪ್ರಧಾನ ಮಂತ್ರಿಯವರ ಕಛೇರಿ
ಕಾನೂನು ವ್ಯವಸ್ಥೆಯನ್ನು ಬಲಪಡಿಸುವ ಮತ್ತು ನ್ಯಾಯದ ಲಭ್ಯತೆ ಸುಧಾರಿಸುವ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
22 JUN 2026 2:20PM by PIB Bengaluru
ಕೇಂದ್ರ ಕಾನುನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘ್ ವಾಲ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಕಾನೂನು ವ್ಯವಸ್ಥೆಯ ಪರಿಸರವನ್ನು ಬಲಪಡಿಸಲು, ನ್ಯಾಯದ ಸುಲಭ ಲಭ್ಯತೆ ಉತ್ತೇಜಿಸಲು ಮತ್ತು ನಾಗರಿಕರಿಗೆ ಸಾರ್ವಜನಿಕ ಸೇವೆಗಳು ಹೆಚ್ಚು ಲಭ್ಯವಾಗುವಂತೆ ಮಾಡಲು ಸರ್ಕಾರದ ಪ್ರಯತ್ನಗಳನ್ನು ಲೇಖನವು ವಿವರಿಸುತ್ತದೆ. ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ ಎರಡನ್ನೂ ಮೇಲ್ದರ್ಜೆಗೇರಿಸಿರುವುದರಿಂದ ವಕೀಲರು ಮತ್ತು ನ್ಯಾಯಾಧೀಶರು ಹೆಚ್ಚು ಸುಲಲಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂಬುದಾಗಿ ಲೇಖನ ವಿವರಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಈ ಲೇಖನದಲ್ಲಿ ಕೇಂದ್ರ ಸಚಿವರಾದ ಶ್ರೀ @arjunrammeghwal ಅವರು ಕಾನೂನು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ಸುಲಲಿತ ನ್ಯಾಯ ಉತ್ತೇಜಿಸಲು ಮತ್ತು ನಾಗರಿಕರಿಗೆ ಸಾರ್ವಜನಿಕ ಸೇವೆಗಳು ಹೆಚ್ಚು ಲಭ್ಯವಾಗುವಂತೆ ಮಾಡಲು ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ್ದಾರೆ.
ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ ಎರಡನ್ನೂ ಮೇಲ್ದರ್ಜೆಗೇರಿಸಿರುವುದರಿಂದ ವಕೀಲರು ಮತ್ತು ನ್ಯಾಯಾಧೀಶರ ಕಾರ್ಯನಿರ್ವಹಣೆಯ ಸುಲಭತೆ ವರ್ಧಿಸಿದೆ ಎಂದು ವಿವರಿಸಿದ್ದಾರೆ.”
*****
(रिलीज़ आईडी: 2276947)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam