ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

‘ನಿರ್ಭಯ್ ಚೇತನಾ’ ಅಭಿಯಾನಕ್ಕೆ ಚಾಲನೆ: ತಳಮಟ್ಟದಲ್ಲಿ ಮಹಿಳಾ ಸುರಕ್ಷತೆ ಮತ್ತು ಲಿಂಗ ಸಮಾನತೆ ವಿಷಯಗಳ ಕುರಿತು 17.5 ಲಕ್ಷಕ್ಕೂ ಹೆಚ್ಚು ಚುನಾಯಿತ ಪುರುಷ ಜನಪ್ರತಿನಿಧಿಗಳಿಗೆ ಜಾಗೃತಿ


ನಿರ್ಭಯ ನಿಧಿಯ ಅಡಿಯಲ್ಲಿ ಈ ರೀತಿಯ ಮೊದಲ ರಾಷ್ಟ್ರೀಯ ಉಪಕ್ರಮ ಇದಾಗಿದೆ; 28,500 ಮಾಸ್ಟರ್ ತರಬೇತುದಾರರ ವರ್ಗದವರನ್ನು ಈ ಅಭಿಯಾನ ಮೂಲಕ ತರಬೇತಿ ನೀಡಿ ಅಭಿವೃದ್ಧಿ ಪಡಿಸಲಾಗುವುದು

प्रविष्टि तिथि: 20 JUN 2026 12:21PM by PIB Bengaluru

ಪಂಚಾಯಿತ್ ರಾಜ್ ಸಚಿವಾಲಯವು ನಿರ್ಭಯ ನಿಧಿ ಯೋಜನೆಯಡಿಯಲ್ಲಿ 2026 ರ ಜೂನ್ 17 ರಿಂದ 19 ರವರೆಗೆ ನವದೆಹಲಿಯಲ್ಲಿ ನಿರ್ಭಯ ಚೇತನದ ಕುರಿತು ಮೂರು ದಿನಗಳ ತರಬೇತಿ (ಟಿಒಟಿ) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿಶ್ವದ ಎಲ್ಲೆಡೆಯೂ ಈ ರೀತಿಯ ಅತಿದೊಡ್ಡ ಅಭಿಯಾನವೆಂದು ಗುರುತಿಸಲ್ಪಟ್ಟ “ನಿರ್ಭಯ ಚೇತನ” ಅಭಿಯಾನವು, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪುರುಷರನ್ನು ಅರಿವು ಮೂಡಿಸುವ ಮೂಲಕ ಸಂವೇದನಾಶೀಲಗೊಳಿಸುವ ಒಂದು ಹೆಗ್ಗುರುತು ರಾಷ್ಟ್ರೀಯ ಉಪಕ್ರಮವಾಗಿದೆ. ಇದು ತಳಮಟ್ಟದಲ್ಲಿ ಲಿಂಗ-ಪ್ರತಿಕ್ರಿಯಾತ್ಮಕ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಟ್ರಾನ್ಸ್ಫಾರ್ಮ್ ರೂರಲ್ ಇಂಡಿಯಾ ಅಭಿವೃದ್ಧಿಪಡಿಸಿದ ನಿರ್ಭಯ ಚೇತನ ತರಬೇತಿ ಮಾಡ್ಯೂಲ್ ಅನ್ನು ಕೂಡಾ ಪ್ರಾರಂಭಿಸಲಾಯಿತು. ಈ ಉಪಕ್ರಮವು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಲಿಂಗ ಸಮಾನತೆ, ಮಹಿಳಾ ಸುರಕ್ಷತೆ, ಹಕ್ಕುಗಳು ಮತ್ತು ನಾಯಕತ್ವದ ಕುರಿತು ಪುರುಷ ಚುನಾಯಿತ ಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವ ಮಾಸ್ಟರ್ ತರಬೇತುದಾರರ ಗುಂಪನ್ನು ರಚಿಸಲು ಪ್ರಯತ್ನಿಸುತ್ತದೆ. ಪೈಲಟ್ ಬ್ಯಾಚ್ ಆರು ರಾಜ್ಯಗಳಿಂದ: ಅಸ್ಸಾಂ, ಛತ್ತೀಸ್ಗಢ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರಾಖಂಡ್ ಗಳಿಂದ ಸುಮಾರು 40 ಮಾಸ್ಟರ್ ತರಬೇತುದಾರರನ್ನು ಒಳಗೊಂಡಿತ್ತು ಮತ್ತು ಇತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ಕ್ಯಾಸ್ಕೇಡಿಂಗ್ ತರಬೇತಿ ಮಾದರಿಗೆ ಅಡಿಪಾಯವಾಗಿ ಈ ತರಬೇತಿ ಕಾರ್ಯನಿರ್ವಹಿಸಲಿದೆ.

ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪಂಚಾಯತಿ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರು, ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳದೆ ವಿಕಸಿತ ಭಾರತದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಾಮಾಜಿಕ ಮತ್ತು ಪ್ರಜಾಪ್ರಭುತ್ವ ಪರಿವರ್ತನೆಯ ಸಂಸ್ಥೆಗಳಾಗಿ ಪಂಚಾಯತ್ಗಳ ಪ್ರಮುಖ ಪಾತ್ರವನ್ನು ಅವರು ಎತ್ತಿ ತೋರಿಸಿದರು, ಇದು ತಳಮಟ್ಟದಲ್ಲಿ ವರ್ತನೆಗಳು ಮತ್ತು ನಡವಳಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. “ನಿರ್ಭಯ್ ಚೇತನ” ಅಭಿಯಾನದ ಉದ್ದೇಶವನ್ನು ತಿಳಿಹೇಳಿದ ಅವರು, ಮಹಿಳೆಯರ ಘನತೆ, ಸುರಕ್ಷತೆ ಮತ್ತು ಅವಕಾಶಗಳನ್ನು ಅಭಿವೃದ್ಧಿಯ ಅಗತ್ಯ ಸ್ತಂಭಗಳಾಗಿ ಇರಿಸುವ ಮೂಲಕ ಲಿಂಗ-ಸೂಕ್ಷ್ಮ ನಾಯಕತ್ವವನ್ನು ಬೆಳೆಸಲು ಈ ಉಪಕ್ರಮವು ಪ್ರಯತ್ನಿಸುತ್ತದೆ ಎಂದು ಗಮನಿಸಿದರು. ಭಾಗವಹಿಸುವವರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪಂಚಾಯತಿ ರಾಜ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹಾನಿ ಅವರು, ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳುವುದು ಸಾಮೂಹಿಕ ಸಾಮಾಜಿಕ ಜವಾಬ್ದಾರಿ ಎಂದು ಹೇಳಿದರು. ಲಿಂಗ-ಸ್ಪಂದನಾಶೀಲ ಆಡಳಿತವನ್ನು ಬೆಳೆಸುವಲ್ಲಿ ಮತ್ತು ಮಹಿಳೆಯರು ಮತ್ತು ಹುಡುಗಿಯರಿಗೆ ಸುರಕ್ಷಿತ, ಹೆಚ್ಚು ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸುವಲ್ಲಿ ಪಂಚಾಯತ್ ಗಳ ನಿರ್ಣಾಯಕ ಪಾತ್ರವನ್ನು ಅವರು ಉಲ್ಲೇಖಿಸಿದರು. ನಿರ್ಭಯ್ ಚೇತನ ಅಭಿಯಾನವು ಪುರುಷ ಚುನಾಯಿತ ಪ್ರತಿನಿಧಿಗಳಲ್ಲಿ ಜಾಗೃತಿ, ಸೂಕ್ಷ್ಮತೆ ಮತ್ತು ಹೊಣೆಗಾರಿಕೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ, ಪುರುಷ ಚುನಾಯಿತ ಪ್ರತಿನಿಧಿಗಳ ಸಮುದಾಯಗಳಲ್ಲಿ ಮಹಿಳೆಯರ ಸುರಕ್ಷತೆ, ಘನತೆ, ನಾಯಕತ್ವ ಮತ್ತು ಸಬಲೀಕರಣವನ್ನು ಸಾಧಿಸಲು ಅವರನ್ನು ಸಬಲೀಕರಣಗೊಳಿಸುತ್ತದೆ ಎಂದು ಅವರು ತಿಳಿಸಿದರು.

ಲಿಂಗ ಸಮಸ್ಯೆಗಳ ತಿಳುವಳಿಕೆಯನ್ನು ಆಳಗೊಳಿಸಲು, ಸಾಮಾಜಿಕ ಸ್ಟೀರಿಯೊಟೈಪ್ಗಳನ್ನು ಸವಾಲು ಮಾಡಲು ಮತ್ತು ಲಿಂಗ-ಸ್ಪಂದನಾಶೀಲ ನಾಯಕತ್ವವನ್ನು ಉತ್ತೇಜಿಸಲು ತಜ್ಞರ ಅಧಿವೇಶನಗಳು, ಗುಂಪು ಚರ್ಚೆಗಳು, ಪ್ರಕರಣ ಅಧ್ಯಯನಗಳು ಮತ್ತು ಅನುಭವಿ ಕಲಿಕೆಯ ಮೂಲಕ ಭಾಗವಹಿಸುವ ವಿಧಾನವನ್ನು ಈ ಕಾರ್ಯಕ್ರಮವು ಅಳವಡಿಸಿಕೊಂಡಿದೆ. ಪ್ರಮುಖ ವಿಷಯಗಳಲ್ಲಿ ಸಕಾರಾತ್ಮಕ ಪುರುಷತ್ವ, ಸಮುದಾಯ ಭಾಗವಹಿಸುವಿಕೆ ಮತ್ತು ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸೇರ್ಪಡೆಯನ್ನು ಮುನ್ನಡೆಸುವಲ್ಲಿ ಪಂಚಾಯತ್ ಗಳ ಪಾತ್ರ ಸೇರಿವೆ.

ನಿರ್ಭಯ್ ಚೇತನದ ಬಗ್ಗೆ

ನಿರ್ಭಯ್ ಚೇತನಅಭಿಯಾನವು ಮಾರ್ಚ್ 11, 2026 ರಂದು ಪ್ರಾರಂಭಿಸಲಾದ ನಿರ್ಭಯ್ ರಹೋ ಉಪಕ್ರಮದ ಅಡಿಯಲ್ಲಿ ಪ್ರಮುಖ ಅಭಿಯಾನವಾಗಿದೆ, ಇದು ಮೂರು ಪೂರಕ ಅಂಶಗಳನ್ನು ಒಳಗೊಂಡಿದೆ. ನಿರ್ಭಯ್ ನೇತ್ರಿ ಚುನಾಯಿತ ಮಹಿಳಾ ಪ್ರತಿನಿಧಿಗಳಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಕಾನೂನು ಅರಿವು ಮೂಡಿಸುವತ್ತ ಗಮನಹರಿಸುತ್ತದೆ; ನಿರ್ಭಯ್ ಚೇತನ ಚುನಾಯಿತ ಪುರುಷ ಪ್ರತಿನಿಧಿಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ಸಂವೇದನಾಶೀಲತೆಯನ್ನು ಮೂಡಿಸಲು ಪ್ರಯತ್ನಿಸುತ್ತದೆ; ಮತ್ತು ಪಂಚಾಯತ್ಗಳಲ್ಲಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಸುರಕ್ಷತಾ ಮೂಲಸೌಕರ್ಯವನ್ನು ಬಲಪಡಿಸಲು ಆಯಕಟ್ಟಿನ ಗ್ರಾಮೀಣ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಭಯ್ ದೃಷ್ಟಿ ಉದ್ದೇಶಿಸಿದೆ. ನಿರ್ಭಯ್ ಚೇತನದ ಅಡಿಯಲ್ಲಿ, ದೇಶಾದ್ಯಂತ 17.5 ಲಕ್ಷಕ್ಕೂ ಹೆಚ್ಚು ಪುರುಷ ಚುನಾಯಿತ ಪ್ರತಿನಿಧಿಗಳನ್ನು ತಲುಪಲು ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ 28,500 ಮಾಸ್ಟರ್ ತರಬೇತುದಾರರ ಕೇಡರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 

*****


(रिलीज़ आईडी: 2275678) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Malayalam