ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದಲ್ಲಿ ಸಾನ್-ಗೋಬೈನ್‌ನ ಹೆಜ್ಜೆಗುರುತನ್ನು ವಿಸ್ತರಿಸುವ ಬಗ್ಗೆ ಸಿ.ಇ.ಒ ಬೆನ್ವಾ ಬ್ಯಾಸಿನ್ ಅವರೊಂದಿಗೆ ಚರ್ಚೆ ನಡೆಸಿದ ಪ್ರಧಾನಮಂತ್ರಿ

प्रविष्टि तिथि: 18 JUN 2026 6:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾನ್-ಗೋಬೈನ್‌ನ (Saint-Gobain) ಶ್ರೀ ಬೆನ್ವಾ ಬ್ಯಾಸಿನ್ ಅವರೊಂದಿಗೆ ಸಂವಾದ ನಡೆಸಿರುವುದು ಸಂತಸದಾಯಕ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತವು ಮೂಲಸೌಕರ್ಯ ಮತ್ತು ನಗರಾಭಿವೃದ್ಧಿಯಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಭಾರತದಲ್ಲಿ ಸಾನ್-ಗೋಬೈನ್‌ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸುವ ಹಾಗೂ ನಾವೀನ್ಯತೆ, ವರ್ತುಲ ಆರ್ಥಿಕತೆ (Circular economy) ಮತ್ತು ಇತರ ಕ್ಷೇತ್ರಗಳಲ್ಲಿ ಪಾಲುದಾರರಾಗುವ ಮಾರ್ಗಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಭಾರತದ ವೈವಿಧ್ಯತೆ ಮತ್ತು ಪ್ರಮಾಣವು ಗ್ಲೋಬಲ್ ಸೌತ್‌ಗೆ (Global South) ನಿರ್ಮಾಣ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸೂಕ್ತ ವೇದಿಕೆಯನ್ನು ಒದಗಿಸಬಲ್ಲದು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ (X) ನಲ್ಲಿ ಹೀಗೆ ಬರೆದಿದ್ದಾರೆ:

"ಸಾನ್-ಗೋಬೈನ್‌ನ ಶ್ರೀ ಬೆನ್ವಾ ಬ್ಯಾಸಿನ್ ಅವರೊಂದಿಗೆ ಸಂವಹನ ನಡೆಸಿ ಸಂತೋಷವಾಯಿತು. ಭಾರತವು ಮೂಲಸೌಕರ್ಯ ಮತ್ತು ನಗರಾಭಿವೃದ್ಧಿಯಲ್ಲಿ ಅಭೂತಪೂರ್ವ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ. ಭಾರತದಲ್ಲಿ ಸಾನ್-ಗೋಬೈನ್‌ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸುವ ಹಾಗೂ ನಾವೀನ್ಯತೆ, ವರ್ತುಲ ಆರ್ಥಿಕತೆ ಇತ್ಯಾದಿಗಳಲ್ಲಿ ಪಾಲುದಾರಿಕೆಯ ಮಾರ್ಗಗಳನ್ನು ನಾವು ಚರ್ಚಿಸಿದೆವು. ಭಾರತದ ವೈವಿಧ್ಯತೆ ಮತ್ತು ಪ್ರಮಾಣವು ಗ್ಲೋಬಲ್ ಸೌತ್‌ಗೆ ನಿರ್ಮಾಣ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸೂಕ್ತ ವೇದಿಕೆ ನೀಡಬಲ್ಲದಾಗಿದೆ.

@saintgobain"

******


(रिलीज़ आईडी: 2275005) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Tamil , Telugu , Malayalam