ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಮ ವರ್ಗದವರಿಗೆ ಜೀವನ ಸುಗಮಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ

प्रविष्टि तिथि: 15 JUN 2026 1:16PM by PIB Bengaluru

ಮಧ್ಯಮ ವರ್ಗದವರಿಗೆ ಜೀವನ ಸುಗಮಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ ಮತ್ತು ಮಧ್ಯಮ ವರ್ಗದ ಆಕಾಂಕ್ಷೆಗಳನ್ನು ಈಡೇರಿಸುವತ್ತ ಕೆಲಸ ಮಾಡುವುದು ಸರ್ಕಾರದ ಸೌಭಾಗ್ಯ ಎಂದು ಅವರು ಹೇಳಿದ್ದಾರೆ. ಮಧ್ಯಮ ವರ್ಗವು ರಾಷ್ಟ್ರ ನಿರ್ಮಾಣಕ್ಕೆ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದರು.

ಕಳೆದ ಒಂದು ದಶಕದಲ್ಲಿ, ಆಡಳಿತವು ಸಾಮಾನ್ಯ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಅವಕಾಶಗಳಿಗೆ ಸುಲಭ ಪ್ರವೇಶ, ಉತ್ತಮ ಮೂಲಸೌಕರ್ಯ, ಸುಧಾರಿತ ಸಾರ್ವಜನಿಕ ಸೇವೆಗಳು, ಕೈಗೆಟುಕುವ ಆರೋಗ್ಯ ರಕ್ಷಣೆ, ಗುಣಮಟ್ಟದ ಶಿಕ್ಷಣ, ಸ್ವಚ್ಛ ನಗರಗಳು ಮತ್ತು ದೈನಂದಿನ ಜೀವನದಲ್ಲಿ ಕಡಿಮೆ ಹೊರೆಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸರ್ಕಾರದ ಉಪಕ್ರಮಗಳು ಹೊಂದಿವೆ ಎಂದು ಶ್ರೀ ಮೋದಿ ಅವರು ಹೇಳಿದರು.

ಎಕ್ಸ್ ತಾಣದ ಸರಣಿ ಸಂದೇಶದಲ್ಲಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;

“ಮಧ್ಯಮ ವರ್ಗಕ್ಕಾಗಿ ಕೇಂದ್ರ ಸರ್ಕಾರ...

ನಮ್ಮ ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಎನ್.ಡಿ.ಎ. ಸರ್ಕಾರದ ಸೌಭಾಗ್ಯವಾಗಿದೆ.  ರಾಷ್ಟ್ರ ನಿರ್ಮಾಣಕ್ಕೆ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಮಧ್ಯಮ ವರ್ಗದವರು  ಕೊಡುಗೆ ನೀಡಿದ್ದಾರೆ.

ಕಳೆದ ದಶಕದಲ್ಲಿ, ಆಡಳಿತವು ಸಾಮಾನ್ಯ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸಿದೆ. ಅವಕಾಶಗಳಿಗೆ ಸುಲಭ ಪ್ರವೇಶ, ಉತ್ತಮ ಮೂಲಸೌಕರ್ಯ, ಸುಧಾರಿತ ಸಾರ್ವಜನಿಕ ಸೇವೆಗಳು, ಕೈಗೆಟುಕುವ ಆರೋಗ್ಯ ರಕ್ಷಣೆ, ಗುಣಮಟ್ಟದ ಶಿಕ್ಷಣ, ಸ್ವಚ್ಛ ನಗರಗಳು ಮತ್ತು ದೈನಂದಿನ ಜೀವನದಲ್ಲಿ ಕಡಿಮೆ ಹೊರೆಭಾಧ್ಯತೆಗಳ ಬಗ್ಗೆ ನಮ್ಮ ಸರ್ಕಾರದ ಪ್ರಯತ್ನಗಳನ್ನು ಮಾಡಿದೆ.

#12YearsOfSakshamMiddleClass”

“ಮಧ್ಯಮ ವರ್ಗಕ್ಕೆ ‘ಜೀವನ ಸುಲಭ’ವ್ಯವಸ್ಥೆಗಳನ್ನು ಹೇಗೆ ಹೆಚ್ಚಿಸಲಾಗುತ್ತಿದೆ ಎಂಬುದರ ಕುರಿತು ಒಂದು ಹಿನ್ನೋಟ.

#12YearsOfSakshamMiddleClass”

 

*****


(रिलीज़ आईडी: 2272994) आगंतुक पटल : 11
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Tamil , Telugu , Malayalam