ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಮತ್ತು ಭಾರತದ ಪರಿವರ್ತನಾ ಪ್ರಯಾಣದಲ್ಲಿ ಆಳವಾದ ನಂಬಿಕೆಯನ್ನು ನಿರ್ಮಿಸುವ ಬದಲಾವಣೆಯನ್ನು ಉಲ್ಲೇಖಿಸುವ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 10 JUN 2026 9:52PM by PIB Bengaluru

ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡಿದ್ದಾರೆ.

ಭಾರತಾನ್ವೇಷಣೆಯ ಕಲ್ಪನೆಯಿಂದ ಭಾರತದ ಮೇಲೆ ಆಳವಾದ ನಂಬಿಕೆಯನ್ನು ನಿರ್ಮಿಸುವವರೆಗೆ ಕಳೆದ 12 ವರ್ಷಗಳು ಹೇಗೆ ನಿರ್ಣಾಯಕ ಬದಲಾವಣೆಯನ್ನು ಕಂಡಿವೆ ಎಂಬುದನ್ನು ಈ ಲೇಖನವು ಪ್ರತಿಬಿಂಬಿಸುತ್ತದೆ. ಶ್ರೀ ನರೇಂದ್ರ ಮೋದಿಯವರ ನಿರಂತರ ಅಧಿಕಾರಾವಧಿಯ ಶಾಶ್ವತ ಯಶಸ್ಸು ಭಾರತದ ಪರಿವರ್ತನಾ ಪ್ರಯಾಣವನ್ನು ಮುನ್ನಡೆಸುವಾಗ ಜನರ ಬಲವಾದ ನಂಬಿಕೆಯ ಬಂಧವನ್ನು ಹೇಗೆ ಉಳಿಸಿಕೊಂಡಿದೆ ಎಂದು ಈ ಲೇಖನವು ಮತ್ತಷ್ಟು ಗಮನಸೆಳೆದಿದೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಮಾಜಿ ರಾಷ್ಟ್ರಪತಿ ಶ್ರೀ @ramnathkovind ರವರ ಈ ಲೇಖನವು ಭಾರತದ ಅತ್ಯಂತ ದೀರ್ಘಾವಧಿಯ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಮಂತ್ರಿಯವರನ್ನು ಅಭಿನಂದಿಸುತ್ತದೆ. ಜೊತೆಗೆ ಕಳೆದ 12 ವರ್ಷಗಳು ಭಾರತವನ್ನು ಅನ್ವೇಷಿಸುವ ಕಲ್ಪನೆಯಿಂದ ಭಾರತದ ಮೇಲೆ ಆಳವಾದ ನಂಬಿಕೆಯನ್ನು ನಿರ್ಮಿಸುವತ್ತ ನಿರ್ಣಾಯಕ ಬದಲಾವಣೆಯನ್ನು ಹೇಗೆ ಗುರುತಿಸಿವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅವರ ಈ ಲೇಖನವು ಪ್ರಧಾನಮಂತ್ರಿ ಮೋದಿಯವರ ನಿರಂತರ ಯಶಸ್ಸು ಭಾರತವನ್ನು ಪರಿವರ್ತನೆಯತ್ತ ಮುನ್ನಡೆಸುತ್ತಾ, ಜನರೊಂದಿಗೆ ಬಲವಾದ ನಂಬಿಕೆಯ ಉಳಿಸಿಕೊಳ್ಳುವಲ್ಲಿ ಹೇಗೆ ಸಫಲಗೊಂಡಿದೆ ಎಂದು ಉಲ್ಲೇಖಿಸುತ್ತದೆ ಎಂಬುದನ್ನು ಉಲ್ಲೇಖಿಸಿದೆ."

 

*****


(रिलीज़ आईडी: 2272088) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam