ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವದ ಎಲ್ಲಾ ನಾಯಕರು ಮತ್ತು ನಾಗರಿಕರ ಆತ್ಮೀಯ ಹಾಗೂ ಹೃತ್ಪೂರ್ವಕವಾದ ಶುಭಾಶಯಗಳಿಗೆ ಪ್ರಧಾನಮಂತ್ರಿಯವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
प्रविष्टि तिथि:
10 JUN 2026 11:50PM by PIB Bengaluru
ಪ್ರಧಾನಮಂತ್ರಿಯವರು ವಿಶ್ವದ ಎಲ್ಲಾ ನಾಯಕರು ಮತ್ತು ಎಲ್ಲಾ ವರ್ಗದ ಜನರಿಗೆ ಅವರ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳಿಗಾಗಿ ತಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶುಭಾಶಯಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಭಾರತಕ್ಕೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯ ಹಾದಿಯಲ್ಲಿ ಕೊಡುಗೆ ನೀಡುವುದು ತಮ್ಮ ಒಂದು ಸೌಭಾಗ್ಯ ಎಂದು ಹೇಳಿದರು. ಜನರ ನಂಬಿಕೆಯೇ ತಮ್ಮ ಶಕ್ತಿಯ ದೊಡ್ಡ ಮೂಲ ಎಂದು ಒತ್ತಿ ಹೇಳಿದ ಪ್ರಧಾನಿಯವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಭಾರತದ ಜಾಗತಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡುವ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು.
Xನ ಸರಣಿ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿಯವರು ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ:
"ಅಧ್ಯಕ್ಷರಾದ ಬೋಲಾ ಅಹ್ಮದ್ ಟಿನುಬು ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಸ್ನೇಹ ಮತ್ತು ಭಾರತ ಮತ್ತು ನೈಜೀರಿಯಾ ದೇಶಗಳಾ ನಡುವಿನ ಬಲವಾದ ಪಾಲುದಾರಿಕೆಯನ್ನು ನಾನು ತುಂಬಾ ಗೌರವಿಸುತ್ತೇನೆ. ಒಟ್ಟಾರೆ, ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿ ಹಾಗೂ ಜಾಗತಿಕ ದಕ್ಷಿಣದ ಪ್ರಗತಿಗಾಗಿ ನಾವು ಕೆಲಸ ಮಾಡುವುದನ್ನು ಮುಂದುವರೆಸೋಣ.
@officialABAT"
"ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಹೃದಯದಾಳದ ಮಾತುಗಳಿಗೆ ಧನ್ಯವಾದಗಳು.
ಭಾರತ ಮತ್ತು ಮಲೇಷ್ಯಾ ನಡುವಿನ ಬಲವಾದ ಮತ್ತು ಶಾಶ್ವತವಾದ ಸ್ನೇಹವನ್ನು ನಾನು ತುಂಬಾ ಗೌರವಿಸುತ್ತೇನೆ. ನಮ್ಮ ಜನರು ಮತ್ತು ಉಭಯ ದೇಶದ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಹಾತುರದಿಂದ ಕಾಯುತ್ತಿದ್ದೇನೆ.
@anwaribrahim"
"ಅಧ್ಯಕ್ಷರಾದ ದಿಸಾನಾಯಕೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಭಾರತವು ಶ್ರೀಲಂಕಾದೊಂದಿಗಿನ ತನ್ನ ಶಾಶ್ವತ ಸ್ನೇಹವನ್ನು ಬಹಳವಾಗಿ ಗೌರವಿಸುತ್ತದೆ. ಹಾಗೂ ಭಾರತವು ನಮ್ಮ ವಿಶೇಷ ಮತ್ತು ಬಹುಮುಖ ಪಾಲುದಾರಿಕೆಯನ್ನು ಮುಂದುವರಿಸಲು ಬದ್ಧವಾಗಿದೆ.
@anuradisanayake"
"ಅಧ್ಯಕ್ಷರಾದ ಮುಯಿಝು, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಉಭಯ ದೇಶದ ಜನರ ಅನುಕೂಲಕ್ಕಾಗಿ ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರದ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ.
@MMuizzu"
"ಅಧ್ಯಕ್ಷರಾದ ವಿಲಿಯಂ ರುಟೊ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತವು ಕೀನ್ಯಾದೊಂದಿಗಿನ ತನ್ನ ಐತಿಹಾಸಿಕ ಸಂಬಂಧಗಳು ಮತ್ತು ಬಲವಾದ ಪಾಲುದಾರಿಕೆಯನ್ನು ಸಮಾನವಾಗಿ ಗೌರವಿಸುತ್ತದೆ. ಉಭಯ ದೇಶಗಳು ಮತ್ತು ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಸದಾ ಎದುರು ನೋಡುತ್ತಿದ್ದೇನೆ.
@WilliamsRuto"
"ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ಅಧ್ಯಕ್ಷ ಕೋಸ್ಟಾ. ಭಾರತವು ಯುರೋಪಿಯನ್ ಒಕ್ಕೂಟದೊಂದಿಗಿನ ತನ್ನ ಕಾರ್ಯತಂತ್ರದ ಪಾಲುದಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ, ಮುಂಬರುವ ದಿನಗಳಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಬದ್ದರಾಗಿ ಎದುರು ನೋಡುತ್ತಿದ್ದೇವೆ.
@eucopresident"
"ಪ್ರಧಾನಿ ಮೆಲೋನಿಯವರೇ ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ನಮ್ಮ ಉಭಯ ರಾಷ್ಟ್ರಗಳು ಮತ್ತು ಜನರ ಪರಸ್ಪರ ಪ್ರಯೋಜನಕ್ಕಾಗಿ ಭಾರತ ಮತ್ತು ಇಟಲಿಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಬಲವಾದ ವೇಗವನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ.
@GiorgiaMeloni"
"ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು. ಭಾರತ ಮತ್ತು ಮಂಗೋಲಿಯಾ ಆಳವಾದ ಮತ್ತು ವಿಶೇಷ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನಮ್ಮ ಜನರ ನಡುವಿನ ಶಾಶ್ವತ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾನು ನಿಮ್ಮೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ.
@UKhurelsukh"
"ಪ್ರಧಾನಿ ಅಬಿ ಅಹ್ಮದ್ ಅಲಿ ಅವರೇ ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಕಳೆದ ವರ್ಷ ಇಥಿಯೋಪಿಯಾದಲ್ಲಿ ನಡೆದ ನಮ್ಮ ಭೇಟಿಯು ನನಗೆ ಸವಿನೆನಪಾಗಿದೆ. ನಮ್ಮ ಜನರು ಮತ್ತು ಜಾಗತಿಕ ದಕ್ಷಿಣದ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ನಿಕಟ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
@AbiyAhmedAli"
"ನಿಮ್ಮ ಹೃತ್ಪೂರ್ವಕ ಮಾತುಗಳಿಗೆ ಧನ್ಯವಾದಗಳು ಅಧ್ಯಕ್ಷ ವಾನ್ ಡೆರ್ ಲೇಯೆನ್. ವ್ಯಾಪಾರ, ತಂತ್ರಜ್ಞಾನ, ಚಲನಶೀಲತೆ ಮತ್ತು ಭದ್ರತೆ ಸೇರಿದಂತೆ ಬಹು ವಲಯಗಳಲ್ಲಿ ಭಾರತ-ಯುರೋಪ್ ಒಕ್ಕೂಟ ಪಾಲುದಾರಿಕೆಯು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ಉಭಯ ದೇಶದ ಜನರು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ನಾವು ಒಟ್ಟಾಗಿ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸೋಣ.
@vonderleyen"
"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನಿ ಮಿಟ್ಸೋಟಾಕಿಸ್ ಅವರೇ ನಿಮಗೆ ಧನ್ಯವಾದಗಳು.
ಗ್ರೀಸ್‌ನೊಂದಿಗೆ ತನ್ನ ಮೌಲ್ಯಯುತ ಕಾರ್ಯತಂತ್ರ ಮತ್ತು ಬಹುಮುಖಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಭಾರತವು ಬದ್ಧವಾಗಿದೆ.
@PrimeministerGR"
"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಅಧ್ಯಕ್ಷರಾದ ಕ್ರಿಸ್ಟೋಡೌಲೈಡ್ಸ್ ಅವರೇ ನಿಮಗೆ ಧನ್ಯವಾದಗಳು.
ನಿಮ್ಮ ಇತ್ತೀಚಿನ ಭಾರತ ಭೇಟಿಯನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಭಾರತ ಮತ್ತು ಸೈಪ್ರಸ್ ನಡುವಿನ ಕಾಲನಿರ್ಣಯ ಸ್ನೇಹ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಮ್ಮ ಬದ್ಧತೆಯನ್ನು ಸಂಪೂರ್ಣವಾಗಿ ಸಮ್ಮತಿಸುತ್ತೇನೆ.
@Christodulides"
"ನಿಮ್ಮ ಆತ್ಮೀಯ ಮಾತುಗಳಿಗೆ ಚಾನ್ಸೆಲರ್ ಮೆರ್ಜ್ ಅವರೇ ನಿಮಗೆ ಧನ್ಯವಾದಗಳು.
ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಉಭಯ ದೇಶದ ಜನರ ಪ್ರಯೋಜನಕ್ಕಾಗಿ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಅಭಿವೃದ್ದಿ ಪಡಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.
@bundeskanzler"
"ಪ್ರಧಾನಿ ಕಾರ್ನಿಯವರೇ, ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಉಭಯ ದೇಶದ ಜನರ ಪ್ರಯೋಜನಕ್ಕಾಗಿ ಭಾರತ-ಕೆನಡಾ ಪಾಲುದಾರಿಕೆಯು ಹೊಸ ಉನ್ನತಿಯನ್ನು ಸಾಧಿಸಲಿದೆ ಎಂದು ನನಗೆ ವಿಶ್ವಾಸವಿದೆ.
@MarkJCarney"
"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನಿ ಫ್ರೆಡೆರಿಕ್ಸೆನ್ ಅವರೇ ನಿಮಗೆ ಧನ್ಯವಾದಗಳು.
3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ನಮ್ಮ ಇತ್ತೀಚಿನ ಭೇಟಿಯ ಆಧಾರದ ಮೇಲೆ, ನಮ್ಮ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಭಾರತವು ಸಂಪೂರ್ಣವಾಗಿ ಬದ್ಧವಾಗಿದೆ."
"माननीय राष्ट्रपति ली जे-म्युंग जी, आपकी शुभकामनाओं के लिए बहुत-बहुत धन्यवाद।
भारत भी दक्षिण कोरिया के साथ अपनी विशेष साझेदारी को अत्यंत महत्व देता है। मुझे विश्वास है कि हम साथ मिलकर अपने सहयोग को नई ऊँचाइयों तक ले जाएंगे।
@Jaemyung_Lee"
"ನನ್ನ ಸ್ನೇಹಿತರೆ, ನಿಮ್ಮ ಅತ್ಯಂತ ಉದಾತ್ತ ಶುಭಾಶಯಗಳಿಗೆ ಧನ್ಯವಾದಗಳು.
ನಾನು ನಿಮ್ಮೊಂದಿಗೆ ಸಂಪೂರ್ಣವಾಗಿ ಸಮ್ಮತಿಸುತ್ತೇನೆ. ಭಾರತ ಮತ್ತು ಇಸ್ರೇಲ್ ದೇಶಗಳ ಸ್ನೇಹವು ಮುಂಬರುವ ವರ್ಷಗಳಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ.
@ @IsraeliPM
@netanyahu"
"ಇಂದು ಮತ್ತು ಕಳೆದ ಹಲವಾರು ದಿನಗಳಿಂದ ಎಲ್ಲಾ ವರ್ಗದ ಜನರು ವ್ಯಕ್ತಪಡಿಸಿದ ಶುಭ ಹಾರೈಕೆಗಳಿಂದ ನಾನು ತುಂಬಾ ಪುಳಕಿತನಾಗಿದ್ದೇನೆ. ಪ್ರತಿಯೊಂದು ಸಂದೇಶಕ್ಕೂ ನಾನು ಪ್ರತ್ಯೇಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೂ, ತಾವು ಕಳುಹಿಸಿದ ಪ್ರತಿಯೊಂದು ಶುಭಾಶಯವನ್ನು ನಾನು ಗೌರವಿಸುತ್ತೇನೆ.
ಭಾರತಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿ ಪ್ರಯಾಣಕ್ಕೆ ಕೊಡುಗೆ ನೀಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಗ್ಯವೆಂದು ನಾನು ಭಾವಿಸುತ್ತೇನೆ. ಕಳೆದ ವರ್ಷಗಳಲ್ಲಿ, ಭಾರತದ ಜನರು ಸ್ಥಿರತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಪದೇ ಪದೇ ಮತ ಚಲಾಯಿಸಿದ್ದಾರೆ. ಅವರ ನಂಬಿಕೆಯೇ ನನ್ನ ಶಕ್ತಿಯ ದೃಡ ಮೂಲವಾಗಿದೆ. ವೀಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡಲು ನಾನು ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ."
"ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಧನ್ಯವಾದಗಳು, ನನ್ನ ಸ್ನೇಹಿತ.
ಭಾರತ ಮತ್ತು ಕೆನಡಾ ದೇಶಗಳ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲು ಬದ್ಧರಾಗಿದ್ದೇವೆ.
@stephenharper"
"ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಧನ್ಯವಾದಗಳು ಶ್ರೀ ರಬಿ ಲಮಿಚಾನೆ
ನೇಪಾಳದೊಂದಿಗಿನ ನಮ್ಮ ವಿಶೇಷ ಪಾಲುದಾರಿಕೆಯನ್ನು ನಾವು ತುಂಬಾ ಗೌರವಿಸುತ್ತೇವೆ ಮತ್ತು ನಮ್ಮ ಬಹುಮುಖಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿದ್ದೇವೆ.
@hamrorabi"
"ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ರಿಷಿ ಸುನಕ್.
ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಭಾರತ ದೇಶವು ಯುಕೆ ಜೊತೆ ಕೆಲಸ ಮಾಡಲು ಬದ್ಧವಾಗಿದೆ.
@RishiSunak"
" ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರೇ ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ನಮ್ಮ ಸಂಬಂಧಗಳಿಗೆ ಮತ್ತಷ್ಟು ವೇಗವನ್ನು ನೀಡಿದ ನನ್ನ ಇತ್ತೀಚಿನ ಸ್ವೀಡನ್ ಭೇಟಿಯು ನನಗೆ ಸವಿನೆನಪಾಗಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಭಾರತವು ಪ್ರಬಲವಾಗಿ ಬದ್ಧವಾಗಿದೆ.
@SwedishPM"
"ಅಧ್ಯಕ್ಷರಾದ ಟ್ರಂಪ್, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ನಮ್ಮ ಉಭಯ ದೇಶಗಳು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಸದಾ ಸಿದ್ದನಿದ್ದೇನೆ.
@POTUS
@realDonaldTrump"
"ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಪ್ರಧಾನಿ ತ್ಸೆರಿಂಗ್ ಟೋಬ್ಗೇ ಅವರೇ ನಿಮಗೆ ಧನ್ಯವಾದಗಳು. ನಾನು ನಮ್ಮ ಸ್ನೇಹವನ್ನು ಗೌರವಿಸುತ್ತೇನೆ ಮತ್ತು ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸಂಬಂಧವನ್ನು ಆಳವಾಗಿ ಪ್ರೀತಿಸುತ್ತೇನೆ.
ಮುಂದಿನ ವರ್ಷಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಸದಾ ಎದುರು ನೋಡುತ್ತಿದ್ದೇನೆ.
@tsheringtobgay"
"ನಿಮ್ಮ ಆತ್ಮೀಯ ಶುಭಾಶಯಗಳಿಗೆ ಪ್ರಧಾನಿ ಲಾರೆನ್ಸ್ ವಾಂಗ್ ಅವರೇ ನಿಮಗೆ ಧನ್ಯವಾದಗಳು. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಮತ್ತು ಭಾರತ-ಸಿಂಗಾಪುರ ಸಂಬಂಧಗಳನ್ನು ಹೊಸ ಉನ್ನತಿಗೆ ಕೊಂಡೊಯ್ಯಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಸದಾ ಸಿದ್ದನಿದ್ದೇನೆ. @LawrenceWongST"
"ನಿಮ್ಮ ಹೃತ್ಪೂರ್ವಕ ಮಾತುಗಳು ಮತ್ತು ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು, ಅಧ್ಯಕ್ಷರಾದ ಡಾ. ಇರ್ಫಾನ್ ಅಲಿ ಅವರೇ. ಭಾರತ ಮತ್ತು ಗಯಾನಾದ ಉಭಯ ಜನರ ಪ್ರಯೋಜನಕ್ಕಾಗಿ ನಮ್ಮ ಸಹಕಾರವನ್ನು ಮುಂದುವರಿಸಲು ನಾನು ಸದಾ ಸಿದ್ದನಿದ್ದೇನೆ. @presidentaligy”
*****
(रिलीज़ आईडी: 2271535)
आगंतुक पटल : 7